ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸರ್ವ ಸದಸ್ಯರ ತೀರ್ಮಾನದಂತೆ ಅಧ್ಯಕ್ಷರಾಗಿ ವಿಜಯವಾಣಿ ಪತ್ರಿಕೆಯ ಹಿರಿಯ ವರದಿಗಾರ ಕಾಂತರಾಜ್ ಹೊನ್ನೆಕೋಡಿ, ಉಪಾಧ್ಯಕ್ಷರಾಗಿ ಉದಯವಾಣಿ ಪತ್ರಿಕೆಯ ತಾಲೂಕು ವರದಿಗಾರ ಸುಧೀರ್ ಎಸ್.ಎಲ್ ಹಾಗೂ ಹಾಸನವಾಣಿ ಪತ್ರಿಕೆಯ ವರದಿಗಾರ ನವೀನ್ ಸದಾ, ಪ್ರಧಾನ ಕಾರ್ಯದರ್ಶಿಯಾಗಿ ಪ್ರಜೋದಯ ಪತ್ರಿಕೆಯ ವರದಿಗಾರ ಅಕ್ಬರ್‌ ಜುನೈದ್, ಕಾರ್ಯದರ್ಶಿಗಳಾಗಿ ಹಲೋಹಾಸನ ಪತ್ರಿಕೆಯ ಪ್ರವೀಣ್ ಹಾಗೂ ಸಂಯುಕ್ತ ಕರ್ನಾಟಕ ಪತ್ರಿಕೆಯ ನವೀನ್ , ಖಚಾಂಚಿಯಾಗಿ ಜನಮಿತ್ರ ಪತ್ರಿಕೆಯ ವರದಿಗಾರ ಯೋಗೇಶ್ ಆಯ್ಕೆಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಸಕಲೇಶಪುರ

ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ 2026-28ನೇ ಸಾಲಿಗೆ ನೂತನ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸರ್ವ ಸದಸ್ಯರ ತೀರ್ಮಾನದಂತೆ ಅಧ್ಯಕ್ಷರಾಗಿ ವಿಜಯವಾಣಿ ಪತ್ರಿಕೆಯ ಹಿರಿಯ ವರದಿಗಾರ ಕಾಂತರಾಜ್ ಹೊನ್ನೆಕೋಡಿ, ಉಪಾಧ್ಯಕ್ಷರಾಗಿ ಉದಯವಾಣಿ ಪತ್ರಿಕೆಯ ತಾಲೂಕು ವರದಿಗಾರ ಸುಧೀರ್ ಎಸ್.ಎಲ್ ಹಾಗೂ ಹಾಸನವಾಣಿ ಪತ್ರಿಕೆಯ ವರದಿಗಾರ ನವೀನ್ ಸದಾ, ಪ್ರಧಾನ ಕಾರ್ಯದರ್ಶಿಯಾಗಿ ಪ್ರಜೋದಯ ಪತ್ರಿಕೆಯ ವರದಿಗಾರ ಅಕ್ಬರ್‌ ಜುನೈದ್, ಕಾರ್ಯದರ್ಶಿಗಳಾಗಿ ಹಲೋಹಾಸನ ಪತ್ರಿಕೆಯ ಪ್ರವೀಣ್ ಹಾಗೂ ಸಂಯುಕ್ತ ಕರ್ನಾಟಕ ಪತ್ರಿಕೆಯ ನವೀನ್ , ಖಚಾಂಚಿಯಾಗಿ ಜನಮಿತ್ರ ಪತ್ರಿಕೆಯ ವರದಿಗಾರ ಯೋಗೇಶ್ ಆಯ್ಕೆಯಾಗಿದ್ದಾರೆ.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪತ್ರಕರ್ತರಾದ ಹೆತ್ತೂರು ರವಿ, ಜಗದೀಶ್ ಹೊರಟ್ಟಿ, ವಿನಯ್ ವನಗೂರು, ನಿರಂಜನ್ ಮೂರ್ತಿ, ಚೇತನ್ ಹರಗರಹಳ್ಳಿ, ಶಿವಕುಮಾರ್, ಅರ್ಜುನ್ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯದರ್ಶಿ ಬೊಮ್ಮೇಗೌಡ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ನವೀನ್ ಕಾರ್ಯನಿರ್ವಹಿಸಿದರು.

ಚುನಾವಣಾಧಿಕಾರಿ ಬೊಮ್ಮೇಗೌಡ ಮಾತನಾಡಿ ಸಕಲೇಶಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲೆಯಲ್ಲೆ ಮಾದರಿ ಸಂಘವಾಗಿದೆ. ಇಲ್ಲಿ ಯಾವುದೇ ಗೊಂದಲಗಳಿಲ್ಲದೆ ಸರ್ವ ಸದಸ್ಯರ ತೀರ್ಮಾನದಂತೆ ಅವಿರೋಧವಾಗಿ ಆಯ್ಕೆ ಪ್ರಕ್ರಿಯೆ ನಡೆದಿದೆ ಎಂದರು. ನೂತನ ಅಧ್ಯಕ್ಷರಾದ ಕಾಂತರಾಜ್ ಹೊನ್ನೇಕೋಡಿ ಮಾತನಾಡಿ ಸಂಘದ ಸರ್ವಸದಸ್ಯರ ನಂಬಿಕೆಗೆ ಚ್ಯುತಿ ಬರದಂತೆ ನಾನು ಕಾರ್ಯನಿರ್ವಹಿಸುತ್ತೇನೆ. ಪತ್ರಕರ್ತರ ಸಮುದಾಯ ಭವನದ ನಿರ್ಮಾಣ ಕಾಮಗಾರಿಗೆ ವೇಗ ನೀಡಲು ಶ್ರಮಿಸುತ್ತೇನೆ ಎಂದರು.

ಈ ಸಂಧರ್ಭದಲ್ಲಿ ಸಂಘದ ಮಾಜಿ ಅಧ್ಯಕ್ಷರುಗಳಾದ ಅರುಣ್ ರಕ್ಷಿದಿ, ಜಾನೆಕೆರೆ ಪರಮೇಶ್, ಮೆಹಬೂಬ್, ರವಿಕುಮಾರ್‌, ಜೈಭೀಮ್ ಮಂಜು, ನಿಕಟ ಪೂರ್ವ ಕಾರ್ಯದರ್ಶಿ ದಯಾನಂದ್, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಜಮೀಲ್ ಅಹಮ್ಮದ್ ಸೇರಿದಂತೆ ಇತರರು ಉಪಸ್ಥಿತರಿದ್ದರು.