ಅಜ್ಜಂಪುರ ಭಾಷೆ ಮತ್ತು ಸಂಸ್ಕೃತಿಯನ್ನು ಮೊದಲಿನಿಂದಲೂ ಅಜ್ಜಂಪುರ ಪ್ರತಿ ಬಿಂಬಿಸುತ್ತಾ ಬಂದಿದೆ. ಈ ನೆಲದಲ್ಲಿ ಸರ್ಕಸ್ ಸುಬ್ಬರಾಯ ಅವರಿಂದ ಹಿಡಿದು ಸ್ವತಂತ್ರ ಹೋರಾಟಗಾರ ಸುಬ್ರಮಣ್ಯ ಶೆಟ್ಟಿ, ಜೋಗಿ ತಿಮ್ಮಯ್ಯ, ಸಾಂಸ್ಕೃತಿಕವಾಗಿ ಕತೆಗಾರ ಆನಂದ್ ಅವರಿಂದ ಅಜ್ಜಂಪುರ ಸೂರಿಯವರ ತನಕ ಅನೇಕ ಮಹನೀಯರು ಪಟ್ಟಣವನ್ನು ಶ್ರೀಮಂತ ಗೊಳಿಸಿದ್ದಾರೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಜಿ. ಸೂರಿ ಶ್ರೀನಿವಾಸ್ ಅಭಿಪ್ರಾಯಪಟ್ಟರು.

- ಅದ್ದೂರಿಯಾಗಿ ನಡೆದ 5ನೇ ಕನ್ನಡ ಸಾಹಿತ್ಯ ಸಮ್ಮೇಳನ

ಕನ್ನಡಪ್ರಭ ವಾರ್ತೆ, ಅಜ್ಜಂಪುರ

ಭಾಷೆ ಮತ್ತು ಸಂಸ್ಕೃತಿಯನ್ನು ಮೊದಲಿನಿಂದಲೂ ಅಜ್ಜಂಪುರ ಪ್ರತಿ ಬಿಂಬಿಸುತ್ತಾ ಬಂದಿದೆ. ಈ ನೆಲದಲ್ಲಿ ಸರ್ಕಸ್ ಸುಬ್ಬರಾಯ ಅವರಿಂದ ಹಿಡಿದು ಸ್ವತಂತ್ರ ಹೋರಾಟಗಾರ ಸುಬ್ರಮಣ್ಯ ಶೆಟ್ಟಿ, ಜೋಗಿ ತಿಮ್ಮಯ್ಯ, ಸಾಂಸ್ಕೃತಿಕವಾಗಿ ಕತೆಗಾರ ಆನಂದ್ ಅವರಿಂದ ಅಜ್ಜಂಪುರ ಸೂರಿಯವರ ತನಕ ಅನೇಕ ಮಹನೀಯರು ಪಟ್ಟಣವನ್ನು ಶ್ರೀಮಂತ ಗೊಳಿಸಿದ್ದಾರೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಜಿ. ಸೂರಿ ಶ್ರೀನಿವಾಸ್ ಅಭಿಪ್ರಾಯಪಟ್ಟರು.

ಅಜ್ಜಂಪುರ ತಾಲೂಕಿನ ಬೀರಲಿಂಗೇಶ್ವರದ ಸಮುದಾಯ ಭವನದಲ್ಲಿ ಆಯೋಜಿಸಿದ್ದ ನಡೆದ 5 ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ತಮ್ಮ ಆಶಯ ನುಡಿಯಲ್ಲಿ ಹಿರಿಯರ ಕೆಲಸವನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ. ಈ ಮುಂದಿನ ಮಹತ್ತರ ಜವಬ್ದಾರಿಯನ್ನು ಸ್ವಾಗತ ಸಮಿತಿ ಅಧ್ಯಕ್ಷ ಎ.ಟಿ ಶ್ರೀನಿವಾಸ್ ಸಾಂಸ್ಕೃತಿಕ ರಾಯಬಾರಿಯಾಗಿ ಮುನ್ನಡೆಸಿಕೊಂಡು ಹೋಗಬೇಕೆಂದು ಹೇಳಿದರು.

