ಎಳ್ಳಮಾವಾಸ್ಯೆ ಭೋಜನ ಸವಿದ ಕನ್ನಡ ರಥಯಾತ್ರೆ ಕಲಾವಿದರು

| Published : Jan 13 2024, 01:30 AM IST

ಸಾರಾಂಶ

ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲೂ ನಿಂಬರಗಾದಿಂದ ಬೆಳಮಗಿ ವರೆಗೆ ಕನ್ನಡ ರಥಯಾತ್ರೆ ಸಾಗಿದರೆ ಮತ್ತೊಂದಡೆ ಎಳ್ಳಮವಾಸ್ಯೆ ಹಬ್ಬವು ಎಂದಿನಂತೆ ರೈತರು ಸಂಭ್ರಮದಿಂದ ಆಚರಿಸಿದರು.

ಆಳಂದ: ಎಲ್ಲೆಯಲ್ಲೂ ಎಳ್ಳಮಾವಾಸ್ಯೆ ಹಬ್ಬದ ಸಂಭ್ರಮದ ನಡುವೆ ಪಟ್ಟಣಕ್ಕೆ ಆಗಮಿಸಿದ್ದ ಕರ್ನಾಟಕ ೫೦ರ ಸಂಭ್ರಮದ ರಥಯಾತ್ರೆಯ ಕಲಾವಿದರು ಯಾತ್ರೆಯ ಸಂಪನ್ನ ಬಳಿಕ ಎಳ್ಳಮಾವಾಸ್ಯೆ ಹಬ್ಬದ ಭೋರಿ ಭೋಜನ ಸವಿದು ಕನ್ನಡ ಭಾವುಟ ಬೀಸಿದರು.

ಪಟ್ಟಣದ ರೇವಣಸಿದ್ಧಪ್ಪಾ ನಾಗೂರೆ ದಂಪತಿಗಳು ತಮ್ಮ ಹೊಲದಲ್ಲಿ ಆಚರಿಸಿದ ಎಳ್ಳಮವಾಸ್ಯೆ ಹಬ್ಬದಂದು ಸ್ನೇಹ ಬಳಗಕ್ಕೆ ಹಬ್ಬದ ಊಟವನ್ನು ಏರ್ಪಡಿಸಿದ್ದರು.

ಈ ವೇಳೆ ಕನ್ನಡ ಕಲಾವಿದರನ್ನು ಸಹ ಆಮಂತ್ರಿಸಿ ಹಬ್ಬದ ಊಟ ಭಜ್ಜಿ ಕಡುಬು, ಶೇಂಗಾ ಮತ್ತು ಹೂರಣ ಹೂಳಿಗೆ, ಸಜ್ಜೆ ರೋಟಿ, ಮಜ್ಜಿಗೆ, ಅನ್ನ ಅಂಬಲಿ, ಹುಗ್ಗಿ, ಹಾಲು ಚಟ್ನಿ, ತುಪ್ಪಾ ಹೀಗೆ ನಾನಾ ತರಹದ ಸಿದ್ಧಪಡಿಸಿದ ಭೋಜನ ಸವಿದು ಕನ್ನಡ ರಥಯಾತ್ರೆಯ ಜೊತೆಗೆ ಹಬ್ಬದ ವಿಶೇಷತೆಯಲ್ಲೂ ಕಲಬುರಗಿಯ ಅಕ್ಷಯ ಡ್ಯಾನ್ಸ್‌ ಗ್ರೂಪ್‌ ಅಕ್ಷಯ ಯಾಕಪ್ಪ ಕಲಾತಂಡದ ಶರಣಮ್ಮಾ ಮಮಲರಗಾ, ಯಲ್ಲಪ್ಪ ಅನ್ನರೆಡ್ಡಿ, ಭವಾನಿ ಕವಲ್ದಾರ, ಅವಿನಾಶ ಭಜಂತ್ರಿ, ಗಂಗಾಮ್ಮ ಅನರೆಡ್ಡಿ ಸೇರಿ ಪಾಲ್ಗೊಂಡಿದ್ದರು.

ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲೂ ನಿಂಬರಗಾದಿಂದ ಬೆಳಮಗಿ ವರೆಗೆ ಕನ್ನಡ ರಥಯಾತ್ರೆ ಸಾಗಿದರೆ ಮತ್ತೊಂದಡೆ ಎಳ್ಳಮವಾಸ್ಯೆ ಹಬ್ಬವು ಎಂದಿನಂತೆ ರೈತರು ಸಂಭ್ರಮದಿಂದ ಆಚರಿಸಿದರು.