ಸಾರಾಂಶ
ಯಲಬುರ್ಗಾ: ಮಂಡ್ಯದಲ್ಲಿ ನಡೆಯುವ ೮೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ಶ್ರುಕವಾರ ಕನ್ನಡ ಜೋತಿ ರಥಯಾತ್ರೆಯನ್ನು ಪಟ್ಟಣದ ಕನಕದಾಸರ ವೃತ್ತದಲ್ಲಿ ತಾಲೂಕಾಡಳಿತದಿಂದ ಅದ್ಧೂರಿಯಾಗಿ ಸ್ವಾಗತಿಸಿಕೊಳ್ಳಲಾಯಿತು.
ತಾಲೂಕಿನ ಬಂಡಿ, ತುಮ್ಮರಗುದ್ದಿ ಮಾರ್ಗದ ಮೂಲಕ ಶುಕ್ರವಾರ ಪಟ್ಟಣಕ್ಕೆ ಬಂದ ರಥಯಾತ್ರೆಗೆ ಪೂಜೆ ಸಲ್ಲಿಸಿ, ಬಳಿಕ ಮೆರವಣಿಗೆ ಮೂಲಕ ಚೆನ್ನಮ್ಮ ವೃತ್ತದಲ್ಲಿ ಬರಮಾಡಿಕೊಂಡರು.ತಹಸೀಲ್ದಾರ್ ಬಸವರಾಜ ತೆನ್ನಳ್ಳಿ ಮಾತನಾಡಿ, ಪ್ರತಿಯೊಬ್ಬರೂ ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸುವ ಕಾರ್ಯಕ್ಕೆ ಅಣಿಯಾಗಬೇಕು. ನಮ್ಮ ನಾಡು, ನುಡಿ ಕಟ್ಟಿ ಬೆಳೆಸುವ ಕಾರ್ಯಕ್ಕೆ ಯುವಕರು ಮುಂದಾಗಬೇಕು. ಮಾತೃಭಾಷೆಗೆ ಆದ್ಯತೆ ನೀಡಬೇಕು ಎಂದರು. ಬಳಿಕ ರಥಯಾತ್ರೆ ಕುಕನೂರು ಪಟ್ಟಣಕ್ಕೆ ಸಾಗಿತು.
ತಾಪಂ ಇಒ ಸಂತೋಷ ಪಾಟೀಲ್, ಕಸಾಪ ಅಧ್ಯಕ್ಷ ಬಾಲದಂಡಪ್ಪ ತಳವಾರ, ಪಪಂ ಅಧ್ಯಕ್ಷ ಅಂದಯ್ಯ ಕಳ್ಳಿಮಠ, ಮುಖ್ಯಾಧಿಕಾರಿ ನಾಗೇಶ, ಸದಸ್ಯರಾದ ರೇವಣೆಪ್ಪ ಹಿರೇಕುರುಬರ, ಅಮರೇಶ ಹುಬ್ಬಳ್ಳಿ, ಕಳಕಪ್ಪ ತಳವಾರ, ವಸಂತ ಭಾವಿಮನಿ, ಹನುಮಂತ ಭಜಂತ್ರಿ, ರಿಯಾಜ್ ಅಹ್ಮದ್ ಖಾಜಿ, ಅಧಿಕಾರಿಗಳಾದ ಸೋಮ ಶೇಖರಗೌಡ ಪಾಟೀಲ, ಶ್ರೀಧರ ತಳವಾರ, ಶಶಿಧರ ಸಕ್ರಿ, ಶಿವಶಂಕರ ಕರಡಕಲ್ಲ, ಪ್ರಕಾಶ ಚೂರಿ, ಅಶೋಕ ಗೌಡರ, ಗಣ್ಯರಾದ ಡಾ. ಶಿವನಗೌಡ ದಾನರೆಡ್ಡಿ, ಎಸ್.ವಿ. ಧರಣಾ, ಸಿದ್ದಲಿಂಗಪ್ಪ ಶ್ಯಾಗೋಟಿ, ಬಸವರಾಜ ಮಾಸ್ತಿ, ವೈ.ಜಿ. ಪಾಟೀಲ್, ಶರಣಯ್ಯ ಸರಗಣಾಚಾರ್, ಬಸವರಾಜ ಮುಳಗುಂದ, ದೇವರಾಜ ರೆಡ್ಡಿ, ಮಹಾಂತೇಶ ಹಿರೇಮಠ, ಮಲ್ಲಿಕಾರ್ಜುನ ಶಾಸ್ತ್ರಿಮಠ, ಹಸನಸಾಬ, ಮಾರುತಿ ಪೂಜಾರ, ನಾಗರಾಜ ಪಟ್ಟಣಶೆಟ್ಟಿ, ರಾಜಶೇಖರ ಶ್ಯಾಗೋಟಿ, ಶಿವಕುಮಾರ ನಾಗನಗೌಡ, ಭೀಮೇಶ ಬಂಡಿವಡ್ಡರ್, ಸ. ಶರಣಪ್ಪ ಪಾಟೀಲ್, ಶ್ರೀಕಾಂತಗೌಡ ಮಾಲಿಪಾಟೀಲ, ಎಸ್.ಕೆ. ದಾನಕೈ ಮತ್ತಿತರರು ಇದ್ದರು.ಕೊಪ್ಪಳಕ್ಕೆ ಕನ್ನಡ ಜ್ಯೋತಿ ರಥಯಾತ್ರೆ ಆಗಮನ: ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳದ ಅಂಗವಾಗಿ ಕನ್ನಡ ಜ್ಯೋತಿ ಹೊತ್ತ ಕನ್ನಡ ಜ್ಯೋತಿ ರಥ ಯಾತ್ರೆಯನ್ನು ಶುಕ್ರವಾರ ಜಿಲ್ಲಾಡಳಿತದಿಂದ ಬರಮಾಡಿಕೊಂಡು, ಪುಷ್ಪ ನಮನ ಸಲ್ಲಿಸುವ ಮೂಲಕ ಗೌರವ ಸಲ್ಲಿಸಲಾಯಿತು.ಜಿಲ್ಲಾಧಿಕಾರಿ ನಲಿನ ಅತುಲ್ ಅವರು ನಾಡದೇವತೆ ತಾಯಿ ಭುವನೇಶ್ವರಿ ಪುತ್ಥಳಿಗೆ ಮಾಲಾರ್ಪಣೆ ಹಾಗೂ ಪುಷ್ಪಾರ್ಚನೆ ಮಾಡಿದರು. ಬಳಿಕ ಕನ್ನಡ ಬಾವುಟ ಹಿಡಿದು ರಥಯಾತ್ರೆಗೆ ಚಾಲನೆ ನೀಡಿದರು.
ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ, ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಕೃಷ್ಣಮೂರ್ತಿ ದೇಸಾಯಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ, ಕೊಪ್ಪಳ ತಹಸೀಲ್ದಾರ್ ವಿಠ್ಠಲ ಚೌಗಲಾ, ತಾಪಂ ದುಂಡಪ್ಪ ದುರಾದಿ, ಸಾಹಿತಿಗಳಾದ ಡಾ. ಮಹಾಂತೇಶ ಮಲ್ಲನಗೌಡರ್ ಹಾಗೂ ಕಸಾಪ, ವಿವಿಧ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು, ಜಿಲ್ಲಾ, ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.