ಹೊಳೆನರಸೀಪುರ ತಾಲೂಕು ಸಗಟು ಮಾರಾಟಗಾರರ ವಿತರಕರ ಸಂಘದ ಸದಸ್ಯರಿಗೆ ಅವರ ನಿತ್ಯ ವ್ಯಾಪಾರದಲ್ಲಿ ಸಂಪೂರ್ಣ ಕನ್ನಡ ಬಳಕೆ ಎನ್ನುವ ಟಾಸ್ಕ್ ನೀಡಲಾಗಿತ್ತು. ಟಾಸ್ಕಿನಲ್ಲಿ ಭಾಗವಹಿಸಿದ್ದವರು ತಮ್ಮ ನಿತ್ಯ ವ್ಯಾಪಾರದಲ್ಲಿ ಗ್ರಾಹಕರೊಂದಿಗೆ ಕನ್ನಡ ಬಾಷೆಯಲ್ಲಿ ಮಾತನಾಡುವಾಗ ಎಷ್ಟು ಇಂಗ್ಲೀಷ್‌ ಪದಗಳನ್ನು ಬಳಸಿದ್ದಾರೆ ಎಂದು ನಮ್ಮ ತೀರ್ಪುಗಾರರು ತೋರಿಸಿದಾಗ ಆಶ್ವರ್ಯ ಚಿಕಿತರಾದೆವು ಎಂದು ತಾ. ವಿತರಕರ ಸಂಘದ ಅಧ್ಯಕ್ಷ ರಾಮನಾಥ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ತಾಲೂಕು ಸಗಟು ಮಾರಾಟಗಾರರ ವಿತರಕರ ಸಂಘದ ಸದಸ್ಯರಿಗೆ ಅವರ ನಿತ್ಯ ವ್ಯಾಪಾರದಲ್ಲಿ ಸಂಪೂರ್ಣ ಕನ್ನಡ ಬಳಕೆ ಎನ್ನುವ ಟಾಸ್ಕ್ ನೀಡಲಾಗಿತ್ತು. ಟಾಸ್ಕಿನಲ್ಲಿ ಭಾಗವಹಿಸಿದ್ದವರು ತಮ್ಮ ನಿತ್ಯ ವ್ಯಾಪಾರದಲ್ಲಿ ಗ್ರಾಹಕರೊಂದಿಗೆ ಕನ್ನಡ ಬಾಷೆಯಲ್ಲಿ ಮಾತನಾಡುವಾಗ ಎಷ್ಟು ಇಂಗ್ಲೀಷ್‌ ಪದಗಳನ್ನು ಬಳಸಿದ್ದಾರೆ ಎಂದು ನಮ್ಮ ತೀರ್ಪುಗಾರರು ತೋರಿಸಿದಾಗ ಆಶ್ವರ್ಯ ಚಿಕಿತರಾದೆವು ಎಂದು ತಾ. ವಿತರಕರ ಸಂಘದ ಅಧ್ಯಕ್ಷ ರಾಮನಾಥ್ ತಿಳಿಸಿದರು. ತಾಲೂಕು ವಿತರಕರ ಸಂಘದ ವತಿಯಿಂದ ಕೊನೇರಿ ರಾಮಶೆಟ್ಟರ ಛತ್ರದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ನಾವು ನಮ್ಮ ಸದಸ್ಯರಿಗೆ ಕನ್ನಡ ಬಾಷೆ, ಕವಿಗಳು, ವಚನಕಾರರು, ಓಗಟುಗಳನ್ನು ಗುರುತಿಸುವ ಹಾಗೂ ಕನ್ನಡ ಜನಪ್ರಿಯ ಚಿತ್ರಗೀತೆಗಳ ಚರಣವನ್ನು ಗುರುತಿಸುವ ಸ್ಪರ್ಧೆ ಏರ್ಪಡಿಸಿ, ವಿಜೇತರಿಗೆ ಉತ್ತೇಜಿಸುವ ಸಲುವಾಗಿ ಬಹುಮಾನಗಳನ್ನು ನೀಡಿದ್ದೇವೆ. ಕನ್ನಡನಾಡಿನಲ್ಲಿ ಸಂಘ ಸಂಸ್ಥೆಗಳು ಮೇಲಿಂದ ಮೇಲೆ ಕನ್ನಡ ಕಾರ್ಯಕ್ರಮಗಳನ್ನು ಆಯೋಜಿಸಿ, ಕನ್ನಡದ ಶ್ರೀಮಂತಿಕೆಯನ್ನು ವಿವರಿಸದಿದ್ದರೆ ಕನ್ನಡನಾಡಿನಲ್ಲಿ ಕನ್ನಡವೇ ಸೊರಗುವ ಸಂಭವವಿದೆ. ಆದ್ದರಿಂದ ಕನ್ನಡದ ಕಾರ್ಯಕ್ರಮಗಳು ರಾಜ್ಯೋತ್ಸವ ದಿನಕ್ಕೆ ಸೀಮಿತಗೊಳಿಸಬಾರದು ಎಂದು ಸಲಹೆ ನೀಡಿದರು. ಹಿರಿಯ ಸದಸ್ಯ ವಾಸುದೇವಮೂರ್ತಿ ಮಾತನಾಡಿದರು. ಉಪಾಧ್ಯಕ್ಷ ರಾಮಚಂದ್ರಗುಪ್ತ, ಕಾರ್ಯದರ್ಶಿ ಅರುಣ್, ಖಚಾಂಜಿ ರೋಹಿತ್, ಸಹಕಾರ್ಯದರ್ಶಿ ಮಹೇಂದ್ರಬಾಬು, ನಿಕಟಪೂರ್ವ ಅಧ್ಯಕ್ಷ ಅಬ್ದುಲ್ ವಫಾ, ಮಾಜಿ ಅಧ್ಯಕ್ಷರಾದ ಎಚ್.ವಿ.ಸುರೇಶ್ ಕುಮಾರ್, ಕಿಶೋರ್, ಯೋಗೇಶ್, ಸದಸ್ಯರಾದ ಅಶ್ವಥ್, ಚಂದ್ರು, ಜೀವನ್, ಕಾರ್ತಿಕ್, ರಮೇಶ್, ಶ್ರೀನಿವಾಸ್, ಶಂಕರ್‌ ನಾರಾಯಣ್, ವಿಶ್ವಾಸ್, ಗೌತಮ್, ವಿಜೇತ್, ಇತರರು ಇದ್ದರು.