ಸಾರಾಂಶ
ಕರ್ನಾಟಕ ರಕ್ಷಣಾ ವೇದಿಕೆ ಹಾಸನ ತಾಲೂಕು ಘಟಕದಿಂದ ಪದಾಧಿಕಾರಿಗಳ ಪದಗ್ರಹಣ ಹಾಗೂ ಹೋಬಳಿ ಅಧ್ಯಕ್ಷ, ಹೋಬಳಿ ಪದಾಧಿಕಾರಿಗಳ ಸಭೆ ಯಶಸ್ವಿಯಾಗಿ ಜರುಗಿತು. ಕರವೇ ಜಿಲ್ಲಾಧ್ಯಕ್ಷರಾದ ಸಿ.ಡಿ. ಮನುಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕರವೇ ತಾಲೂಕು ಅಧ್ಯಕ್ಷ ಶಿವಣ್ಣಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕರವೇ ಶಾಂತಿಗ್ರಾಮ ಹೋಬಳಿ ಅಧ್ಯಕ್ಷರಾಗಿ ಚೇತನ್, ಕಟ್ಟಾಯ ಹೋಬಳಿ ಅಧ್ಯಕ್ಷ ರವಿ, ದುದ್ದ ಹೋಬಳಿ ಅಧ್ಯಕ್ಷ ಪೃಥ್ವಿ, ಸಾಲಗಾಮೆ ಹೋಬಳಿ ಅಧ್ಯಕ್ಷರಾಗಿ ಸುದರ್ಶನ್, ಹಾಸನ ಕಸಾಬ ಅಧ್ಯಕ್ಷರಾಗಿ ಮಧು ಹಾಗೂ ತಾಲೂಕು ಪ್ರಧಾನ ಕಾರ್ಯದರ್ಶಿ ಶಶಾಂಕ್, ಸಂಘಟನ ಕಾರ್ಯದರ್ಶಿ ತಶ್ವಿನ್ ಗೌಡ ಇತರರ ಪದಗ್ರಹಣ ನಡೆಯಿತು.
ಕನ್ನಡಪ್ರಭ ವಾರ್ತೆ ಹಾಸನ
ನಗರದ ಹೋಟೆಲೊಂದರ ಸಭಾಂಗಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಹಾಸನ ತಾಲೂಕು ಘಟಕದಿಂದ ಪದಾಧಿಕಾರಿಗಳ ಪದಗ್ರಹಣ ಹಾಗೂ ಹೋಬಳಿ ಅಧ್ಯಕ್ಷ, ಹೋಬಳಿ ಪದಾಧಿಕಾರಿಗಳ ಸಭೆ ಯಶಸ್ವಿಯಾಗಿ ಜರುಗಿತು. ಕರವೇ ಜಿಲ್ಲಾಧ್ಯಕ್ಷರಾದ ಸಿ.ಡಿ. ಮನುಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕರವೇ ತಾಲೂಕು ಅಧ್ಯಕ್ಷ ಶಿವಣ್ಣಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಕರವೇ ಶಾಂತಿಗ್ರಾಮ ಹೋಬಳಿ ಅಧ್ಯಕ್ಷರಾಗಿ ಚೇತನ್, ಕಟ್ಟಾಯ ಹೋಬಳಿ ಅಧ್ಯಕ್ಷ ರವಿ, ದುದ್ದ ಹೋಬಳಿ ಅಧ್ಯಕ್ಷ ಪೃಥ್ವಿ, ಸಾಲಗಾಮೆ ಹೋಬಳಿ ಅಧ್ಯಕ್ಷರಾಗಿ ಸುದರ್ಶನ್, ಹಾಸನ ಕಸಾಬ ಅಧ್ಯಕ್ಷರಾಗಿ ಮಧು ಹಾಗೂ ತಾಲೂಕು ಪ್ರಧಾನ ಕಾರ್ಯದರ್ಶಿ ಶಶಾಂಕ್, ಸಂಘಟನ ಕಾರ್ಯದರ್ಶಿ ತಶ್ವಿನ್ ಗೌಡ, ಉಪಾಧ್ಯಕ್ಷ ಪವನ್, ಕಾರ್ಯದರ್ಶಿ ರುದ್ರ, ತಾಲೂಕು ವಿದ್ಯಾರ್ಥಿ ಘಟಕದ ಉಪಾಧ್ಯಕ್ಷ ಶ್ರೀಧರ್ ಇತರರ ಪದಗ್ರಹಣ ನಡೆಯಿತು.
ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಸಿ.ಡಿ. ಮನುಕುಮಾರ್, ತಾಲೂಕು ಅಧ್ಯಕ್ಷ ಶಿವಣ್ಣಗೌಡ, ರಾಜೇಂದ್ರ ದೊಡ್ಡಮಗ್ಗೆ, ಸೀತರಾಮ್, ಬೋರೇಗೌಡ, ಮಹೇಶ್, ಶ್ರೀನಿವಾಸ್ ಇತರರು ಇದ್ದರು.