ಸಾರಾಂಶ
ಶಿರೂರು ಗುಡ್ಡ ಕುಸಿತದಲ್ಲಿ ಮನೆ-ಮಠ ಕಳೆದುಕೊಂಡು ನಿರಾಶ್ರಿತರಾದ ಐದು ಕುಟುಂಬಗಳಿಗೆ ರಾಜ್ಯ ಸರಕಾರಿ ನೌಕರರ ಸಂಘ ಅಂಕೋಲಾ ಘಟಕದಿಂದ ತಲಾ ಐದು ಸಾವಿರದಂತೆ ಚೆಕ್‌ಗಳನ್ನು ನೀಡಿ ಸಾಂತ್ವನ ಹೇಳಿದರು
ಅಂಕೋಲಾ: ನಮ್ಮ ಸುತ್ತಲಿನ ಸಮಾಜ ಸಂಕಷ್ಟದಲ್ಲಿದ್ದಾಗ, ಸಂತ್ರಸ್ತರಾದಾಗ ಮಾನವೀಯ ನೆಲೆಯಲ್ಲಿ ಸ್ಪಂದಿಸುವುದು ಸಂಘಗಳ ಆದ್ಯ ಕರ್ತವ್ಯಗಳ್ಲೊಂದಾಗಿದೆ. ನಮ್ಮ ಸೇವೆ ಚಿಕ್ಕದಿರಬಹುದು. ಆದರೆ, ನಿಮ್ಮೊಂದಿಗೆ ಭರವಸೆಯಾಗಿ ಯಾವಾಗಲೂ ಇದ್ದೇವೆ, ಮುಂದೆಯೂ ಇರುತ್ತೇವೆ ಎಂದು ರಾಜ್ಯ ಸರಕಾರಿ ನೌಕರರ ಸಂಘ ತಾಲೂಕು ಘಟಕದ ಅಧ್ಯಕ್ಷ ಬಾಲಚಂದ್ರ ನಾಯಕ ಹೇಳಿದರು.
ಶಿರೂರು ಗುಡ್ಡ ಕುಸಿತದಲ್ಲಿ ಮನೆ-ಮಠ ಕಳೆದುಕೊಂಡು ನಿರಾಶ್ರಿತರಾದ ಐದು ಕುಟುಂಬಗಳಿಗೆ ರಾಜ್ಯ ಸರಕಾರಿ ನೌಕರರ ಸಂಘ ಅಂಕೋಲಾ ಘಟಕದಿಂದ ತಲಾ ಐದು ಸಾವಿರದಂತೆ ಚೆಕ್‌ಗಳನ್ನು ನೀಡಿ ಸಾಂತ್ವನ ಹೇಳಿದರು. ಅದರ ಜೊತೆಯಲ್ಲಿ ಉಳುವರೆ ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿಗಳನ್ನು ನೀಡಿ, ಭವಿಷ್ಯಕ್ಕೆ ಭರವಸೆ ತುಂಬುವ ಕಾರ್ಯಗಳಲ್ಲಿ ನಮ್ಮದೊಂದು ಅಳಿಲು ಸೇವೆ ಎಂದು ಶುಭ ಹಾರೈಸಿದರು.ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಅಂಕೋಲಾ ಘಟಕದ ಅಧ್ಯಕ್ಷ ಜಗದೀಶ ಜಿ. ನಾಯಕ ಹೊಸ್ಕೇರಿ, ಸರಕಾರಿ ನೌಕರ ಸಂಘದ ಕಾರ್ಯದರ್ಶಿ ಪ್ರಮೋದ ದೊಡ್ಮನಿ, ಸದಸ್ಯರಾದ ಮಂಜುನಾಥ ನಾಯಕ, ಸಂಜೀವ ನಾಯ್ಕ, ಗೋಪಾಲ ಗೌಡ, ಪಿಡಿಒ ಸಂದೀಪ ನಾಯಕ, ಗ್ರಾಪಂ ಸದಸ್ಯರಾದ ಕೃಷ್ಣ ಗೌಡ, ಮುಖ್ಯಾಧ್ಯಾಪಕಿ ಮಹಾದೇವಿ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿಕ್ಷಕಿ ಸಂಧ್ಯಾ ನಾಯ್ಕ ಸ್ವಾಗತಿಸಿದರು. ಖಜಾಂಚಿ ಗಿರೀಶ ನಾಯಕ ಪ್ರಾಸ್ತಾವಿಕ ಮಾತನಾಡಿದರು. ರಾಜೇಶ ನಾಯಕ ವಂದಿಸಿದರು.