ಐಕಳ ಬಾವ ಕಾಂತಾಬಾರೆ - ಬೂದಾಬಾರೆ ಜೋಡುಕರೆ ಕಂಬಳ ಕೂಟದ ಫಲಿತಾoಶ

| Published : Feb 05 2024, 01:47 AM IST

ಐಕಳ ಬಾವ ಕಾಂತಾಬಾರೆ - ಬೂದಾಬಾರೆ ಜೋಡುಕರೆ ಕಂಬಳ ಕೂಟದ ಫಲಿತಾoಶ
Share this Article
  • FB
  • TW
  • Linkdin
  • Email

ಸಾರಾಂಶ

ಕನೆಹಲಗೆ ವಿಭಾಗದಲ್ಲಿ 8 ಜೊತೆ, ಅಡ್ಡಹಲಗೆ 6 ಜೊತೆ, ಹಗ್ಗ ಹಿರಿಯ 15 ಜೊತೆ, ನೇಗಿಲು ಹಿರಿಯ 27 ಜೊತೆ, ಹಗ್ಗ ಕಿರಿಯ 21 ಜೊತೆ, ನೇಗಿಲು ಕಿರಿಯ 99 ಜೊತೆ ಸೇರಿದಂತೆ ಒಟ್ಟು 176 ಜೊತೆ ಕೋಣಗಳು ಭಾಗವಹಿಸಿದ್ದವು.

ಕನ್ನಡಪ್ರಭ ವಾರ್ತೆ ಮೂಲ್ಕಿ

ಐಕಳದಲ್ಲಿ ನಡೆದ ಐಕಳ ಬಾವ ಕಾಂತಾಬಾರೆ - ಬೂದಾಬಾರೆ ಜೋಡುಕರೆ ಕಂಬಳದಲ್ಲಿ ಕನೆಹಲಗೆ ವಿಭಾಗದಲ್ಲಿ 8 ಜೊತೆ, ಅಡ್ಡಹಲಗೆ 6 ಜೊತೆ, ಹಗ್ಗ ಹಿರಿಯ 15 ಜೊತೆ, ನೇಗಿಲು ಹಿರಿಯ 27 ಜೊತೆ, ಹಗ್ಗ ಕಿರಿಯ 21 ಜೊತೆ, ನೇಗಿಲು ಕಿರಿಯ 99 ಜೊತೆ ಸೇರಿದಂತೆ ಒಟ್ಟು 176 ಜೊತೆ ಕೋಣಗಳು ಭಾಗವಹಿಸಿದ್ದವು.

ಕನೆಹಲಗೆ ವಿಭಾಗದಲ್ಲಿ ಪ್ರಥಮ ಬೋಳಾರ ತ್ರಿಶಾಲ್ ಕೆ. ಪೂಜಾರಿ, ಹಲಗೆ ಮುಟ್ಟಿದವರು: ಬೈಂದೂರು ಮಹೇಶ್ ಪೂಜಾರಿ, ದ್ವಿತೀಯ: ಕಾಂತಾವರ ಬೇಲಾಡಿ ಬಾವ ಅಶೋಕ್ ಶೆಟ್ಟಿ. ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ. ಅಡ್ಡ ಹಲಗೆ ವಿಭಾಗದಲ್ಲಿ ಪ್ರಥಮ ಬೋಳಾರ ತ್ರಿಶಾಲ್ ಕೆ. ಪೂಜಾರಿ, ಹಲಗೆ ಮುಟ್ಟಿದವರು: ಸಾವ್ಯ ಗಂಗಯ್ಯ ಪೂಜಾರಿ, ದ್ವಿತೀಯ ಪೆರಿಯಾವು ಗುತ್ತು ನವೀನ್ಚಂದ್ರ ಗಟ್ಟಿಯಾಳ್, ಹಲಗೆ ಮುಟ್ಟಿದವರು ತೆಕ್ಕಟ್ಟೆ ಸುಧೀರ್ ದೇವಾಡಿಗ.ಹಗ್ಗ ಹಿರಿಯ ವಿಭಾಗದಲ್ಲಿ ಪ್ರಥಮ ಕೊಳಕೆ ಇರ್ವತ್ತೂರು ಭಾಸ್ಕರ ಎಸ್. ಕೋಟ್ಯಾನ್, ಓಡಿಸಿದವರು: ಕೊಳಕೆ ಇರ್ವತ್ತೂರು ಆನಂದ್, ದ್ವಿತೀಯ ನಂದಳಿಕೆ ಶ್ರೀಕಾಂತ್ ಭಟ್, ಓಡಿಸಿದವರು ಬೈಂದೂರು ಮಂಜುನಾಥ ಗೌಡ.

ಹಗ್ಗ ಕಿರಿಯ ವಿಭಾಗದಲ್ಲಿ ಪ್ರಥಮ: ಸುರತ್ಕಲ್ ಪಾಂಚಜನ್ಯ ಯೋಗಿಶ್ ಪೂಜಾರಿ, ಓಡಿಸಿದವರು: ಭಟ್ಕಳ ಶಂಕರ್, ದ್ವಿತೀಯ ಬೆಳುವಾಯಿ ಪೆರೋಡಿ ಪುತ್ತಿಗೆಗುತ್ತು ಕೌಶಿಕ್ ದಿನಕರ್ ಶೆಟ್ಟಿ, ಓಡಿಸಿದವರು ಕಾವೂರು ದೋಟ ಸುದರ್ಶನ್.ನೇಗಿಲು ಹಿರಿಯದಲ್ಲಿ ಪ್ರಥಮ: ವರಪಾಡಿ ಬಡಗುಮನೆ ದಿವಾಕರ ಚೌಟ, ಓಡಿಸಿದವರು: ಪಟ್ಟೆ ಗುರುಚರಣ್, ದ್ವಿತೀಯ: ನಕ್ರೆ ಮಹೋಧರ ನಿವಾಸ ಇಶಾನಿ ತುಕ್ರ ಭಂಡಾರಿ,ಓಡಿಸಿದವರು: ಮಾಳ ಆಧೀಶ್ ಪೂಜಾರಿ. ನೇಗಿಲು ಕಿರಿಯದಲ್ಲಿ ಪ್ರಥಮ: ಮಿಜಾರು ಹರಿಮೀನಾಕ್ಷಿ ತೋಟ ಹರಿಯಪ್ಪ ಶೆಟ್ಟಿ, ಓಡಿಸಿದವರು ಪಣಪಿಲ ಪ್ರವೀಣ್ ಕೋಟ್ಯಾನ್, ದ್ವಿತೀಯ ಮಾಳ ಕಲ್ಲೇರಿ ಶರತ್ ಶೆಟ್ಟಿ, ಓಡಿಸಿದವರು ನತೀಶ್ ಬಾರಾಡಿ.