ಸಾರಾಂಶ
ವಿದ್ಯಾರ್ಥಿಗಳ ಭವಿಷ್ಯಕಾಗಿ ಕನ್ನಡಪ್ರಭ ದಿನಪತ್ರಿಕೆ ಅನೇಕ ಉಪಯುಕ್ತ ವಿಷಯಗಳ ವಿಭಿನ್ನ ಸಂಚಿಕೆಗಳನ್ನು ಪ್ರಕಟಿಸುತ್ತಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಮಾಡಿಕೊಳ್ಳಬೇಕು.
ನವಲಗುಂದ:
ವಿದ್ಯಾರ್ಥಿಗಳನ್ನೇ ಗಮನದಲ್ಲಿಟ್ಟುಕೊಂಡು ಪ್ರಕಟವಾಗುತ್ತಿರುವ ಕನ್ನಡಪ್ರಭ ಯುವ ಆವೃತ್ತಿ ವಿದ್ಯಾರ್ಥಿಗಳ ಜ್ಞಾನಾರ್ಜನೆ ಹೆಚ್ಚಿಸಲು ಸಹಕಾರಿಯಾಗಿದೆ ಎಂದು ಬಿಜೆಪಿ ಮುಖಂಡ, ಅಣ್ಣಿಗೇರಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ದೇವರಾಜ ದಾಡಿಭಾವಿ ಹೇಳಿದರು.ಪಟ್ಟಣದ ಅಜಾತನಾಗಲಿಂಗಸ್ವಾಮಿ ಮಠದ ಆವರಣದಲ್ಲಿ ಜ. ಅಜಾತ ನಾಗಲಿಂಗ ಮಹಾಸ್ವಾಮಿ ವಿದ್ಯಾಪೀಠದ ಪ್ರೌಢಶಾಲೆ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಕನ್ನಡಪ್ರಭ ಯುವ ಆವೃತ್ತಿ ಬಿಡುಗಡೆಗೊಳಿಸಿ ಮಾತನಾಡಿದರು.
ವಿದ್ಯಾರ್ಥಿಗಳ ಭವಿಷ್ಯಕಾಗಿ ಕನ್ನಡಪ್ರಭ ದಿನಪತ್ರಿಕೆ ಅನೇಕ ಉಪಯುಕ್ತ ವಿಷಯಗಳ ವಿಭಿನ್ನ ಸಂಚಿಕೆಗಳನ್ನು ಪ್ರಕಟಿಸುತ್ತಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಮಾಡಿಕೊಳ್ಳಬೇಕು. ಜತೆಗೆ ಸಾಮಾಜಿಕ ಚಿಂತನೆ ಹೊಂದಿರುವ ಈ ಪತ್ರಿಕೆ ಬಡ ವಿದ್ಯಾರ್ಥಿಗಳ ಕುರಿತು ಅನೇಕ ವರದಿ ಪ್ರಕಟಿಸಿ ಅದೆಷ್ಟು ಮಕ್ಕಳಿಗೆ ಓದಲು ಆರ್ಥಿಕ ನೆರವು ದೊರಕಿಸಿಕೊಟ್ಟಿದೆ ಎಂದರು.ಬಿಜೆಪಿ ಮಂಡಳ ಅಧ್ಯಕ್ಷ ಗಂಗಪ್ಪ ಮನಮಿ ಮಾತನಾಡಿ, ಕನ್ನಡಪ್ರಭ ಪತ್ರಿಕೆಯು ತಾಲೂಕಿನ ಸಮಸ್ಯೆಗಳ ಕುರಿತು ವಿಶೇಷ ವರದಿ ಪ್ರಕಟಿಸಿ ಬೆಳಕು ಚೆಲ್ಲಿದೆ. ಸದಾ ಸಮಾಜಮುಖ ವರದಿ ಬಿತ್ತರಿಸುವ ಮೂಲಕ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿದೆ. ವಿದ್ಯಾರ್ಥಿಗಳು ಪ್ರತಿದಿನ ಈ ಪತ್ರಿಕೆ ಓದಿ ಜ್ಞಾನಾರ್ಜನೆ ಹೆಚ್ಚಿಸಿಕೊಳ್ಳಬೇಕೆಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಮುಖ್ಯಶಿಕ್ಷಕ ಎಲ್.ಎಚ್. ಕಮ್ಮಾರ ಮಾತನಾಡಿದರು. ಇದಕ್ಕೂ ಮೊದಲು ವಿದ್ಯಾರ್ಥಿಗಳು ಯುವ ಆವೃತ್ತಿ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು. ಸಾಯಿಬಾಬಾ ಆನೆಗುಂದಿ, ನಾಗನಗೌಡ ಪಾಟೀಲ್, ಶರಣಬಸಪ್ಪ ಯತ್ನಳ್ಳಿ, ವಿಜಯಗೌಡ ಪಾಟೀಲ್, ಶಿಕ್ಷಕರಾದ ಬಿ.ಎಸ್. ಹಿರೇಮಠ, ಎ.ಆರ್. ಬನ್ನಿಕೋಡ, ಎಸ್.ಎಸ್. ಬಿರಾದಾರ, ಎಸ್.ಸಿ. ಹಿರೇಮಠ, ಎಂ.ಕೆ. ಮಹೇಂದ್ರಕರ ಇದ್ದರು.)
;Resize=(128,128))
;Resize=(128,128))
;Resize=(128,128))