ಸಾರಾಂಶ
- ತರೀಕೆರೆಯಲ್ಲಿ ಕನ್ನಡದ ಜ್ಯೋತಿ ರಥಕ್ಕೆ ಅದ್ಧೂರಿ ಸ್ವಾಗತ
--ಕನ್ನಡಪ್ರಭ ವಾರ್ತೆ, ತರೀಕೆರೆ
ಕನ್ನಡದ ಅಸ್ಮಿತೆ ನಮ್ಮ ಕನ್ನಡದ ಜ್ಯೋತಿ ಎಂದು ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ಹೇಳಿದ್ದಾರೆ.
ಶನಿವಾರ ಮಂದ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆಂಗವಾಗಿ ರಾಜ್ಯಾದ್ಯಂತ ಕನ್ನಡ ಜ್ಯೋತಿ ರಥ ಸಂಚರಿಸುತ್ತಿದ್ದು ಪಟ್ಟಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಕನ್ನಡ ಜ್ಯೋತಿ ರಥಕ್ಕೆ ಅದ್ಧೂರಿ ಸ್ವಾಗತ ಕೋರಿದ ಕಾರ್ಯಕ್ರಮದಲ್ಲಿ ಮಾತನಾಡಿದರು.ಕನ್ನಡ ಜ್ಯೋತಿ ರಥ ನಮ್ಮ ಜಿಲ್ಗೆಗೆ ಆಗಮಿಸಿದೆ. ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತು ಕನ್ನಡದ ಅಸ್ಮಿತೆ. ನಮ್ಮ ಕನ್ನಡ ಜ್ಯೋತಿ ನಮ್ಮ ಸಾಮರಸ್ಯ ನಮ್ಮಸೌಭಾಗ್ಯವಾಗಿದೆ ಎಂದು ಹೇಳಿದರು.
ಉಪ ವಿಭಾಗಾಧಿಕಾರಿ ಡಾ,.ಕೆ.ಜಿ.ಕಾಂತರಾಜ್ ಮಾತನಾಡಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನಲೆಯಲ್ಲಿ ಪಟ್ಟಣಕ್ಕೆ ಆಗಮಿಸಿದ ಕನ್ನಡ ಜ್ಯೋತಿ ರಥವನ್ನು ಎಲ್ಲರೂ ಸಂಭ್ರಮ ಸ್ವಾಗತಿಸಿದ್ದೇವೆ. ಕನ್ನಡ ನಾಡಿನ ಇತಿಹಾಸ ತಿಳಿದುಕೊಳ್ಳಬೇಕು. ಕನ್ನಡ ಭಾಷೆ ಭವ್ಯತೆಯನ್ನು ಉಳಿಸಬೇಕು, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಮ್ಮ ಜಿಲ್ಲೆಯಲ್ಲಿ ನಡೆಯಬೇಕು ಎಂದು ಹೇಳಿದರು.ಪುರಸಭಾ ಮಾಜಿ ಅಧ್ಯಕ್ಷ ಎಂ.ನರೇಂದ್ರ ಮಾತನಾಡಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನಲೆಯಲ್ಲಿ ಪಟ್ಟಣಕ್ಕೆ ಆಗಮಿಸಿರುವ ಕನ್ನಡ ಜ್ಯೋತಿ ರಥವನ್ನು ಮುಖಂಡರು ಸಂಘ ಸಂಸ್ಥೆಗಳವರು ಅದ್ಧೂರಿ ಸ್ವಾಗತ ಕೋರಿದ್ದಾರೆ. ಕನ್ನಡ ಬದುಕಿನ ಭಾಷೆಯಾಗಿ ಬಳಸಿ ಕೊಳ್ಳಬೇಕು ಎಂದು ಹೇಳಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ರವಿ ದಳವಾಯಿ, ಯುವ ಒಕ್ಕೂಟದ ಜಿಲ್ಲಾಧ್ಯಕ್ಷ ಇಮ್ರಾನ್ ಅಹಮದ್ ಬೇಗ್ , ಪುರಸಭಾ ಮಾಜಿ ಆಧ್ಯಕ್ಷ ಟಿ.