ಕಸಾಪ ಗೌರವ ಸಲಹೆಗಾರ ಎ.ಸಿ. ಚಂದ್ರಪ್ಪ ಮಾತನಾಡಿ, ಪಟ್ಟಣದಲ್ಲಿ ನಶಿಸುತ್ತಿರುವ ರಂಗಭೂಮಿ ಚಟುವಟಿಕೆ ಪುನರಾರಂಭಿಸಬೇಕು. ಕಲಾಶ್ರೀ ರಂಗ ಮಂದಿರವನ್ನು ಪುನಶ್ಚೇತನ ಗೊಳಿಸಿ ಕಲೆ, ಸಾಹಿತ್ಯ, ಸಂಗೀತ, ನಾಟಕ ಚಟುವಟಿಕೆ ನಿರಂತರವಾಗಿ ನಡೆಯುವಂತೆ ಮಾಡಬೇಕಿದೆ. ಇದಕ್ಕೆ ಪಕ್ಷಾತೀತವಾಗಿ ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ನಮ್ಮ ನಂತರದ ಸಾಂಸ್ಕೃತಿಕ ಉತ್ತರ ಅಧಿಕಾರಿಯಾಗಿ ಎ.ಟಿ ಶ್ರೀನಿವಾಸ್ ಬಂದಿದ್ದು, ಸಾಂಸ್ಕೃತಿಕವಾಗಿ ಅವರು ಅಜ್ಜಂಪುರದಲ್ಲಿ ಸಾಹಿತ್ಯ ಕ್ಷೇತ್ರವನ್ನು ಬೆಳೆಸಿ ಕೀರ್ತಿ ಹೆಚ್ಚಿಸಬೇಕೆಂದು ಅಭಿಪ್ರಾಯಪಟ್ಟರು.

ಶಾಸಕ ಜಿ.ಎಚ್. ಶ್ರೀನಿವಾಸ್ ಮಾತನಾಡಿ, ಅಜ್ಜಂಪುರ ಕಲೆ, ಸಾಹಿತ್ಯ, ಸಂಸ್ಕೃತಿ ತವರೂರು. ಸಮ್ಮೇಳನ ಮೂಲಕ ಕನ್ನಡ ಭಾಷೆ, ಸಾಹಿತ್ಯ ಸಂಸ್ಕೃತಿ ವಿಚಾರಗಳು ಮತ್ತಷ್ಟು ಪ್ರಚಲಿತಗೊಳಿಸುವಂತೆ ಮಾಡಿರುವುದು ಹರ್ಷ ತಂದಿದೆ. ಇಂತಹ ಚಟುವಟಿಕೆ ಆಯೋಜಿಸಿರುವ ಕಸಾಪ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಕಾಲದ ಪ್ರವಾಹದಲ್ಲಿ ಕನ್ನಡ ಭಾಷೆ ದುರ್ಬಲ ಅಥವಾ ಅಳಿಸಿಯೂ ಹೋಗಬಾರದು. ಈ ದಿಸೆಯಲ್ಲಿ ಕನ್ನಡಿಗರಾದ ನಾವು ಕನ್ನಡ ಭಾಷೆ ಬಳಸುವ ಮೂಲಕ ಉಳಿಸಿ ಬೆಳೆಸಬೇಕು. ಇದು ನಮ್ಮೆಲ್ಲರ ಸಮುದಾಯದ ಜವಾಬ್ದಾರಿ ಎಂದು 5 ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಮಂಜುನಾಥ ಅಜ್ಜಂಪುರ ಅಭಿಪ್ರಾಯಪಟ್ಟರು.

