ಕನ್ನಡ ಬೆಳಸುವಂತ ಕೆಲಸ ಗ್ರಾಮದಿಂದ ಆಗುತ್ತಿದೆ: ವೈ.ಎಸ್. ರಾಮಸ್ವಾಮಿ

| Published : Dec 03 2024, 12:32 AM IST

ಕನ್ನಡ ಬೆಳಸುವಂತ ಕೆಲಸ ಗ್ರಾಮದಿಂದ ಆಗುತ್ತಿದೆ: ವೈ.ಎಸ್. ರಾಮಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಇಂದು ಜಿಲ್ಲಾ ಪ್ರದೇಶದಲ್ಲಿ ಬೆಳವಣಿಗೆ ಕಂಡಂತೆ ಕನ್ನಡದ ಮೇಲಿನ ಅಭಿಮಾನ ಕಡಿಮೆ ಆಗುತ್ತಿದೆ. ಸಾವಿರಾರು ವರ್ಷಗಳ ಇತಿಹಾಸ ಇರುವ ಭಾಷೆಯನ್ನು ಬೆಳೆಸುವ ಕಾರ್ಯಕ್ರಮ ಇಂದು ಹಳ್ಳಿಯಲ್ಲಿ ಮಾಡುವಂತ ಈ ತರಹದ ಕಾರ್ಯಕ್ರಮದಿಂದ ಜೀವಂತವಾಗಿದೆ.

ಕನ್ನಡಪ್ರಭ ವಾರ್ತೆ ಬನ್ನೂರು

ಕನ್ನಡವನ್ನು ಉಳಿಸಿ ಬೆಳಸುವ ಕಾರ್ಯಕ್ರಮಗಳು ಗ್ರಾಮೀಣ ಭಾಗದಿಂದ ಹೆಚ್ಚಾಗಿ ಅಗುತ್ತಿದೆ ಎಂದು ಸಮಾಜ ಸೇವಕ ವೈ.ಎಸ್. ರಾಮಸ್ವಾಮಿ ತಿಳಿಸಿದರು.

ಪಟ್ಟಣ ಸಮೀಪದ ಯಾಚೇನಹಳ್ಳಿಯಲ್ಲಿ ನಡೆದ ಕಾವೇರಿ ಸಂಭ್ರಮ ಮತ್ತು ಸುವರ್ಣ ಕರ್ನಾಟಕ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪಶು ವೈದ್ಯ ಡಾ. ಲಿಂಗರಾಜು ಅವರನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಿ ಅವರು ಮಾತನಾಡಿದರು.

ಇಂದು ಜಿಲ್ಲಾ ಪ್ರದೇಶದಲ್ಲಿ ಬೆಳವಣಿಗೆ ಕಂಡಂತೆ ಕನ್ನಡದ ಮೇಲಿನ ಅಭಿಮಾನ ಕಡಿಮೆ ಆಗುತ್ತಿದೆ. ಸಾವಿರಾರು ವರ್ಷಗಳ ಇತಿಹಾಸ ಇರುವ ಭಾಷೆಯನ್ನು ಬೆಳೆಸುವ ಕಾರ್ಯಕ್ರಮ ಇಂದು ಹಳ್ಳಿಯಲ್ಲಿ ಮಾಡುವಂತ ಈ ತರಹದ ಕಾರ್ಯಕ್ರಮದಿಂದ ಜೀವಂತವಾಗಿದೆ ಎಂದು ತಿಳಿಸಿದರು.

ಕನ್ನಡದ ನೆಲದ ಪ್ರತಿಭೆಯನ್ನು ಗುರುತಿಸಿ, ಕನ್ನಡ ನಾಡಿನ ಸೊಗಡನ್ನು ಮುಂದಿನ ಪೀಳಿಗೆಗೆ ತಿಳಿಸಿ, ಗ್ರಾಮೀಣ ಆಟೋಟಗಳನ್ನು ಮಕ್ಕಳಿಗೆ ತಿಳಿಸುವ ಮೂಲಕ ನಮ್ಮ ತನವನ್ನು ಉಳಿಸಿ ಬೆಳಸಬೇಕಿದೆ ಎಂದು ಅವರು ಕರೆ ನೀಡಿದರು.

ಇಂತಹ ಕೆಲಸವನ್ನು ಗ್ರಾಮೀಣ ಭಾಗದಲ್ಲಿ ವೈ.ಎನ್. ಶಂಕರೇಗೌಡ ನಿರಂತರವಾಗಿ ಮಾಡುತ್ತಾ ಕನ್ನಡಾಂಭೆಗೆ ಗೌರವ ಸಲ್ಲಿಸುತ್ತಾ ಬಂದಿದ್ದಾರೆ ಎಂದರು.

ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವೈ.ಎನ್. ಶಂಕರೇಗೌಡ, ಹನುಮಂತೇಗೌಡ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ವೈ.ಡಿ. ರಾಜಣ್ಣ, ಡಾ. ನಂಜುಂಡಸ್ವಾಮಿ, ಸಾಹಿತಿ ಜಯಪ್ಪ ಹೊನ್ನಾಳಿ, ಕ್ಯಾತೇಗೌಡ, ಗ್ರಾಪಂ ಅಧ್ಯಕ್ಷ ಶಿವಕುಮಾರ್ ಸೇರಿದಂತೆ ಹಲವರು ಇದ್ದರು.