ಸಾರಾಂಶ
ಕನ್ನಡಪ್ರಭ ವಾರ್ಯೆ ಪಾಂಡವಪುರ
ತಾಲೂಕು ವಕೀಲರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಆಯ್ಮೆ ಬಯಸಿ ವಕೀಲ ಕಣಿವೆ ಯೋಗೇಶ್ ಚುನಾವಣಾಧಿಕಾರಿ ಶಿವಪ್ಪ ಅವರಿಗೆ ನಾಮಪತ್ರ ಸಲ್ಲಿಸಿದರು.ಕಳೆದ 25 ವರ್ಷಗಳಿಂದಲೂ ವಕೀಲರಾಗಿ ಕಾರ್ಯನಿರ್ವಹಿಸುತ್ತಿರುವ ಕಣಿವೆ ಯೋಗೇಶ್ ಇದೇ ಪ್ರಥಮ ಬಾರಿಗೆ ವಕೀಲರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಬಯಸಿ ಅಧಿಕೃತವಾಗಿ ನಾಮಪತ್ರ ಸಲ್ಲಿಸಿದ್ದಾರೆ. ಆ ಮೂಲಕ ಮೇ 24ರಂದು ನಡೆಯಲಿರುವ ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ.
ವಕೀಲ, ಟಿಎಪಿಸಿಎಂಎಸ್ ನಿರ್ದೇಶಕರು ಆಗಿರುವ ಕಣಿವೆ ಯೋಗೇಶ್, ಲಾಯರ್ಸ್ ಸಿಟಿಜನ್ಸ್ ಫಾರ್ ಜಸ್ಟೀಸ್ ರಾಜ್ಯ ಉಪಾಧ್ಯಕ್ಷರು ಹಾಗೂ ರಾಷ್ಟ್ರೀಯ ದಲಿತ ಸೇನೆ ರಾಜ್ಯ ಉಪಾಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.ಪ್ರಗತಿಪರ, ಬಹುಮುಖ ಪ್ರತಿಭೆ ಹೊಂದಿರುವ ಕಣಿವೆ ಯೋಗೇಶ್, ಜಾನಪದ, ಪೌರಾಣಿಕ ನಾಟಕದಲ್ಲಿ ಅಭಿನಯ, ಹಾಸ್ಯ, ಏಕಪಾತ್ರಾಭಿನಯ ಹಾಗೂ ಸ್ಥಳದಲ್ಲೇ ಹಾಡು ರಚನೆ ಮಾಡುವಲ್ಲಿ ನಿಸ್ಸಿಮರಾಗಿದ್ದಾರೆ. ಶಕುನಿ ಪಾತ್ರದಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದಾರೆ. ನಾಮಪತ್ರ ಸಲ್ಲಿಕೆ ವೇಳೆ ವಕೀಲರಾದ ಕಿರಣ್ ಸೂಚಕರಾಗಿ ಸಹಿ ಹಾಕಿ ಬೆಂಬಲಿಸಿದರು. ಈ ವೇಳೆ ಹಲವರು ವಕೀಲರು ಇತರರಿದ್ದರು.
ಮದಕರಿ ನಾಯಕ ಸ್ಮಾರಕ ನಿರ್ಮಾಣಕ್ಕಾಗಿ ಪಾದಯಾತ್ರೆಕನ್ನಡಪ್ರಭ ವಾರ್ತೆ ಮಂಡ್ಯ
ಶ್ರೀರಾಜ ವೀರಮದಕರಿ ನಾಯಕರ ಸ್ಮಾರಕ ನಿರ್ಮಾಣ ವೇದಿಕೆಯಿಂದ ಮೇ ೧೫ರಂದು ಬೆಳಗ್ಗೆ ೧೧ ಗಂಟೆಗೆ ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿಯಲ್ಲಿ ಮದಕರಿ ನಾಯಕರ ಸ್ಮಾರಕ ನಿರ್ಮಾಣಕ್ಕೆ ಒತ್ತಾಯಿಸಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಸ್ಮಾರಕ ನಿರ್ಮಾಣ ವೇದಿಕೆ ಸಂಚಾಲಕ ಪ್ರಸನ್ನ ತಿಳಿಸಿದರು.ಮದಕರಿ ನಾಯಕರು ಸಮಾಧಿಯಾದ ಸ್ಥಳವನ್ನು ಸಂರಕ್ಷಣೆ ಮಾಡಿ, ಅವರ ಸಾಧನೆಯ ಕುರುಹುಗಳು ಇರುವಲ್ಲಿ ಸ್ಮಾರಕ ನಿರ್ಮಿಸಲು ಸರ್ಕಾರವನ್ನು ಒತ್ತಾಯಿಸುವುದು ವೇದಿಕೆಯ ಧ್ಯೇಯವಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.ಮದಕರಿ ನಾಯಕರು ಶ್ರೀರಂಗಪಟ್ಟಣದಲ್ಲಿ ನಿಧನರಾದ ಕಾರಣ ಪಶ್ಚಿಮ ವಾಹಿನಿಯಲ್ಲಿ ಅವರ ಸ್ಮಾರಕ ನಿರ್ಮಿಸುವಂತೆ ಇಲ್ಲಿನ ತಾಲೂಕು ಹಾಗೂ ಜಿಲ್ಲಾಡಳಿತವನ್ನು ಒತ್ತಾಯಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣದಿಂದ ಪಶ್ಚಿಮ ವಾಹಿನಿಯವರಗೆ ಪಾದಯಾತ್ರೆ ಮೂಲಕ ತೆರಳಿಗೆ ಮಧ್ಯಾಹ್ನ ೧೨ ಗಂಟೆಗೆ ದೊರೆಗಳ ಪುಣ್ಯಸ್ಮರಣೆ ಮಾಡಲಾಗುವುದು ಎಂದರು.
ಮದಕರಿ ನಾಯಕರ ವಂಶಸ್ಥರನ್ನು ಸಮಾಧಿ ಮಾಡಿರುವ ಸ್ಥಳದಲ್ಲೇ ಅವುಗಳನ್ನು ಪುನರುಜ್ಜೀವನಗೊಳಿಸಿ, ಸಮಾಧಿ ಇಲ್ಲದ ಕಡೆಗಳಲ್ಲಿ ಅವರುಗಳ ಸ್ಮಾರಕ ನಿರ್ಮಿಸುವಂತೆ ಸರ್ಕಾರವನ್ನು ಆಗ್ರಹಿಸಿದರು.ಬಜರಂಗದಳದ ರಾಜ್ಯಾಧ್ಯಕ್ಷ ಮಂಜುನಾಥ್, ಜೈ ಮಾರುತಿ ಸೇವಾಟ್ರಸ್ಟ್‌ನ ಜಿಲ್ಲಾಧ್ಯಕ್ಷ ಮಾದೇಗೌಡ, ಶ್ರೀರಂಗಪಟ್ಟಣ ಪುರಸಭೆ ಸದಸ್ಯ ವಿ.ಶ್ರೀನಿವಾಸ್, ವೇದಿಕೆಯ ರಂಗಸ್ವಾಮಿ ನಾಯಕ ಅವರು ಗೋಷ್ಠಿಯಲ್ಲಿದ್ದರು.