ಸಾರಾಂಶ
ನಾಡು, ನುಡಿ, ನೆಲ, ಜಲ,ಗಡಿ, ಭಾಷೆ ವಿಷಯವಾಗಿ ಸಮಸ್ಯೆ ಎದುರಾದಾಗ ಕನ್ನಡಿಗರು ಒಗ್ಗೂಡಬೇಕು. ಈ ವಿಷಯದಲ್ಲಿ ಆಟೋ ಚಾಲಕರು ಮೊದಲಿಗರಾಗಿ ಬರುತ್ತಾರೆ.
ಶ್ರೀರಂಗಪಟ್ಟಣ: ಎ.ಎಸ್.ಬಂಡಿಸಿದ್ದೇಗೌಡ ವೃತ್ತದಲ್ಲಿ ಶ್ರೀ ವಿನಾಯಕ ಆಟೋ ಚಾಲಕರು ಮತ್ತು ಮಾಲೀಕರ ಸಂಘ ಹಾಗೂ ವರ್ತಕರ ಸಂಘ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಸೆಸ್ಕ್ ಅಧ್ಯಕ್ಷ ಹಾಗೂ ಶಾಸಕ ಎ.ಬಿ. ರಮೇಶ ಬಂಡಿಸಿದ್ದೇಗೌಡ ಮಾತನಾಡಿ, ನಾಡು, ನುಡಿ, ನೆಲ, ಜಲ,ಗಡಿ, ಭಾಷೆ ವಿಷಯವಾಗಿ ಸಮಸ್ಯೆ ಎದುರಾದಾಗ ಕನ್ನಡಿಗರು ಒಗ್ಗೂಡಬೇಕು. ಈ ವಿಷಯದಲ್ಲಿ ಆಟೋ ಚಾಲಕರು ಮೊದಲಿಗರಾಗಿ ಬರುತ್ತಾರೆ ಎಂದರು. ಆಟೋ ಚಾಲಕರು ಪ್ರಯಾಣಿಕರು ಹಾಗೂ ಪ್ರವಾಸಿಗರಿಗೆ ಕನ್ನಡ ಗೊತ್ತುಪಡಿಸಿ ಕನ್ನಡ ನಾಡು, ನುಡಿ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ನಾಡು ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಅವರಿಂದಲೇ ಇದೀಗ ಕನ್ನಡ ಉಳಿದಿದೆ ಎಂದು ಹೇಳಿದರು. ಇದಕ್ಕೂ ಮುನ್ನ ಮಾಜಿ ಶಾಸಕಿ ವಿಜಯಲಕ್ಷ್ಮೀ ಬಂಡಿಸಿದ್ದೇಗೌಡ ಅವರು ಕನ್ನಡ ಧ್ವಜಾರೋಹಣ ಕಾರ್ಯ ನೆರವೇರಿಸಿದರು. ಈ ವೇಳೆ ಪುರಸಭೆ ಪ್ರಭಾರ ಅಧ್ಯಕ್ಷ ಎಂ.ಎಲ್ ದಿನೇಶ್ ಸೇರಿ ಇತರ ಮುಖಂಡರು ಆಟೋ ಚಾಲಕರ ಸಂಘದ ಸದಸ್ಯರು ಉಪಸ್ಥಿತರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))