ಕನ್ನಡ ಭಾಷೆ ನಮ್ಮ ಭಾವನೆಗಳಿಗೆ ಹಿಡಿದ ಕೈಗನ್ನಡಿ: ಮುಖ್ಯಶಿಕ್ಷಕ ಎಸ್.ಜಿ. ಭಟ್

| Published : Jun 30 2024, 12:45 AM IST

ಕನ್ನಡ ಭಾಷೆ ನಮ್ಮ ಭಾವನೆಗಳಿಗೆ ಹಿಡಿದ ಕೈಗನ್ನಡಿ: ಮುಖ್ಯಶಿಕ್ಷಕ ಎಸ್.ಜಿ. ಭಟ್
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ಸಾಹಿತ್ಯ ಪರಿಷತ್ತು, ನೆಲ್ಲಿಕೇರಿ ಪ್ರೌಢಶಾಲೆ, ಎಸ್ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ

ಕನ್ನಡಪ್ರಭ ವಾರ್ತೆ ಕುಮಟಾ

ಕನ್ನಡಕ್ಕೆ ಅದರದೇ ಆದ ವಿಶೇಷ ಇತಿಹಾಸವಿದೆ. ಕನ್ನಡ ಭಾಷೆ ನಮ್ಮೆಲ್ಲ ಭಾವನೆಗಳಿಗೆ ಹಿಡಿದ ಕೈಗನ್ನಡಿ ಎಂದು ಪಟ್ಟಣದ ನೆಲ್ಲಿಕೇರಿ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಎಸ್.ಜಿ. ಭಟ್ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನಿಂದ ನೆಲ್ಲಿಕೇರಿ ಪ್ರೌಢಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ, ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ಭಾಷೆಗೆ ಪೂರ್ಣಾಂಕ ಪಡೆದ ವಿದ್ಯಾರ್ಥಿಗಳ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಜಾರ್ಜ್ ಫರ್ನಾಂಡಿಸ್, ಕನ್ನಡವನ್ನು ಉಳಿಸಿ ಬೆಳೆಸುವ ಭಾರ ನಿಮ್ಮೆಲ್ಲರ ಮೇಲಿದೆ ಎಂದರು.ವಿಶೇಷ ಆಹ್ವಾನಿತರಾದ ಬಿಇಒ ಆರ್.ಎಲ್. ಭಟ್, ಕನ್ನಡದ ಕಣ್ಮಣಿಗಳನ್ನು ಗೌರವಿಸುವ ಶ್ರೇಷ್ಠ ಕೆಲಸವನ್ನು ಕನ್ನಡ ಸಾಹಿತ್ಯ ಪರಿಷತ್ತು ಮಾಡುತ್ತಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ, ಅಭನಂದನೆಗೆ ಪಾತ್ರರಾದ ಎಲ್ಲ ವಿದ್ಯಾರ್ಥಿಗಳು ಮುಂದೊಂದು ದಿನ ಕನ್ನಡದ ಶ್ರೇಷ್ಠ ಸಾಧಕರಾಗಿ ಬೆಳೆದು, ಇಂದು ಸಾಹಿತ್ಯ ಪರಿಷತ್ತು ನೀಡಿದ ಗೌರವ ಅಭಿನಂದನೆಯನ್ನು ಸ್ಮರಿಸಿಕೊಳ್ಳುವಂತಾಗಬೇಕು ಎಂದು ಆಶಿಸಿದರು.

ಜಿಲ್ಲಾ ಗೌರವ ಕಾರ್ಯದರ್ಶಿ ಪಿ.ಆರ್.ನಾಯ್ಕ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬೀರದಾಸ ಗುನಗಾ, ಮಾಧ್ಯಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷ ಅನಿಲ್ ರೋಡ್ರಗೀಸ್ ವೇದಿಕೆಯಲ್ಲಿದ್ದರು.

ಲಾವಣ್ಯ ಸಂಗಡಿಗರು ಪ್ರಾರ್ಥಿಸಿದರು. ಗೌರವ ಕಾರ್ಯದರ್ಶಿ ಪ್ರಮೋದ ನಾಯ್ಕ ಸ್ವಾಗತಿಸಿದರು. ಗೌರವ ಕೋಶಾಧ್ಯಕ್ಷ ವನ್ನಳ್ಳಿ ಗಿರಿ ನಿರೂಪಿಸಿದರು. ತಾಲೂಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುಬ್ಬಯ್ಯ ನಾಯ್ಕ ಪ್ರಾಸ್ತಾವಿಕ ಮಾತನಾಡಿದರು. ಉದ್ಯಮಿ ಹೆಗಡೆಯ ಗಣೇಶ ನಾಯ್ಕ ಕೊಡುಗೆಯಾಗಿ ನೀಡಿದ ಪಠ್ಯಗಳನ್ನು ಕೊಟ್ಟು ೭೮ ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.