ಕಲಾಶ್ರೀ ರಂಗಮಂದಿರ ಮತ್ತು ಆಧ್ಯಾತ್ಮಿಕ ಕೇಂದ್ರವಾದ ಶಿವಾನಂದ ಆಶ್ರಮವನ್ನು ಜೀರ್ಣೋದ್ಧಾರ ಮಾಡಬೇಕೆಂದು ಆಗ್ರಹಿಸಿದರು. ಅಜ್ಜಂಪುರ ತಾಲೂಕು ಕಸಾಪ ಅಧ್ಯಕ್ಷ ಎಚ್.ಆರ್ ಚಂದ್ರಪ್ಪ ಮಾತನಾಡಿ ಭಾಷೆಗಳಲ್ಲೇ ಕನ್ನಡ ಭಾಷೆಯೇ ಚಂದದ ಭಾಷೆ. ಇತ್ತೀಚಿನ ದಿನಗಳಲ್ಲಿ ಕನ್ನಡ ಭಾಷೆ ಮರೆಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ತಹಸೀಲ್ದಾರ್ ವಿನಾಯಕ ಸಾಗರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿರಿಯ ನಾಗರೀಕರೆ ಇದ್ದಾರೆ. ಇದು ಹೀಗೆ ಮುಂದುವರಿದರೆ ಸಾಹಿತ್ಯ ಕ್ಷೇತ್ರಕ್ಕೆ ಹಿನ್ನೆಡೆಯಾಗುತ್ತದೆ. ಯುವಕರು ಉತ್ಸಾಹದಿಂದ ಇಂತಹ ಕಾರ್ಯಕ್ರಮಕ್ಕೆ ಭಾಗವಹಿಸಬೇಕು ಆಗಲೇ ಕನ್ನಡ, ನೆಲ, ಜಲ ಸಾಹಿತ್ಯ ಉಳಿಸಲು ಸಾಧ್ಯ ಎಂದು ತಿಳಿಸಿದರು. ಪಪಂ ಅಧ್ಯಕ್ಷ ಎ.ಜಿ ರೇವಣ್ಣ, ಉಪಾಧ್ಯಕ್ಷೆ ಕವಿತಾ ಕೇಶವಮೂರ್ತಿ, ಗ್ರಾಪಂ ಮಾಜಿ ಅಧ್ಯಕ್ಷ ಜಿ ನಟರಾಜ್, ಸದಸ್ಯ ಗಿರೀಶ್ ಚೌಹ್ವಾಣ್, ಕಾಂಗ್ರೆಸ್ ನಗರಘಟಕ ಅಧ್ಯಕ್ಷ ತಿಪ್ಪೇಶ್ ಮಡಿವಾಳ್, ಮಹೇಂದ್ರಾಚಾರ್, ತಾಪಂ ಮಾಜಿ ಉಪಾಧ್ಯಕ್ಷ ಆರ್. ಕೃಷ್ಣಪ್ಪ, ಎಸ್. ಎಸ್. ವೆಂಕಟೇಶ್, ಹೊಯ್ಸಳ ಕ್ಲಬ್ ಅಧ್ಯಕ್ಷ ಕೇಶವಮೂರ್ತಿ, ದಲಿತ ಮುಖಂಡ ಮಹೇಂದ್ರ ಸ್ವಾಮಿ, ಲಯನ್ಸ್ ಕ್ಲಬ್ ಅಧ್ಯಕ್ಷ ಜಿ. ಪ್ರಕಾಶ್ ಇದ್ದರು. ಪಪಂ ಸದಸ್ಯರಾದ ಆರ್ ಅಣ್ಣಪ್ಪ, ಸುಮಲತಾ ಮಲ್ಲಿಕಾರ್ಜುನ್, ನಿಸ್ಸಾರ್ ಅಹಮ್ಮದ್ ರವರನ್ನು ಗೌರವಿಸಲಾಯಿತು.

