ರೋಣ ತಾಲೂಕಿನ ಕುರಹಟ್ಟಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ 'ಕನ್ನಡಪ್ರಭ' ಯುವ ಆವೃತ್ತಿಯನ್ನು ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಸಿ.ಎ. ಯಲ್ಲಪ್ಪಗೌಡರ ಬಿಡುಗಡೆ ಮಾಡಿದರು.
ರೋಣ: ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳ ಶೈಕ್ಷಣಿಕ ವಿಕಾಸಕ್ಕೆ ''''ಕನ್ನಡಪ್ರಭ'''' ಯುವ ಆವೃತ್ತಿ ಸಹಕಾರಿಯಾಗಿದೆ ಎಂದು ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಸಿ.ಎ. ಯಲ್ಲಪ್ಪಗೌಡರ ಹೇಳಿದರು.
ತಾಲೂಕಿನ ಕುರಹಟ್ಟಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ನಡೆದ ''''ಕನ್ನಡಪ್ರಭ'''' ಯುವ ಆವೃತ್ತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಮಕ್ಕಳ ಕಲಿಕೆಗೆ ಪೂರಕವಾಗಿ, ಅವರ ಭವಿಷ್ಯಕ್ಕೆ ಅನುಕೂಲಕರವಾಗುವ ದೃಷ್ಟಿಯಲ್ಲಿ ''''ಕನ್ನಡಪ್ರಭ'''' ಯುವ ಆವೃತ್ತಿಯನ್ನು ಹೊರತಂದಿದ್ದು, ಇದನ್ನ ದಿನ ನಿತ್ಯ ಓದುವುದರಿಂದ ನಿಮ್ಮ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯಲು ಅನುಕೂಲವಾಗುತ್ತದೆ. ಜತೆಗೆ ಮುಂದೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವವರಿಗೆ ಇದು ಒಂದು ಮಾರ್ಗದರ್ಶಿಯಾಗಿದೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ''''ಕನ್ನಡಪ್ರಭ'''' ಯುವ ಆವೃತ್ತಿಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
''''ಕನ್ನಡಪ್ರಭ'''' ರಾಜಕೀಯ, ಕಲೆ, ಸಾಹಿತ್ಯ, ಸಂಗೀತ ಕ್ಷೇತ್ರದ ಮಾಹಿತಿ ನೀಡುವ ಜತೆಗೆ ಶೈಕ್ಷಣಿಕ ಮಾರ್ಗದರ್ಶಿಯಾಗಿದೆ. ವಿದ್ಯಾರ್ಥಿಗಳ ಉತ್ತಮ ಫಲಿತಾಂಶಕ್ಕೆ ಸ್ಫೂರ್ತಿಯಾಗಿದ್ದು, ಪತ್ರಿಕೆಯ ನಿರಂತರ ಅಧ್ಯಯನದಿಂದ ಮಕ್ಕಳು ಶಾಲೆಗೆ ಒಳ್ಳೆಯ ಫಲಿತಾಂಶ ತರಬೇಕು. ಶಿಕ್ಷಣಪ್ರೇಮಿಗಳು ಹಾಗೂ ಕುರಹಟ್ಟಿ ಗ್ರಾಪಂ ಅಧ್ಯಕ್ಷರಾದ ಸಿದ್ದನಗೌಡ ಪಾಟೀಲ ಅವರು ನಮ್ಮ ಶಾಲೆಯ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದು ಜೀವನದಲ್ಲಿ ಅತ್ಯುತ್ತಮ ಸಾಧನೆ ಮಾಡಬೇಕು ಎನ್ನುವ ಉದ್ದೇಶದಿಂದ ಎಂದು ''''ಕನ್ನಡಪ್ರಭ'''' ಯುವ ಆವೃತ್ತಿಯನ್ನು ನಿಮಗೆಲ್ಲ ಕೊಡಮಾಡಿದ್ದಾರೆ. ಅವರ ಕಾರ್ಯ ಶ್ಲಾಘನೀಯವಾಗಿದ್ದು, ಮಕ್ಕಳು ಯುವ ಆವೃತ್ತಿ ನಿತ್ಯ ಓದುವ ಮೂಲಕ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವ ಮೂಲಕ ಅವರಿಗೆ ಕೃತಜ್ಞತೆ ಸಲ್ಲಿಸಬೇಕು ಎಂದರು.''''ಕನ್ನಡಪ್ರಭ'''' ವರದಿಗಾರ ಮಹೇಶ ಛಬ್ಬಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ವೇಳೆ ಗ್ರಾಪಂ ಅಧ್ಯಕ್ಷ ಸಿದ್ದನಗೌಡ ಹನುಮಂತಗೌಡ ಪಾಟೀಲ ಅವರನ್ನು ಗೌರವಿಸಲಾಯಿತು. ಎಸ್‌ಡಿಎಂಸಿ ಅಧ್ಯಕ್ಷ ಶಂಕರಗೌಡ ವೆಂಕನಗೌಡ ಪಾಟೀಲ ಹಾಗೂ ''''ಕನ್ನಡಪ್ರಭ'''' ಪ್ರಸರಣ ವಿಭಾಗದ ಪ್ರಸಾದ ಕೆ. ಮಾತನಾಡಿದರು.ಶಿಕ್ಷಕರಾದ ಬಿ.ಬಿ. ಸುಗ್ಗಿ, ಎ.ಎಸ್. ಭವನಾಸಿ, ಬಸವರಾಜ ಸೊಲಗಿ, ಎನ್.ಡಿ. ಪಾಟೀಲ, ಗೀತಾಂಜಲಿ ಮಡಿವಾಳರ, ಎಸ್.ಜೆ. ನದಾಫ, ನಿಂಗುಬಸು ಉಳ್ಳಾಗಡ್ಡಿ, ನೀಲನಗೌಡ ಪಾಟೀಲ, ರಾಜು ಚನ್ನಪ್ಪಗೌಡರ ಹಾಗೂ ವಿದ್ಯಾರ್ಥಿಗಳು, ಶಾಲಾ ಸಿಬ್ಬಂದಿ ಇದ್ದರು.