ಕನ್ನಡಫಲಕ ಅಳವಡಿಕೆ: ಅಂಗಡಿ ಮಳಿಗೆ ಮಾಲೀಕರಿಗೆ ಹೂ, ಪುಸ್ತಕ ನೀಡಿ ಗೌರವ

| Published : Nov 02 2025, 02:45 AM IST

ಕನ್ನಡಫಲಕ ಅಳವಡಿಕೆ: ಅಂಗಡಿ ಮಳಿಗೆ ಮಾಲೀಕರಿಗೆ ಹೂ, ಪುಸ್ತಕ ನೀಡಿ ಗೌರವ
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ವಿವಿಧ ಬಡಾವಣೆಗಳ ಅಂಗಡಿಗಳು, ಸ್ಟೋರ್ ಗಳಿಗೆ ಭೇಟಿ ನೀಡಿ ಕನ್ನಡ ನಾಮಫಲಕ ಬಗ್ಗೆ ಜಾಗೃತಿ ಮೂಡಿಸಲಾಯಿತು.

ಮಂಡ್ಯ: ನಗರದ ಪ್ರಮುಖ ಬೀದಿಗಳಲ್ಲಿ ಜೈ ಕರ್ನಾಟಕ ಪರಿಷತ್ತು ವತಿಯಿಂದ ಕನ್ನಡ ಭಾಷೆಯಲ್ಲಿ ನಾಮಫಲಕ ಹಾಕಿರುವ ಅಂಗಡಿ ಮಳಿಗೆಗಳ ಮಾಲೀಕರಿಗೆ ಕನ್ನಡ ಶಾಲು ಹಾಕಿ ಗುಲಾಬಿ ಹೂ ನೀಡಿ ಕನ್ನಡ ಪುಸ್ತಕ ವಿತರಿಸಿ ಗೌರವಿಸಲಾಯಿತು. ನಗರದ ವಿವಿಧ ಬಡಾವಣೆಗಳ ಅಂಗಡಿಗಳು, ಸ್ಟೋರ್ ಗಳಿಗೆ ಭೇಟಿ ನೀಡಿ ಕನ್ನಡ ನಾಮಫಲಕ ಬಗ್ಗೆ ಜಾಗೃತಿ ಮೂಡಿಸಲಾಯಿತು. ವೇದಿಕೆ ರಾಜ್ಯಾಧ್ಯಕ್ಷ ಡಾ.ಎಸ್.ನಾರಾಯಣ್ ಮಾತನಾಡಿ, ಕಡ್ಡಾಯವಾಗಿ ಕನ್ನಡ ಭಾಷೆ ನಾಮಫಲಕಗಳನ್ನು ಸ್ವಯಂ ಪ್ರೇರಿತರಾಗಿ ಅಳವಡಿಸಬೇಕಾಗಿ ಖಾಸಗಿ ಮಳಿಗೆಗಳ ಮಾಲೀಕರಿಗೆ ತಿಳಿಸಿದರು. ಕನ್ನಡ ಭಾಷೆಯಲ್ಲಿ ವ್ಯವಹಾರ, ಅಧಿಕಾರಿಗಳು, ಖಾಸಗಿ ಸಿಬ್ಬಂದಿಗೆ ಕನ್ನಡ ಭಾಷೆ ಕಲಿಕೆಗಾಗಿ ಮನವಿ ಮಾಡಿದರು. ರಾಜ್ಯ ಸರ್ಕಾರ ಹೊರಡಿಸಿರುವ ಆದೇಶವನ್ನು ಎಲ್ಲರೂ ಪಾಲಿಸಬೇಕು ಎಂದು ತಿಳಿಸಿದರು.

ಈ ವೇಳೆ ಪರಿಷತ್ತು ರಾಜ್ಯ ಉಪಾಧ್ಯಕ್ಷ ಬಸವರಾಜ್, ಖಜಾಂಚಿಗಳಾದ ಕೆ.ಬಿ.ಕೆಂಪೇಗೌಡ, ಶಿಸ್ತು ಸಮಿತಿ ಅಧ್ಯಕ್ಷ ಪುಟ್ಟೇಗೌಡ, ಶಾಖಾಧ್ಯಕ್ಷರಾದ ಬಿ.ಡಿ.ಪುಟ್ಟಸ್ವಾಮಿ,ಶಿವಕುಮಾರ್, ಗೋಪಾಲ್, ನಾರಾಯಣಸ್ವಾಮಿ, ಸುಶೀಲಮ್ಮ, ವಿಜಯಲಕ್ಷ್ಮಿ, ಮಂಜುಳ, ನಾಗಮ್ಮ, ಪುಟ್ಟಮ್ಮ ಇತರರು ಭಾಗವಹಿಸಿದ್ದರು.