ಸಮಾರೂಪ ಸಮಾರಂಭದಲ್ಲಿ ಎ.ಎಸ್ ಕೃಷ್ಣಮೂರ್ತಿ ರಂಗ ದಾಖಲಾತಿ ಪ್ರದರ್ಶನ ಹಾಗೂ ಕುಮಾರ್ ಆರ್. ಮಾನ್ಯ ಪವಾರ್ ಭರತನಾಟ್ಯ ಎಲ್ಲರನ್ನು ಆಕರ್ಶಿಸಿತು. ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ.ಆನಂದ್ ಪ್ರಧಾನ ಉಪನ್ಯಾಸ ನೀಡಿದರು. ಸಭೆಯಲ್ಲಿ ಎ.ಬಿ ನವೀನ್, ಮೋಹನ್ ಕುಮಾರ್ ಜಾದವ್, ವಿಜಯ ಕುಮಾರಿ, ಮಧುಮಾಲತಿ, ಸತೀಶ್ ಭಕ್ತನ ಕಟ್ಟೆ ಲೋಕೇಶ್ಶಿ, ಶಿಕ್ಷಕ ಕಾಂತೇಶ್, ನಿವೃತ್ತ ಶಿಕ್ಷಕ ಹ. ಪುಟ್ಟಸ್ವಾಮಿ, ದೈಹಿಕ ಶಿಕ್ಷಕ ಉಮೇಶ್, ಎಚ್. ಎನ್. ರಾಜಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ. ಕೃಷ್ಣಮೂರ್ತಿ, ಪರಿಷತ್ ಕೋಶಾಧ್ಯಕ್ಷ ಪ್ರಹ್ಲಾದ್ , ಪ್ರಗತಿಪರ ಕೃಷಿಕ ಚಂದ್ರಶೇಖರ್ ನಾರಣಪುರ ಇದ್ದರು.

-- ಬಾಕ್ಸ್-- ಸಾರೋಟಿನಲ್ಲಿಸಮ್ಮೇಳನಾಧ್ಯಕ್ಷರ ಮೆರವಣಿಗೆಸಮ್ಮೇಳನ ಅಧ್ಯಕ್ಷ ಮಂಜುನಾಥ್ ಅಜ್ಜಂಪುರ ಅವರನ್ನು ಅಲಂಕೃತಗೊಳಿಸಿದ ಸಾರೋಟಿನಲ್ಲಿ ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು. ಮೆರವಣಿಗೆಗೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ರೇವಣ್ಣ, ಉಪಾಧ್ಯಕ್ಷೇ ಕವಿತಾ ಕೇಶವಮೂರ್ತಿ ಚಾಲನೆ ನೀಡಿದರು.ಪಟ್ಟಣದ ಗ್ರಾಮದೇವತೆ ಕಿರಾಳಮ್ಮ ದೇವಿ ದೇವಾಲಯದಿಂದ ಆರಂಭಗೊಂಡ ಮೆರವಣಿಗೆ ನೆಹರು ರಸ್ತೆ, ಟಿಬಿ ರಸ್ತೆ, ಗಾಂಧಿ ವೃತ್ತದ ಮೂಲಕ ಕಾರ್ಯಕ್ರಮ ಆಯೋಜಿಸಿದ್ದ ಬೀರಲಿಂಗೇಶ್ವರ ಸಮುದಾಯ ಭವನದ ಎಸ್.ಎಲ್. ಭೈರಪ್ಪ ಮಹಾ ಮಂಟಪದವರೆಗೆ ಸಾಗಿತು. ಮೆರವಣಿಗೆಯಲ್ಲಿ ಡೊಳ್ಳು, ವೀರಗಾಸೆ, ಮಂಗಳವಾದ್ಯ, ಕೊಂಬು ಕಹಳೆ ಮೆರವಣಿಗೆಗೆ ಮೆರಗು ತುಂಬಿದ್ದವು. ಪೂರ್ಣ ಕುಂಭ ಹೊತ್ತು ಮಹಿಳೆಯರು ಸಾಗಿದ್ದು ವಿಶೇಷವಾಗಿತ್ತು. ಕನ್ನಡ ದ್ವಜ ಹಿಡಿದು ಕನ್ನಡಾಭಿಮಾನಿಗಳು ಸಂತಸ ವ್ಯಕ್ತಪಡಿಸಿದರು.