ಸಾರಾಂಶ
ಉಡುಪಿ ತಾಲೂಕು ಮಟ್ಟದ 18 ರಿಂದ 40 ವರ್ಷ ಯುವಕ ಯುವತಿಯರಿಗಾಗಿ ನಡೆದ ಅಂತರ್ ವಲಯ ವಿಪ್ರ ಕ್ರೀಡಾಕೂಟವನ್ನು ಕಲ್ಕೂರ ಬಿಲ್ಡರ್ಸ್ ಅಂಡ್ ಡೆವಲಪರ್ಸ್ ಮತ್ತು ಕಲ್ಕೂರ ರೆಫ್ರಿಜರೇಷನ್ ಇದರ ಮಾಲಕ ರಂಜನ್ ಕಲ್ಕೂರು, ವೈ ಬಿ ಪಿ ಅಧ್ಯಕ್ಷ ಚಂದ್ರಕಾಂತ ಕೆ. ಎನ್. ಮತ್ತು ರಾಷ್ಟ್ರೀಯ ಕ್ರೀಡಾಪಟು ಕಾಂತಿ ರಾವ್ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಉಡುಪಿ ತಾಲೂಕು ಮಟ್ಟದ 18 ರಿಂದ 40 ವರ್ಷ ಯುವಕ ಯುವತಿಯರಿಗಾಗಿ ನಡೆದ ಅಂತರ್ ವಲಯ ವಿಪ್ರ ಕ್ರೀಡಾಕೂಟವನ್ನು ಕಲ್ಕೂರ ಬಿಲ್ಡರ್ಸ್ ಅಂಡ್ ಡೆವಲಪರ್ಸ್ ಮತ್ತು ಕಲ್ಕೂರ ರೆಫ್ರಿಜರೇಷನ್ ಇದರ ಮಾಲಕ ರಂಜನ್ ಕಲ್ಕೂರು, ವೈ ಬಿ ಪಿ ಅಧ್ಯಕ್ಷ ಚಂದ್ರಕಾಂತ ಕೆ. ಎನ್. ಮತ್ತು ರಾಷ್ಟ್ರೀಯ ಕ್ರೀಡಾಪಟು ಕಾಂತಿ ರಾವ್ ಉದ್ಘಾಟಿಸಿದರು.ಸಮಾರೋಪ ಸಮಾರಂಭದಲ್ಲಿ ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾಧ ಅಧ್ಯಕ್ಷ ಶ್ರೀಕಾಂತ್ ಉಪಾಧ್ಯಾಯ, ವಲಯದ ಹಿರಿಯ ಸದಸ್ಯ ಶ್ರೀಪತಿ ಭಟ್ ಮತ್ತು ಪುತ್ತೂರು ಬ್ರಾಹ್ಮಣ ಸಭಾದ ಅಧ್ಯಕ್ಷ ಶುಭ ಬಡ್ತಿಲ್ಲಯ ಅವರು ಬಹುಮಾನಗಳನ್ನು ವಿತರಿಸಿದರು. ಕರಂಬಳ್ಳಿ ವಲಯದ ಅಧ್ಯಕ್ಷ ಕೀಳಂಜೆ ಶ್ರೀ ಕೃಷ್ಣರಾಜ ಭಟ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ರಂಗನಾಥ ಸಾಮಗ, ಅಜಿತ್ ಬಿಜಾಪುರ್, ಶ್ರೀಪತಿ ಭಟ್, ಕವಿತಾ ಆಚಾರ್ಯ, ವಸುಧಾ ಭಟ್, ಸುಧಾ ಹರಿದಾಸ್ ಭಟ್ ಸಹಕರಿಸಿದರು. ಕ್ರೀಡಾ ಕಾರ್ಯದರ್ಶಿ ಲಕ್ಷ್ಮಿನಾರಾಯಣ ಆಚಾರ್ಯ ನಿರೂಪಿಸಿ, ಕಾರ್ಯದರ್ಶಿ ನಾಗರಾಜ ಭಟ್ ವಂದಿಸಿದರು. ಸುಮಾರು 12 ತಂಡಗಳು ವಿವಿಧ ಪಂದ್ಯಾಟದಲ್ಲಿ ಪಾಲ್ಗೊಂಡಿದ್ದವು. ವಾಲಿಬಾಲ್ ಪಂದ್ಯಾಟದಲ್ಲಿ ಕುಂದಾಪುರ ತಂಡ ಪ್ರಥಮ ಬಹುಮಾನವನ್ನು ಗಳಿಸಿದರೆ, ಕರಂಬಳ್ಳಿ ತಂಡ ದ್ವಿತೀಯ ಸ್ಥಾನದ ವಿಜೇತರಾದವು. ಬ್ಯಾಡ್ಮಿಂಟನ್ ನಲ್ಲಿ ಕುಂದಾಪುರ ವಲಯ ಪ್ರಥಮ ಹಾಗೂ ಮಾರ್ಪಳ್ಳಿ ವಲಯ ದ್ವಿತೀಯ ಸ್ಥಾನ ಗಳಿಸಿದವು.ಮಹಿಳೆಯರ ತ್ರೋಬಾಲ್ ಪಂದ್ಯಾಟದಲ್ಲಿ ಮಂದರ್ತಿ ವಲಯ ಪ್ರಥಮ ಹಾಗೂ ಪುತ್ತೂರು ವಲಯ ದ್ವಿತೀಯ ಸ್ಥಾನ ಗಳಿಸಿದರೆ, ಬ್ಯಾಡ್ಮಿಂಟನ್ ನಲ್ಲಿ ಬೈಲೂರು ವಲಯ ಪ್ರಥಮ, ಮಂದಾರ್ತಿ ವಲಯ ದ್ವಿತೀಯ ಸ್ಥಾನಿಗಳಾದವು.