ಅಜ್ಜಂಪುರಕ್ಕೆ ನ.2ರಂದು ಕನ್ನಡ ಜ್ಯೋತಿ ರಥಯಾತ್ರೆ: ಚಂದ್ರಪ್ಪ

| Published : Oct 31 2024, 12:48 AM IST

ಅಜ್ಜಂಪುರಕ್ಕೆ ನ.2ರಂದು ಕನ್ನಡ ಜ್ಯೋತಿ ರಥಯಾತ್ರೆ: ಚಂದ್ರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಅಜ್ಜಂಪುರ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಭಿಯಾನದ ಹಿನ್ನಲೆಯಲ್ಲಿ ಜಿಲ್ಲೆಗೆ ಕನ್ನಡ ಜ್ಯೋತಿ ಹೊತ್ತ ಕನ್ನಡ ರಥಯಾತ್ರೆ ನವೆಂಬರ್ 1 ರಂದು ಆಗಮಿಸಲಿದ್ದು ಅಜ್ಜಂಪುರ ತಾಲೂಕಿಗೆ ನ. 2 ರಂದು 11 ಘಂಟೆಗೆ ಕಡೂರಿನಿಂದ ಆಗಮಿಸಲಿರುವ ಈ ರಥವನ್ನು ಅದ್ಧೂರಿಯಾಗಿ ಬರಮಾಡಿಕೊಂಡು ಗೌರವ ಸಲ್ಲಿಸಬೇಕೆಂದು ತಾಲೂಕು ಕಸಾಪ ಅಧ್ಯಕ್ಷ ಎಚ್.ಆರ್. ಚಂದ್ರಪ್ಪ ತಿಳಿಸಿದರು.

ತಾಲೂಕು ಪಂಚಾಯ್ತಿಯ ಪೂರ್ವಭಾವಿ ಸಭೆ

ಕನ್ನಡಪ್ರಭ ವಾರ್ತೆ, ಅಜ್ಜಂಪುರ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಭಿಯಾನದ ಹಿನ್ನಲೆಯಲ್ಲಿ ಜಿಲ್ಲೆಗೆ ಕನ್ನಡ ಜ್ಯೋತಿ ಹೊತ್ತ ಕನ್ನಡ ರಥಯಾತ್ರೆ ನವೆಂಬರ್ 1 ರಂದು ಆಗಮಿಸಲಿದ್ದು ಅಜ್ಜಂಪುರ ತಾಲೂಕಿಗೆ ನ. 2 ರಂದು 11 ಘಂಟೆಗೆ ಕಡೂರಿನಿಂದ ಆಗಮಿಸಲಿರುವ ಈ ರಥವನ್ನು ಅದ್ಧೂರಿಯಾಗಿ ಬರಮಾಡಿಕೊಂಡು ಗೌರವ ಸಲ್ಲಿಸಬೇಕೆಂದು ತಾಲೂಕು ಕಸಾಪ ಅಧ್ಯಕ್ಷ ಎಚ್.ಆರ್. ಚಂದ್ರಪ್ಪ ತಿಳಿಸಿದರು.

ತಾಲೂಕು ಪಂಚಾಯ್ತಿಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ಕನ್ನಡ ಶಾಲುಗಳನ್ನು ಉಡುಗೊರೆಯಾಗಿ ನೀಡುತ್ತೇನೆ ಎಂದರು. ಈ ಸಭೆಯಲ್ಲಿ ಅಜ್ಜಂಪುರ ತಾಲೂಕು ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ವಿಜಯ್ ಕುಮಾರ್ ಕನ್ನಡ ಪರ ಸಂಘಟನೆಗಳು ಹಾಗೂ ವಿವಿಧ ಶಾಲಾ ಮಕ್ಕಳು ಸರ್ಕಾರಿ ನೌಕರರನ್ನು ಒಳಗೊಂಡು ಪೂರ್ಣ ಕುಂಬ ಮೆರವಣಿಗೆಯೊಂದಿಗೆ ಸಾಗಿ ತಾಯಿ ಭುವನೇಶ‍್ವರಿಗೆ ಮಾಲಾರ್ಪಣೆ ಮಾಡಿ ಸ್ವಾಗತಿಸಬೇಕು ಎಂದರು.

ಉತ್ತಮ ಕಲಾ ಪ್ರದರ್ಶನ ನೀಡಿದ ಶಾಲಾ ತಂಡಕ್ಕೆ ಬಹುಮಾನ ನೀಡಲಾಗುವುದು ಎಂದು ತಿಳಿಸಿದರು. ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಟಿ.ಜಿ. ರಮೇಶ್ ಕನ್ನಡ ರಥವನ್ನು ವಿಜೃಂಭಣೆಯಿಂದ ಕಲಾ ಮೇಳಗಳೊಂದಿಗೆ ಮೆರವಣಿಗೆ ಮಾಡಿ ಸಿಹಿ ಹಂಚಿಕೆಯೊಂದಿಗೆ ಸಂಭ್ರಮಿಸೋಣ ಎಂದು ತಿಳಿಸಿದರು.

ಈ ಸಭೆಯ ಅಧ್ಯಕ್ಷತೆಯನ್ನು ತಹಸೀಲ್ದಾರ್ ಶಿವಶರಣ ಕಟ್ಟೋಳಿ ವಹಿಸಿದರು. ಅರಣ್ಯ ಇಲಾಖೆ ಅಧಿಕಾರಿ ಎ.ಎಂ ಕೃಷ್ಣ ಮೂರ್ತಿ ಶಿಕ್ಷಣ ಇಲಾಖೆ ಪ್ರಕಾಶ್, ಜಾನಪದ ಪರಿಷತ್ ಅಧ್ಯಕ್ಷೆ ಕೆ.ಸಿ ವಿಜಯಕುಮಾರಿ, ಡಿಎಸ್ ಎಸ್ ಮುಖಂಡ ಎಸ್.ಎನ್. ಮಹೇಂದ್ರ ಸ್ವಾಮಿ, ಹೆಬ್ಬೂರು ಶಿವಣ್ಣ, ಕರವೇ ಸ್ವಾಭಿಮಾನಿ ಬಣ ಜಿಲ್ಲಾಧ್ಯಕ್ಷ ಎಚ್. ಗುರುಮೂರ್ತಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.