ಆಂಗ್ಲಭಾಷೆ ವ್ಯಾಮೋಹದಿಂದ ಕನ್ನಡ ಶಾಲೆಗಳಿಗೆ ಕುತ್ತು: ಚಂದ್ರಶೇಖರಪ್ಪ ಗೌಡ

| Published : Aug 12 2024, 12:46 AM IST

ಆಂಗ್ಲಭಾಷೆ ವ್ಯಾಮೋಹದಿಂದ ಕನ್ನಡ ಶಾಲೆಗಳಿಗೆ ಕುತ್ತು: ಚಂದ್ರಶೇಖರಪ್ಪ ಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮೀಣ ಪ್ರದೇಶಗಳ ಪೋಷಕರಲ್ಲಿ ಆಂಗ್ಲ ಭಾಷಾ ವ್ಯಾಮೋಹ ಹೆಚ್ಚಾಗುತ್ತಿದೆ. ಇದರಿಂದ ಕನ್ನಡ ಶಾಲೆಗಳು ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಜಾನಪದ ಕಲಾವಿದ ಸೋಗಿಲು ಎಸ್.ಪಿ.ಚಂದ್ರಶೇಖರಪ್ಪ ಗೌಡ ಹೊನ್ನಾಳಿಯಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಗ್ರಾಮೀಣ ಪ್ರದೇಶಗಳ ಪೋಷಕರಲ್ಲಿ ಆಂಗ್ಲ ಭಾಷಾ ವ್ಯಾಮೋಹ ಹೆಚ್ಚಾಗುತ್ತಿದೆ. ಇದರಿಂದ ಕನ್ನಡ ಶಾಲೆಗಳು ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಜಾನಪದ ಕಲಾವಿದ ಸೋಗಿಲು ಎಸ್.ಪಿ.ಚಂದ್ರಶೇಖರಪ್ಪಗೌಡ ಆತಂಕ ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯ ಪರಿಷತ್ತು ನ್ಯಾಮತಿ ತಾಲೂಕು ಘಟಕದಿಂದ ಕಸಾಪ ಕಚೇರಿಯಲ್ಲಿ ಶನಿವಾರ ಸಂಜೆ ನಡೆದ 5ನೇ ಮಾಸಿಕ ಸಾಹಿತ್ಯ ಸೌರಭ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಸಾಪ ಹಮ್ಮಿಕೊಂಡಿರುವ ಸಾಹಿತ್ಯ ಸೌರಭ ಕಾರ್ಯಕ್ರಮದಿಂದ ಸ್ಥಳೀಯ ಪ್ರತಿಭೆಗಳನ್ನು ಬೆಳಕಿಗೆ ತರಲು ಅವಕಾಶವಾಗುತ್ತದೆ ಎಂದರು.

ಸುರಹೊನ್ನೆ ಗ್ರಾಮದ ಬಸವೇಶ್ವರ ಭಜನಾ ಸಂಘದ ಮೀನಾಕ್ಷಿ ಮಾತನಾಡಿ, ಭಜನೆ ಕಲಿಯುವ ರೀತಿ, ಅದರಿಂದ ಆಗುವ ಉಪಯೋಗಳ ಕುರಿತು ಭಜನೆ ಹಾಡುಗಳನ್ನು ತಿಳಿಸಿದರು. ರಾಮೇಶ್ವರದ ಯುವರೈತ ನಾಗರಾಜ ಅವರು, ಕೃಷಿಯ ವಿವಿಧ ಪ್ರಕಾರಗಳ ಬಗ್ಗೆ ತಿಳಿಸಿದರು. ಚೀಲೂರು ಗ್ರಾಮದ ನಾಟಿ ವೈದ್ಯರು ನಮ್ಮ ಪರಿಸರದ ಸುತ್ತಮುತ್ತ ಸಿಗುವ ಅನೇಕ ಗಿಡಮೂಲಿಕೆಗಳ ಉಪಯೋಗದ ಬಗ್ಗೆ ವಿವರಿಸಿದರು.

ಕವಿತಾ ಬಳಿಗಾರ ರಾಮಾಯಣದ ಊರ್ಮಿಳೆಯ ಬಗ್ಗೆ ಮಾಹಿತಿ ನೀಡಿದರು. ಪಶು ಆಸ್ಪತ್ರೆ ಸೌಲಭ್ಯಗಳ ಬಗ್ಗೆ ಜಾನುವಾರು ಅಧಿಕಾರಿ ಎ.ನಾಗರಾಜಪ್ಪ ಮಾಹಿತಿ ನೀಡಿದರು. ಕೆ.ಟಿ.ಸತ್ಯನಾರಾಯಣ, ಸಾಹಿತಿ ನಾಗರಾಜಪ್ಪ ಅರ್ಕಚಾರ್, ಆರುಂಡಿ ಮಂಜಪ್ಪ, ಪುಷ್ಪಾ, ಕದಳಿ ಸಂಘದ ಅಧ್ಯಕ್ಷೆ ಅಂಬಿಕಾ, ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸಿ.ಕೆ. ಭೋಜರಾಜ, ನವೀನ, ಆಚೆಮನೆ ತಿಪ್ಪೇಸ್ವಾಮಿ, ಬಿ.ಜಿ. ಚೈತ್ರಾ, ಜಿ.ನಿಜಲಿಂಗಪ್ಪ, ಸೊಂಡೂರು ಮಹೇಶ್ವರಪ್ಪ, ಎಂ.ಬಿ. ಶಿವಯೋಗಿ ಸಾಹಿತ್ಯ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಿ.ಎಂ. ಹಾಲಾರಾಧ್ಯ, ಗೌರವ ಕಾರ್ಯದರ್ಶಿ ಎಸ್.ಜಿ. ಬಸವರಾಜಪ್ಪ, ಸಂಘಟನಾ ಕಾರ್ಯದರ್ಶಿಗಳಾದ ಎಂ.ಎಸ್.ಜಗದೀಶ ಮತ್ತು ಈ ಸುಮಾಲತಾ, ಸುರೇಶಬಾಬು ಸೊಂಡೂರು, ಆರುಂಡಿ ಕರಿಗೌಡರ ನಾಗರಾಜಪ್ಪ, ರೇಖಾಗಜಾನನ, ಕುಮಾರ ಸೂರಜ್ ಉಪಸ್ಥಿತರಿದ್ದರು.

- - - ** (ಈ ಪೋಟೋ ಕ್ಯಾಪ್ಷನ್‌ ಪ್ಯಾನೆಲ್‌ಗೆ ಬಳಸಿದರು)-11ಎಚ್.ಎಲ್.ಐ1:

ಹೊನ್ನಾಳಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ನ್ಯಾಮತಿ ಘಟಕ ವತಿಯಿಂದ ಕಸಾಪ ಕಚೇರಿಯಲ್ಲಿ ಶನಿವಾರ ನಡೆದ 5ನೇ ಮಾಸಿಕ ಸಾಹಿತ್ಯ ಸೌರಭ ಕಾರ್ಯಕ್ರಮ ನಡೆಯಿತು. ಕಲಾವಿದ ಸೋಗಿಲು ಎಸ್.ಪಿ.ಚಂದ್ರಶೇಖರಪ್ಪಗೌಡ, ಮೀನಾಕ್ಷಿ, ನಾಘರಾಜ, ಡಿ.ಎಂ. ಹಾಲಾರಾಧ್ಯ ಮತ್ತಿತರರು ಗಣ್ಯರು, ಕನ್ನಡ ಅಭಿಮಾನಿಗಳು ಪಾಲ್ಗೊಂಡರು.