ಸಾರಾಂಶ
ಕರ್ನಾಟಕದಲ್ಲಿ ಎಲ್ಲಾ ವ್ಯವಹಾರಗಳಲ್ಲಿ ಕನ್ನಡ ಕಡ್ಡಾಯವಾಗಬೇಕು ಎಂದು ಇಲ್ಲಿಯ ಮುರುಘರಾಜೇಂದ್ರ ಮಠದ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಅಭಿಮತ ವ್ಯಕ್ತಪಡಿಸಿದರು.
ಆನಂದಪುರ: ಕರ್ನಾಟಕದಲ್ಲಿ ಎಲ್ಲಾ ವ್ಯವಹಾರಗಳಲ್ಲಿ ಕನ್ನಡ ಕಡ್ಡಾಯವಾಗಬೇಕು ಎಂದು ಇಲ್ಲಿಯ ಮುರುಘರಾಜೇಂದ್ರ ಮಠದ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಅಭಿಮತ ವ್ಯಕ್ತಪಡಿಸಿದರು.
ಶ್ರೀಮಠದಲ್ಲಿ ಭಾನುವಾರ ಆನಂದಪುರ ಕನ್ನಡ ಸಂಘ ನಡೆಸುತ್ತಿರುವ ಕನ್ನಡ ನಾಡಿನಲ್ಲಿ ಕನ್ನಡ ಕಡ್ಡಾಯವಾಗಬೇಕೆಂಬ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಕನ್ನಡ ನಾಡು ನುಡಿಯ ಸಂರಕ್ಷಣೆಗಾಗಿ ಜೀವನವನ್ನೇ ಮುಡುಪಾಗಿಟ್ಟ ಕನ್ನಡ ಹೋರಾಟಗಾರರ ನೆನಪು ನಿರಂತರವಾಗಿರಬೇಕು ಎಂದರು.ಕನ್ನಡ ನಾಡಿನಲ್ಲಿ ನಾಮಫಲಕಗಳು ವಿಳಾಸಗಳು ಎಲ್ಲಾ ವ್ಯವಹಾರಗಳು ಕನ್ನಡದಲ್ಲಿ ನಡೆದಾಗ ಮಾತ್ರ ಕನ್ನಡದ ಶಕ್ತಿ ಏನೆಂದು ಎಲ್ಲರಿಗೂ ತಿಳಿಯುತ್ತದೆ. ಇಂತಹ ಒಂದು ಪ್ರಯತ್ನದಲ್ಲಿ ಕನ್ನಡ ಸಂಘ ಕಳೆದ 45 ವರ್ಷಗಳಿಂದ ಕನ್ನಡದ ಬಗ್ಗೆ ಜಾಗೃತಿ ಮೂಡಿಸುವಂತಹ ಕನ್ನಡ ಸಂಘವಾಗಿ ಹೊರಹೊಮ್ಮಿದೆ. ಈ ಸಂಘದ ಸಮಾಜ ಸೇವೆಯಲ್ಲಿ ಖ್ಯಾತ ನೇತ್ರ ತಜ್ಞ ಡಾ.ಮೋದಿ ಇವರಿಂದ ನಡೆದಂತಹ ನೇತ್ರ ಶಿಬಿರಗಳನ್ನು ಹಾಗೂ ರಾಜ್ಯಮಟ್ಟದಲ್ಲಿನ ಕಲಾವಿದರನ್ನು ಸ್ಮರಿಸಿ, ಗೌರವಿಸಿ ಸನ್ಮಾನಿಸಿದ್ದು, ಮಟ್ಟದ ಹಾಸ್ಯ ನಾಟಕ ಸ್ಪರ್ಧೆ ನಡೆಸಿದಂತಹ ಅನೇಕ ಕಾರ್ಯಕ್ರಮಗಳಿಗೆ ನಾವು ಕೂಡ ಸಾಕ್ಷಿಯಾಗಿದ್ದೇವೆ ಎಂದರು.
ಕನ್ನಡ ನಾಡಿನ ಭಾಷೆಯನ್ನು ಎಲ್ಲರೂ ಕಡ್ಡಾಯವಾಗಿ ಕಲಿಯಬೇಕು, ಕಳಿಸಬೇಕಾದ ಅವಶ್ಯಕತೆ ಇದೆ ಎಂದರು. ಕಡ್ಡಾಯವಾಗಿ ಕನ್ನಡ ಬಳಸಿ ಅಭಿಯಾನಕ್ಕೆ ಚಾಲನೆ ನೀಡಿದ ಸಂದರ್ಭ ದಲ್ಲಿ ಕನ್ನಡ ಸಂಘದ ಅಧ್ಯಕ್ಷ ಪಿ. ಎನ್. ಚಂದ್ರು ಕುಮಾರ್, ಗೌರವಾಧ್ಯಕ್ಷ ರಾಜೇಂದ್ರ ಗೌಡ, ಸ್ಥಳೀಯ ಪ್ರಮುಖರಾದ ವಿಜಯ್ ಕುಮಾರ್, ಮುರುಗೇಶಪ್ಪ ಗೌಡ್ರು, ಯೋಗೇಶ್, ಮುರುಗೇಂದ್ರ ಗೌಡ್ರು ಹಾಜರಿದ್ದರು.;Resize=(128,128))
;Resize=(128,128))
;Resize=(128,128))