ಕಳಸ ಬಂಡೂರಿ, ಮಹದಾಯಿ: ಇಂದು, ನಾಳೆ ಕರವೇ ಪಾದಯಾತ್ರೆ

| Published : Sep 19 2024, 01:53 AM IST

ಸಾರಾಂಶ

ಕರ್ನಾಟಕದ ಜೀವನಾಡಿ, ಕಳಸಾ ಬಂಡೂರಿ ಹಾಗೂ ಮಹದಾಯಿ ನದಿ ನೀರಿನ ಜೋಡಣೆ ಯೋಜನೆ ಜಾರಿಗಾಗಿ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯು ಪ್ರವೀಣ್ ಕುಮಾರ್ ಸಾರಥ್ಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಗಮನ ಸೆಳೆಯಲು ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಅಧ್ಯಕ್ಷ ಎಸ್.ಎಸ್. ಶ್ರೀನಿವಾಸ್ ಹೊನ್ನಾಳಿಯಲ್ಲಿ ಹೇಳಿದ್ದಾರೆ.

ಹೊನ್ನಾಳಿ: ಕರ್ನಾಟಕದ ಜೀವನಾಡಿ, ಕಳಸಾ ಬಂಡೂರಿ ಹಾಗೂ ಮಹದಾಯಿ ನದಿ ನೀರಿನ ಜೋಡಣೆ ಯೋಜನೆ ಜಾರಿಗಾಗಿ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯು ಪ್ರವೀಣ್ ಕುಮಾರ್ ಸಾರಥ್ಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಗಮನ ಸೆಳೆಯಲು ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಅಧ್ಯಕ್ಷ ಎಸ್.ಎಸ್. ಶ್ರೀನಿವಾಸ್ ಹೇಳಿದರು.

ಬುಧವಾರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಕಳಸಾ ಬಂಡೂರಿ ಹಾಗೂ ಮಹದಾಯಿ ನದಿಗಳ ನೀರಿನ ಜೋಡಣೆ ಯೋಜನೆ ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಈ ಯೋಜನೆಗಳ ಜಾರಿಗೆ ಆಗ್ರಹಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಗಮನ ಸೆಳೆಯುವ ನಿಟ್ಟಿನಲ್ಲಿ ಸೆ.19 ಮತ್ತು 20 ರಂದು ನರಗುಂದ ತಾಲೂಕಿನಿಂದ ಗದಗ ಜಿಲ್ಲೆಯವರೆಗೆ 2 ದಿನಗಳ ಐತಿಹಾಸಿಕ ಪಾದಯಾತ್ರೆ ಕಾರ್ಯಕ್ರಮ ನಡೆಸಲಾಗುವುದು ಎಂದರು.

ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ, ರಾಜ್ಯ, ಜಿಲ್ಲಾ, ತಾಲೂಕು ಮುಖಂಡರು ಹಾಗೂ ಪದಾಧಿಕಾರಿಗಳು ಒಟ್ಟು 45 ಕಿ.ಮೀ. ಪಾದಯಾತ್ರೆ ಮಾಡಲಿದ್ದಾರೆ. ಜೊತೆಗೆ ಗದಗ ಜಿಲ್ಲಾಧಿಕಾರಿ ಅವರಿಗೆ ಮನವಿ ನೀಡುವ ಮುಖಾಂತರ ಯೋಜನೆಗಳ ಜಾರಿಗೆ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದರು.

ಪಾದಯಾತ್ರೆಗೆ ತಾಲೂಕು ಆಧ್ಯಕ್ಷ ಶ್ರೀನಿವಾಸ್ ಹಾಗೂ ಮುಖಂಡರು ಸೇರಿ 20 ಸದಸ್ಯರ ತಂಡ ಬುಧವಾರ ರಾತ್ರಿ ಹೊನ್ನಾಳಿಯಿಂದ ಹೊರಟು, ಸೆ.19ರಂದು ಬೆಳಗ್ಗೆ 6 ಗಂಟೆಗೆ ನರಗುಂದ ಪಾದಯಾತ್ರೆ ನಡೆಯುವ ಸ್ಥಳಕ್ಕೆ ತೆರಳಿ, ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದೆ ಎಂದು ತಿಳಿಸಿದರು.

ಪದಾಧಿಕಾರಗಳಾದ ಲಕ್ಷ್ಮಿಕಾಂತ್, ಭಾಸ್ಕರ್, ಬೀರೇಶ್, ದಾದಾಪೀರ್, ಹರೀಶ್ ಜನನಿ, ಹಾಲೇಶ್, ಅಣ್ಣಪ್ಪ, ಪ್ರೇಮ್ ಗೊಲ್ಲರಹಳ್ಳಿ, ಶಿವು ಮುಂತಾದವರು ಇದ್ದರು.

- - --18ಎಚ್.ಎಲ್.ಐ3:

ಕರವೇ ತಾಲೂಕು ಅಧ್ಯಕ್ಷ ಶ್ರೀನಿವಾಸ್ ಪಾದಯಾತ್ರೆ ಕುರಿತು ಬುಧವಾರ ಸುದ್ದಿಗೋಷ್ಠಿ ನಡೆಸಿದರು.