ಎಸ್.ರಮೇಶ್, ಕನ್ನಡಶ್ರೀ ಬಿ.ಎಸ್.ಭಗವಾನ್, ಕಸಾಪ ನಿಕಟಪೂರ್ವ ಅಧ್ಯಕ್ಷ ವನೀನ್ ಪೆನ್ನಯ್ಯ ಸಯದ್ ಮುಹಿಬುಲ್ಲಾ, ಜಯ ಕರ್ನಾಟಕ ತಾಲೂಕು ಸಂಘಟನೆ ಅಧ್ಯಕ್ಷ ಜಗದೀಶ್, ಸಂಗೊಳ್ಳಿ ರಾಯಣ್ಣ ಯುವ ವೇದಿಕೆ ಅಧ್ಯಕ್ಷ ಟಿ.ಸಿ.ದರ್ಶನ್, ಲೇಖಕ ತ.ಮ.ದೇವಾನಂದ್, ಪ್ರಹರ್ಷಿತ ವಿದ್ಯಾ ಸಂಸ್ಥೆ ಅಧ್ಯಕ್ಷ ಟಿ.ಆರ್.ಸೋಮಶೇಖರಯ್ಯ ಸ.ನೌ.ಸಂಘದ ನಿರ್ದೇಶಕ ಎಂ.ಬಿ.ರಾಮಚಂದ್ರಪ್ಪ, ಕೆಡಿಪಿ ಸದಸ್ಯ ಮೆಹಬೂಬ್ ಪೀರ್. ಪುರಸಭೆ ಸದಸ್ಯರಾದ ಹಳಿಯೂರು ಕುಮಾರಪ್ಪ, ಅಬ್ಬಾಸ್, ಉಪನ್ಯಾಸಕ ದಾದಾಪೀರ್, ಬ್ಲಾಕ್ ಕಾಂಗ್ಸೆಸ್ ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಮಹಮದ್ ಇರ್ಷಾದ್, ಕಜಾಪ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎಂ.ಎಸ್.ವಿಶಾಲಾಕ್ಷಮ್ಮ, ತಾ.ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಸುನಿತಾ ಕಿರಣ್, ಲತಾ ಗೋಪಾಲಕೃಷ್ಣ, ಲಕ್ಷ್ಮೀಭಗವಾನ್ , ಜನಪ್ರತಿನಿಧಿಗಳು, ಕಂದಾಯ ಇಲಾಖೆ ಅಧಿಕಾರಿ ಸಿಬ್ಬಂದಿ ವರ್ಗದವರು ಪುರಸಭೆ ಸಿಬ್ಬಂದಿ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಗ್ರೇಡ್-2 ತಹಸೀಲ್ದಾರ್ ಡಾ.ನೂರುಲ್ ಹುದಾ ತರೀಕೆರೆ ತಾಲೂಕಿನ ಗಡಿಯಲ್ಲಿ ಕನ್ನಡ ಜ್ಯೋತಿ ರಥ ಸ್ವಾಗತಿಸಿದರು. ಪಟ್ಟಣಕ್ಕೆ ಆಗಮಿಸಿದ ಕನ್ನಡದ ಜ್ಯೋತಿ ರಥವನ್ನು ಶ್ರೀ ಸಾಲುಮರದಮ್ಮನ ದೇವಸ್ಥಾನದ ಬಳಿ ಪುಷ್ಟಾರ್ಚನೆ ಮತ್ತು ಆರತಿ ಬೆಳಗಿ ಅದ್ಧೂರಿಯಾಗಿ ಸ್ವಾಗತಿಸಿ ಮಹತ್ಮಾಗಾಂಧಿ ವೃತ್ತದವರೆಗೆ ಮೆರವಣಿಗೆ ನಡೆಸಲಾಯಿತು.
3ಕೆಟಿಆರ್.ಕೆ.1ಃತರೀಕೆರೆಗೆ ಅಗಮಿಸಿದ ಕನ್ನಡ ಜ್ಯೋತಿ ರಥಕ್ಕೆ ಅದ್ದೂರಿ ಸ್ವಾಗತ ಕೋರಲಾಯಿತು.