ಕನ್ನಡ ಎಂಬುದು ಬದುಕು, ತಿಳಿವಿನ ಬೆಳಕು: ಡಾ.ವಿಜಯಾದೇವಿ

| Published : Nov 30 2023, 01:15 AM IST

ಕನ್ನಡ ಎಂಬುದು ಬದುಕು, ತಿಳಿವಿನ ಬೆಳಕು: ಡಾ.ವಿಜಯಾದೇವಿ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಪಿ.ಭಾರತಿದೇವಿ ಮಾತನಾಡಿ, ರಾಜ್ಯಕ್ಕೆ ಕರ್ನಾಟಕ ಎಂಬ ಹೆಸರು ಬಂದು ಐವತ್ತು ವರ್ಷಗಳಾಗಿವೆ. ಇದು ಸಂಭ್ರಮದ ಜೊತೆಗೆ ಅವಲೋಕನ ಮತ್ತು ಮುನ್ನೋಟ ಹರಿಸುವ ಹೊತ್ತು. ಶ್ರೀವಿಜಯನಿಂದ ಹಿಡಿದು ಕುವೆಂಪುವರೆಗೆ ಎಲ್ಲರೂ ಸಹಿಷ್ಣುತೆ ಮತ್ತು ಸಮನ್ವಯವನ್ನು ಒತ್ತಿ ಹೇಳಿದ್ದಾರೆ ಎಂದರು.

ಹೊಳೆಹೊನ್ನೂರು: ಕನ್ನಡ ಎನ್ನುವುದು ಬರೀ ಸಂವಹನದ ಭಾಷೆಯಲ್ಲ, ಅದು ಬದುಕು, ನಮ್ಮ ಪರಂಪರೆಯ ಸ್ಮೃತಿಗಳನ್ನೊಳಗೊಂಡ ತಿಳಿವಿನ ಬೆಳಕು ಎಂದು ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪ್ರೊಫೆಸರ್‌ ಡಾ.ವಿಜಯಾದೇವಿ ಹೇಳಿದರು.

ಇಲ್ಲಿಗೆ ಸಮೀಪದ ಹೊಳೆಹೊನ್ನೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ʼಕನ್ನಡ ಹಬ್ಬʼ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕದ ಏಕೀಕರಣಕ್ಕಾಗಿ ದುಡಿದ ಆಲೂರು ವೆಂಕಟರಾಯರು, ಬೆನಗಲ್‌ ರಾಮರಾಯರು ಮುಂತಾದವರ ಜೊತೆ ಅನೇಕ ಉದಾತ್ತ ಮಹಿಳೆಯರ ಪಾತ್ರವೂ ಇದೆ. ಚರಿತ್ರೆಯಲ್ಲಿ ಮುನ್ನೆಲೆಗೆ ಬರದ ಮಹಿಳೆಯರ ಸಾಧನೆಯನ್ನು ಸ್ಮರಿಸುವ ಅಗತ್ಯವನ್ನು ಒತ್ತಿ ಹೇಳಿದರು. ಗಡಿನಾಡಿನಲ್ಲಿ ಕನ್ನಡದ ಉಳಿವಿಗಾಗಿ ದಿಟ್ಟ ದನಿಯೆತ್ತಿದ ಜಯದೇವಿ ತಾಯಿ ಲಿಗಾಡೆಯಂಥವರ ಬದುಕು ನಮಗೆ ಸ್ಫೂರ್ತಿ ಆಗಬೇಕು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಪಿ.ಭಾರತಿದೇವಿ ಮಾತನಾಡಿ, ರಾಜ್ಯಕ್ಕೆ ಕರ್ನಾಟಕ ಎಂಬ ಹೆಸರು ಬಂದು ಐವತ್ತು ವರ್ಷಗಳಾಗಿವೆ. ಇದು ಸಂಭ್ರಮದ ಜೊತೆಗೆ ಅವಲೋಕನ ಮತ್ತು ಮುನ್ನೋಟ ಹರಿಸುವ ಹೊತ್ತು. ಶ್ರೀವಿಜಯನಿಂದ ಹಿಡಿದು ಕುವೆಂಪುವರೆಗೆ ಎಲ್ಲರೂ ಸಹಿಷ್ಣುತೆ ಮತ್ತು ಸಮನ್ವಯವನ್ನು ಒತ್ತಿ ಹೇಳಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಡಾ.ಪ್ರತಿಭಾ ಕೆ.ಆರ್‌., ಡಾ. ಎಸ್.ರಾಜು ನಾಯ್ಕ್, ಕೆ.ಇ.ಮಂಜುಳ, ಎಚ್.ರುದ್ರಮುನಿ, ಕೆ.ಛಾಯಾಶ್ರೀ, ಆರ್‌.ರವಿ, ಆಸ್ಮಾ ಮೇಲಿನಮನಿ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.

- - - -29ಎಚ್ ಹೆಚ್ ಆರ್ ಪಿ2: