ಸಾರಾಂಶ
ಹೊಳೆನರಸೀಪುರ: ಕನ್ನಡವೇ ನಮ್ಮಮ್ಮ ಎಂಬ ಮನೋಭಾವ ಎಲ್ಲರಲ್ಲೂ ಇದೆ. ಜತೆಗೆ ಇತರೆ ಭಾಷೆಗಳು ನಮ್ಮ ನೆಂಟರು ಎನ್ನುವ ಮನೋಭಾವ ಇರಲಿ. ಉನ್ನತ ವಿದ್ಯಾಭ್ಯಾಸಕ್ಕೆ ಮತ್ತು ದೇಶ ಆಧುನಿಕತೆಗೆ ತೆರೆದುಕೊಂಡಂತೆ ಇತರೆ ಭಾಷೆಗಳ ಅಗತ್ಯತೆಯೂ ಇದೆ. ಹಾಗೂ ಆದ್ದರಿಂದ ಯಾವುದೇ ಭಾಷೆಯನ್ನು ಕಲಿತರೂ ಕನ್ನಡ ಭಾಷೆಯ ಮೇಲಿನ ಪ್ರೀತಿ ಉತ್ಕೃಷ್ಟವಾಗಿರಬೇಕು ಎಂದು ತಾಲೂಕು ಸಗಟು ವಿತರಕರ ಸಂಘದ ಕಾರ್ಯದರ್ಶಿ ಆರ್. ವಾಸುದೇವಮೂರ್ತಿ ಅಭಿಪ್ರಾಯಪಟ್ಟರು. ಪಟ್ಟಣದ ಕೊನೇರಿ ರಾಮಶೆಟ್ಟರ ಛತ್ರದಲ್ಲಿ ತಾಲೂಕು ಸಗಟು ವಿತರಕರ ಸಂಘ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ನಮ್ಮ ಭಾಷೆಗೆ ೨ ಸಾವಿರ ವರ್ಷಗಳಷ್ಟು ಇತಿಹಾಸವಿದೆ ಹಾಗೂ ನಮ್ಮ ನಾಡಿನ ಕವಿಗಳು, ಲೇಖಕರ ಭಾಷಾಭಿಮಾನದ ಹಾಗೂ ಪಾಂಡಿತ್ಯದ ಫಲವಾಗಿ ೮ ಜ್ಞಾನಪೀಠ ಪ್ರಶಸ್ತಿಗಳು ಲಭಿಸಿವೆ ಮತ್ತು ನಮ್ಮ ಭಾಷೆಯನ್ನು ಅತ್ಯಂತ ಶ್ರೀಮಂತಗೊಳಿಸಿದ್ದಾರೆ ಎಂದರು. ವಿ. ಸಂಘದ ಅಧ್ಯಕ್ಷ ಅಬ್ದುಲ್ ವಫಾ, ಸುರೇಶ್ ಕುಮಾರ್, ರೋಹಿತ್ ಕನ್ನಡ ಭಾಷೆಯ ಬಗ್ಗೆ ಅಭಿಮಾನದ ಮಾತುಗಳನ್ನಾಡಿದರು, ಅರುಣ್ ಕನ್ನಡ ಗೀತೆಗಳನ್ನಾಡಿ ರಂಜಿಸಿದರು.
ಸದಸ್ಯರಾದ ಚಂದ್ರು, ಹಿರಿಯರಾದ ನಾಗಪ್ಪ, ರಾಮಣ್ಣ, ರಾಮನಾಥ್, ಯೋಗೇಶ್, ಕಿಶೋರ್, ಜೀವನ್, ಅಶ್ವತ್, ಸುಭಾಷ್, ವಿಶ್ವಾಸ್, ವಿಜೇತ್, ಕಿರಣ್, ಇತರರು ಭಾಗವಹಿಸಿದ್ದರು.;Resize=(128,128))
;Resize=(128,128))
;Resize=(128,128))