ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಬಸವಾದಿ ಶರಣರು ಕಲ್ಯಾಣ ನಾಡು ಬೆಳಗಿರುವ ಕಲ್ಯಾಣ ಕ ಎಂಬ ಅಕ್ಷರದ ಮೂಲಕ ಕಲ್ಯಾಣ ಮಂಟಪ ಕಟ್ಟಿದರು. ಕಾಶ್ಮೀರ ಕನ್ಯಾಕುಮಾರಿ ಹೀಗೆ ಎಲ್ಲವನ್ನು ಕನ್ನಡದಿಂದ ಕಟ್ಟಲಾಗಿದೆ. ಇದನ್ನು ನೋಡಿದಾಗ ಕಸ್ತೂರಿ ಕನ್ನಡ ಎಲ್ಲೆಡೆಯೂ ಹರಡಿರುವುದನ್ನು ಸಾಹಿತಿಗಳು ತಮ್ಮ ಕವಿತೆಗಳಲ್ಲಿ ಮನಮುಟ್ಟುವಂತೆ ಬರೆದಿದ್ದಾರೆ ಎಂದು ಸುಕ್ಷೇತ್ರ ಮುಕ್ತಿ ಮಠದ ಶಿವಸಿದ್ದ ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ತಾಲೂಕಿನ ಕಾಕತಿಯ ಶ್ರೀಸಿದ್ದೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸೋಮವಾರ ಆಯೋಜಿಸಿದ್ದ ಬೆಳಗಾವಿ ತಾಲೂಕು 10ನೇ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಆಂಗ್ಲರು ಬಳಸಿದ ಕರ್ನಾಟಕ ಪದ ಕರುನಾಡು ಎಂದು ಮರುನಾಮಕರಣವಾಗಬೇಕು. ಸರ್ಕಾರ ಮಿನಿವಿಧಾನಸೌಧ ಹಸಿರುಸೌಧ ಅಥವಾ ಕನ್ನಡಸೌಧ ಎಂದು ಬಳಸಬೇಕು. ಈ ನಿಟ್ಟಿನಲ್ಲಿ ನಾಡಿನ ಕನ್ನಡಿಗರಲ್ಲ ಎಚ್ಚೆತ್ತುಕೊಳ್ಳಬೇಕು. ಹೃದಯಯ ಕನ್ನಡ ಭಾಷೆವನ್ನು ಯುವ ಪೀಳಿಗೆ ಉಳಿಸಿ ಬೆಳೆಸಿಕೊಂಡು ಸಾಗಬೇಕು ಎಂದರು.ಯುವ ನಾಯಕ ರಾಹುಲ್ ಜಾರಕಿಹೊಳಿ ಮಾತನಾಡಿ, ಕನ್ನಡ ಭಾಷೆ ಪುರಾತನ ಭಾಷೆಯಾಗಿದ್ದು, ಇಡೀ ವಿಶ್ವದಲ್ಲೇ ಅತ್ಯಂತ ಶ್ರೀಮಂತ ಹಾಗೂ ಸಮೃದ್ಧಿಯಾದ ಭಾಷೆಯಾಗಿದೆ. ಕನ್ನಡ ಸಂಸ್ಕೃತಿ, ಇತಿಹಾಸ ತಿಳಿದುಕೊಳ್ಳುವ ಪ್ರಯತ್ನವನ್ನು ಯುವ ಪೀಳಿಗೆ ಮಾಡಬೇಕಿದೆ ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷೆ ಮಂಗಲ ಮೆಟಗುಡ್ಡ ಮಾತನಾಡಿ, ಸಾಹಿತ್ಯ ಸಮ್ಮೇಳನಕ್ಕೆ ಪ್ರೋತ್ಸಾಹ ನೀಡಬೇಕಿದ್ದ ಸರ್ಕಾರಗಳು ಅಸಡ್ಡೆ ತೊರುತ್ತಿವೆ. ಸಚಿವ ಸತೀಶ ಜಾರಕಿಹೊಳಿ ಅವರು ಕನ್ನಡ ಸಾಹಿತ್ಯ ಎಲ್ಲಾ ಕಾರ್ಯಕ್ರಮಕ್ಕೆ ಸಹಾಯ, ಸಹಕಾರ ನೀಡುತ್ತಾ ಬಂದಿದ್ದಾರೆ. ಅವರ ಕನ್ನಡಾಭಿಮಾನವೇ ಈ ಕಾರ್ಯಕ್ರಮಕ್ಕೆ ಬಲ ಬಂದತಾಗಿದೆ ಎಂದು ಹೇಳಿದರು.ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಶೈಲಜಾ ಭಿಂಗೆ ಮಾತನಾಡಿ, ಕಾಕತಿಗೆ ಐತಿಹಾಸಿಕತೆ ಇದೆ. ಕನ್ನಡ ಸಾಹಿತ್ಯವೂ ಇಲ್ಲಿ ಲೀಲಾಜಾಲವಾಗಿ ಬೆಳೆದುಬಂದಿದೆ. ಬಹುಬಾಷೆ ಇದ್ದರೂ ಸಹಿತ ಗಡಿ ತಾಲೂಕಿನಲ್ಲಿ ಇತ್ತೀಚಿಗೆ ಭಾಷಾ ಬಾಂಧವ್ಯ ಎದ್ದು ಕಾಣುತ್ತಿದೆ. ಇದಕ್ಕೆ ಪೂರಕವಾಗಿ ಬೆಳಗಾವಿ ರುದ್ರಾಕ್ಷಿಮಠದ ಕನ್ನಡ ಕೈಂಕರ್ಯ ಮೆಚ್ಚುವಂತದ್ದು. ಕೇವಲ ಸಾಹಿತಿಗಳು, ಬರಹರಾರರು, ಲೇಖಕರಿಂದ ಮಾತ್ರ ಕನ್ನಡ ಗಟ್ಟಿಯಾಗಿಲ್ಲ. ಕೆಎಲ್‌ಇ, ಗೋಮಟೇಶ, ಭರತೇಶನಂತಹ ಅನೇಕ ಶಿಕ್ಷಣ ಸಂಸ್ಥೆಗಳು ಕನ್ನಡ ಉಳಿವಿಗೆ ಸೇವೆ ಸಲ್ಲಿಸಿವೆ ಎಂದರು.
