ವಾಗ್ಮಿ ಪ್ರೊ.ಕೃಷ್ಣೆಗೌಡರಿಗೆ ಕಾರಂತ ಹುಟ್ಟೂರ ಪ್ರಶಸ್ತಿ

| Published : Sep 13 2024, 01:38 AM IST

ವಾಗ್ಮಿ ಪ್ರೊ.ಕೃಷ್ಣೆಗೌಡರಿಗೆ ಕಾರಂತ ಹುಟ್ಟೂರ ಪ್ರಶಸ್ತಿ
Share this Article
  • FB
  • TW
  • Linkdin
  • Email

ಸಾರಾಂಶ

20ನೇ ವರ್ಷದ ಡಾ. ಶಿವರಾಮ ಕಾರಂತ ಹುಟ್ಟೂರ ಪುರಸ್ಕಾರಕ್ಕೆ ಸಾಹಿತಿ ಕೃಷ್ಣೆಗೌಡ ಮೈಸೂರು ಅವರನ್ನು ಆಯ್ಕೆ ಮಾಡಲಾಗಿದೆ. ಅ. 10ರಂದು ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಕನ್ನಡಪ್ರಭ ವಾರ್ತೆ ಕೋಟ

ಕೋಟತಟ್ಟು ಗ್ರಾ.ಪಂ. ಮತ್ತು ಇಲ್ಲಿನ ಡಾ. ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನಗಳ ಜಂಟಿ ಸಹಭಾಗಿತ್ವದಲ್ಲಿ, ಕಾರಂತರ ವಿವಿಧ ಆಸಕ್ತಿ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ನೀಡಲಾಗುವ, 20ನೇ ವರ್ಷದ ಡಾ. ಶಿವರಾಮ ಕಾರಂತ ಹುಟ್ಟೂರ ಪುರಸ್ಕಾರಕ್ಕೆ ಖ್ಯಾತ ವಾಗ್ಮಿ, ಸಾಹಿತಿ ಪ್ರೊ. ಕೃಷ್ಣೆಗೌಡ ಮೈಸೂರು ಅವರನ್ನು ಆಯ್ಕೆ ಮಾಡಲಾಗಿದೆ.

ಹಲವು ದಶಕಗಳಿಂದ ಯುವ ಜನಾಂಗಕ್ಕೆ ಪ್ರೇರಣಾತ್ಮಕ ಮಾತುಗಳಿಂದ ಭರವಸೆ ತುಂಬುತ್ತಿರುವ, ಕನ್ನಡ ಮಾತುಗಾರಿಕೆಗೆ ಹೊಸ ನೆಲಗಟ್ಟು ನೀಡಿದ ಕೃಷ್ಣೇಗೌಡರ ಅಮೂಲ್ಯ ಸೇವೆಯನ್ನು ಪರಿಗಣಿಸಿ ಈ ವರ್ಷ ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಪ್ರತಿಸಲದಂತೆ ಅ. 10 ರಂದು ಡಾ. ಕೋಟ ಶಿವರಾಮ ಕಾರಂತರ ಜನ್ಮದಿನದಂದು ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ ಎಂದು ಡಾ. ಶಿವರಾಮ ಕಾರಂತ ಪ್ರತಿಷ್ಠಾನ ಕೋಟದ ಕಾರ್ಯಾಧ್ಯಕ್ಷ ಆನಂದ ಸಿ. ಕುಂದರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಕೋಟತಟ್ಟು ಗ್ರಾಪಂ ಅಧ್ಯಕ್ಷ ಕೆ.ಸತೀಶ್ ಕುಂದರ್, ಆಯ್ಕೆ ಸಮಿತಿ ಸದಸ್ಯ ಯು. ಎಸ್. ಶೆಣೈ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಪಿ.ಡಿ.ಓ ರವೀಂದ್ರ ರಾವ್ , ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಉಪಸ್ಥಿತರಿದ್ದರು.

ಇದುವೆರೆಗೆ ಕಾರಂತ ಹುಟ್ಟೂರ ಪ್ರಶಸ್ತಿಯನ್ನು ಸಾಹಿತಿ ಡಾ. ಎಂ. ವೀರಪ್ಪ ಮೊಯ್ಲಿ, ಲೋಕಾಯುಕ್ತ ಜಸ್ಟೀಸ್ ವೆಂಕಟಾಚಲ, ಶಿಕ್ಷಣ ತಜ್ಞ ಕೆ.ರಾಮಕೃಷ್ಣ ಹಂದೆ, ಸಾಹಿತಿ ರವಿ ಬೆಳಗೆರೆ, ಸಿನೆಮಾ ನಿರ್ದೇಶಕ ಗಿರೀಶ ಕಾಸರವಳ್ಳಿ, ರಂಗನಟಿ ಜಯಶ್ರೀ, ಸಂಘಟಕ ಮೋಹನ ಆಳ್ವ, ಸಾಧಕಿ ಸಾಲು ಮರದ ತಿಮ್ಮಕ್ಕ, ಯಕ್ಷಗಾನ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ, ಕವಿ ಜಯಂತ ಕಾಯ್ಕಿಣಿ, ರಂಗಕರ್ಮಿ ಸದಾನಂದ ಸುವರ್ಣ, ವೈದ್ಯ ಡಾ. ಬಿ. ಎಂ. ಹೆಗ್ಡೆ, ಚಿತ್ರನಟ ಪ್ರಕಾಶ್ ರೈ, ಜಲತಜ್ಞ ಶ್ರೀಪಡ್ರೆ, ರೈತ ಮಹಿಳೆ ಕವಿತಾ ಮಿಶ್ರ, ನಾಡೋಜ ಡಾ.ಎಸ್.ಎಲ್.ಭೈರಪ್ಪ, ತೂಗುಸೇತುವೆ ತಜ್ಞ ಗಿರೀಶ್ ಭಾರದ್ವಜ್, ಚಿತ್ರನಟ ರಮೇಶ್ ಅರವಿಂದ್, ಸಂಗೀತಗಾರ ಡಾ.ವಿದ್ಯಾಭೂಷಣ್ ಅವರಿಗೆ ಪ್ರದಾನ ಮಾಡಲಾಗಿದೆ.