ಕನ್ನಡ ನಾಡು ಉಳಿವಿಗೆ ಕನ್ನಡ ಸಾಹಿತ್ಯ ಪರಿಷತ್ ನಿರಂತರ ಶ್ರಮ: ಡಾ.ಮೀರಾ ಶಿವಲಿಂಗಯ್ಯ

| Published : May 06 2024, 12:32 AM IST

ಕನ್ನಡ ನಾಡು ಉಳಿವಿಗೆ ಕನ್ನಡ ಸಾಹಿತ್ಯ ಪರಿಷತ್ ನಿರಂತರ ಶ್ರಮ: ಡಾ.ಮೀರಾ ಶಿವಲಿಂಗಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಸ್ತುತ ದಿನಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವಿಶ್ವಮಟ್ಟದಲ್ಲೂ ಪಸರಿಸಿಕೊಂಡಿದೆ. ಕನ್ನಡ ಸಾಕ್ಷಿ ಪ್ರಜ್ಞೆಯಾಗಿ ಕಾರ್ಯ ನಿರ್ವಹಿಸುತ್ತಿದೆ. ಗ್ರಾಮ ಮಟ್ಟದವರೆಗೂ ವಿಸ್ತರಿಸಿ ನಾಡು-ನುಡಿ ಉಳಿಸಲು ಹೋರಾಟ ಮಾಡುತ್ತಿದೆ. ಕನ್ನಡದ ತೇರು ಎಳೆಯಲು, ಕನ್ನಡ ಭಾಷಿಕರನ್ನು ಒಗ್ಗೂಡಿಸುವ ಕೆಲಸ ಕಸಾಪ ಮಾಡಿಕೊಂಡು ಬಂದಿರುವುದು ಶ್ಲಾಘನೀಯ. ಪರಿಷತ್ ಬೆಳೆದು ಬಂದ ಹಾದಿ ತಿಳಿಯುವುದು ಅನಿವಾರ್ಯವಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕನ್ನಡ ನಾಡು-ನುಡಿ ಬೆಳವಣಿಗೆ, ಸಂರಕ್ಷಣೆ, ಭಾಷೆ ಉಳಿವಿಗಾಗಿ ಕನ್ನಡ ಸಾಹಿತ್ಯ ಪರಿಷತ್ತು ನಿರಂತರವಾಗಿ ಶ್ರಮಿಸುತ್ತಿದೆ ಎಂದು ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷೆ ಡಾ.ಮೀರಾಶೀರಂಗಯ್ಯ ಹೇಳಿದರು.

ನಗರದ ಕಸಾಪ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ 110ನೇ ಸಂಸ್ಥಾಪನಾ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿ, ಕನ್ನಡ ನಾಡು, ನುಡಿ ಬೆಳವಣಿಗೆ ಜೊತೆಗೆ ಕನ್ನಡ ಮಾತನಾಡುವವರನ್ನು ಒಗ್ಗೂಡಿಸುವಲ್ಲಿ ಕಸಾಪ ಪರಿಶ್ರಮ ಅತ್ಯಮೂಲ್ಯ ಎಂದರು.

ನಾಡದೊರೆ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಸರ್.ಎಂ.ವಿಶ್ವೇಶ್ವರಯ್ಯನವರ ದೂರದೃಷ್ಟಿತ್ವದ ಫಲವಾಗಿ ಇಂದು ನಮ್ಮ ಕಣ್ಣಮುಂದಿದೆ. ವಿಶ್ವದಾದ್ಯಂತ ವಿಶಾಲವಾಗಿ ಕನ್ನಡ ಪ್ರೇಮ ಬೆಳೆಸಲು ಸಾಧ್ಯವಾಗುತ್ತಿದೆ ಎಂದರು.

ಪ್ರಸ್ತುತ ದಿನಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವಿಶ್ವಮಟ್ಟದಲ್ಲೂ ಪಸರಿಸಿಕೊಂಡಿದೆ. ಕನ್ನಡ ಸಾಕ್ಷಿ ಪ್ರಜ್ಞೆಯಾಗಿ ಕಾರ್ಯ ನಿರ್ವಹಿಸುತ್ತಿದೆ. ಗ್ರಾಮ ಮಟ್ಟದವರೆಗೂ ವಿಸ್ತರಿಸಿ ನಾಡು-ನುಡಿ ಉಳಿಸಲು ಹೋರಾಟ ಮಾಡುತ್ತಿದೆ ಎಂದರು.

ಕನ್ನಡದ ತೇರು ಎಳೆಯಲು, ಕನ್ನಡ ಭಾಷಿಕರನ್ನು ಒಗ್ಗೂಡಿಸುವ ಕೆಲಸ ಕಸಾಪ ಮಾಡಿಕೊಂಡು ಬಂದಿರುವುದು ಶ್ಲಾಘನೀಯ. ಪರಿಷತ್ ಬೆಳೆದು ಬಂದ ಹಾದಿ ತಿಳಿಯುವುದು ಅನಿವಾರ್ಯವಾಗಿದೆ. ಕನ್ನಡ ಪುಸ್ತಕಗಳ ಪ್ರಕಟಣೆ, ಕನ್ನಡ ನಾಡು-ನುಡಿ ಬೆಳವಣಿಗೆ, ಸಂರಕ್ಷಣೆ, ಕನ್ನಡ ಭಾಷೆ ಉಳಿವಿಗೆ ಸಾಹಿತ್ಯ ಸಮ್ಮೇಳನ ನಡೆಸುವುದು ಪರಿಷತ್ತಿನ ಧ್ಯೇಯವಾಗಿದೆ ಎಂದರು.

ಇದೇ ವೇಳೆ ಜನಸಾಮಾನ್ಯರತ್ತ ಕನ್ನಡ ಸಾಹಿತ್ಯ ಪರಿಷತ್ತು ಎಂಬ ವಿಷಯದ ಬಗ್ಗೆ ಸಾಹಿತಿ ಡಾ.ಶ್ರೀನಿವಾಸ್ ಶೆಟ್ಟಿ ವಿಶೇಷ ಉಪನ್ಯಾಸ ನೀಡಿದರು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ. ಕೃಷ್ಣೇಗೌಡ ಹುಸ್ಕೂರು ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷ ಪ್ರೊ. ಬಿ.ಟಿ.ವೀರಪ್ಪ, ತಾಲೂಕು ಮಾಜಿ ಅಧ್ಯಕ್ಷ ಎಂ.ಆರ್.ಮಂಜು ಮುತ್ತೆಗೆರೆ, ಜಿಲ್ಲಾ ಕೋಶಾಧ್ಯಕ್ಷ ಬಿ.ಎಂ.ಅಪ್ಪಾಜಪ್ಪ, ನಗರ ಘಟಕ ಅಧ್ಯಕ್ಷೆ ಸುಜಾತ ಕೃಷ್ಣ, ತಾಲೂಕು ಅಧ್ಯಕ್ಷ ಚಂದ್ರಲಿಂಗು, ಪದಾಧಿಕಾರಿಗಳಾದ ಭಾಸ್ಕರ್, ಎಲ್.ಕೃಷ್ಣ ಸೇರಿದಂತೆ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಹಾಜರಿದ್ದರು.