ಸಮ್ಮೇಳನಾಧ್ಯಕ್ಷರ ಮೆರವಣಿಗೆ:ಕಾಕತಿಯ ಪೊಲೀಸ್ ಠಾಣೆಯಿಂದ ಶ್ರೀಸಿದ್ದೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದವರೆಗೂ ಬೆಳಗಾವಿ ತಾಲೂಕು 10ನೇ ಸಾಹಿತ್ಯ ಸಮ್ಮೇಳನ ಮೆರವಣಿಗೆ ಜರುಗಿತು. ಈ ವೇಳೆ ಸಾಧಕರಿಗೆ ಸನ್ಮಾನಿಸಲಾಯಿತು. ಸುದ್ದಿಗೋಷ್ಠಿ, ಕವಿಗೋಷ್ಠಿ ಕಾರ್ಯಕ್ರಮ ಜರುಗಿದವು. ಸಮ್ಮೇಳನದ ಸರ್ವಾಧ್ಯಕ್ಷೆ ಶೈಲಜಾ ಭಿಂಗೆ, ತಾಲೂಕು ಸಾಹಿತ್ಯ ಸಮ್ಮೇಳನದ ಉಸ್ತುವಾರಿ ಅಶೋಕ ಖೋತ, ತಾಪಂ ಮಾಜಿ ಸದಸ್ಯ ಯಲ್ಲಪ್ಪ ಕೋಳೆಕರ, ಶಿವಾ ಆಪಸೆಟ್ ಸಂಸ್ಥಾಪಕ ಶಿವು ನಂದಗಾವಿ, ಸಿದ್ದು ಸುಣಗಾರ, ಸಚಿವರ ಆಪ್ತ ಸಹಾಯಕ ಮಲಗೌಡ ಪಾಟೀಲ, ಖ್ಯಾತ ವೈದ್ಯ ಗಿರೀಶ ಸೋನವಾಲ್ಕರ್, ಬೆಳಗಾವಿ ಲೇಖಕಿಯರ ಸಂಘದ ಅಧ್ಯಕ್ಷೆ ಸುಮಾ ಕಿತ್ತೂರು ಅಧ್ಯಕ್ಷತೆ ವಹಿಸುವರು. ಡಾ.ಜ್ಯೋತಿರ್ಲಿಂಗ ಹೊನಕಟ್ಟಿ, ಡಾ.ಹೇಮಾ ಸೊನೊಳ್ಳಿ, ಬೆಳಗಾವಿ ತಾಲೂಕಿನ ಕನಾಪ ಅಧ್ಯಕ್ಷ ಸುರೇಶ ಹಂಜಿ, ಎಂ.ವೈ. ಮೆಣಸಿನಕಾಯಿ, ಹೇಮಾ ಕಾಜಗಾರ, ಶಿವಾನಂದ ತಲ್ಲೂರ, ವಿ.ಎಂ. ಅಂಗಡಿ, ಪ್ರಬಾವತಿ ಹಿರೇಮಠ, ಬಿಇಒ ರವಿ ಭಜಂತ್ರಿ, ಯಲ್ಪಪ್ಪ ಕಿಲೇಕರ್ ಪ್ರಾಸ್ತಾವಿಕ ಮಾತನಾಡಿದರು. ಬೆಳಗಾವಿ ಲೇಖಕಿಯರ ಸಂಘದ ಅಧ್ಯಕ್ಷೆ ಸುಮಾ ಕಿತ್ತೂರು ಅಧ್ಯಕ್ಷತೆ ವಹಿಸಿದ್ದರು. ಡಾ.ಜ್ಯೋತಿರ್ಲಿಂಗ ಹೊನಕಟ್ಟಿ, ಡಾ.ಹೇಮಾ ಸೊನೊಳ್ಳಿ, ಎಂ.ವೈ. ಮೆಣಸಿನಕಾಯಿ, ಹೇಮಾ ಕಾಜಗಾರ, ಶಿವಾನಂದ ತಲ್ಲೂರ ಹಾಗೂ ಇತರರು ಇದ್ದರು.