ನಾರಾಯಣಗೌಡರ ಬಂಧನಕ್ಕೆ ಸಂಘಟನೆಗಳ ಆಕ್ರೋಶ, ಬಿಡುಗಡೆಗೆ ಆಗ್ರಹ

| Published : Jan 03 2024, 01:45 AM IST

ಸಾರಾಂಶ

ಸರ್ಕಾರ ಈ ಕೂಡಲೇ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರ ಮೊಕದ್ದಮೆಗಳನ್ನು ಹಿಂಪಡೆದು ರಾಜ್ಯಾಧ್ಯಕ್ಷ ನಾರಾಯಣ ಗೌಡರನ್ನು ಬಿಡುಗಡೆಗೊಳಿಸದಿದ್ದರೆ ಗಡಿ ಜಿಲ್ಲೆಯನ್ನು ಬಂದ್ ಮಾಡಿಯೇ ತೀರುತ್ತೆವೆ, ಸರ್ಕಾರ ಇದನ್ನ ಗಂಭೀರವಾಗಿ ಪರಿಗಣಿಸಬೇಕು ಎಂದು ವೇದಿಕೆಯ ತಾಲೂಕು ಅಧ್ಯಕ್ಷ ಮಹಮ್ಮದ್ ಮತೀನ್ ಎಚ್ಚರಿಸಿದರು.

ಕನ್ನಡಪ್ರಭ ವಾತೆ೯, ಕೊಳ್ಳೇಗಾಲಸಕಾ೯ರ ಈ ಕೂಡಲೇ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರ ಮೊಕದ್ದಮೆಗಳನ್ನು ಹಿಂಪಡೆದು ರಾಜ್ಯಾಧ್ಯಕ್ಷ ನಾರಾಯಣ ಗೌಡರನ್ನು ಬಿಡುಗಡೆಗೊಳಿಸದಿದ್ದರೆ ಗಡಿ ಜಿಲ್ಲೆಯನ್ನು ಬಂದ್ ಮಾಡಿಯೇ ತೀರುತ್ತೆವೆ, ಸರ್ಕಾರ ಇದನ್ನ ಗಂಭೀರವಾಗಿ ಪರಿಗಣಿಸಬೇಕು ಎಂದು ವೇದಿಕೆಯ ತಾಲೂಕು ಅಧ್ಯಕ್ಷ ಮಹಮ್ಮದ್ ಮತೀನ್ ಎಚ್ಚರಿಸಿದರು.

ಪಟ್ಟಣದ ಎಂಜಿಎಸ್‍ವಿ ಜೂನಿಯರ್ ಕಾಲೇಜು ಮೈದಾನ ಆವರಣದಲ್ಲಿ ಸಮಾವೇಶಗೊಂಡ ಕರವೇ ನಾರಾಯಣಗೌಡ ಬಣದ ಕಾರ್ಯಕರ್ತರು ಮತ್ತು ಪ್ರಗತಿಪರ ಸಂಘಟನೆಗಳ ಮುಖಂಡರು ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನೆ ಮೆರವಣಿಗೆ ನಡೆಸಿ ತಾಲೂಕು ಕಚೇರಿಗೆ ತಲುಪಿದರು. ಈ ವೇಳೆ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು ಮೊಳಗಿಸಿದರು. ಅಂಬೇಡ್ಕರ್ ಪ್ರತಿಮೆ ಮುಂಭಾಗ ಮತ್ತು ತಾಲೂಕು ಕಚೇರಿ ಮುಂಭಾಗ ಎರಡೂ ಕಡೆಗಳಲ್ಲೂ ಧಿಕ್ಕಾರದ ಘೋಷಣೆ ಕೂಗಿದರಲ್ಲದೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಗೖಹ ಸಚಿವರ ವಿರುದ್ದ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಬಳಿಕ ಶಿರೆಸ್ತೆದಾರ್ ಕೃಪಾಕರ್ ಅವರಿಗೆ ಮನವಿ ಪತ್ರ ನೀಡಿದರು.

ಈಸಂದಭ೯ದಲ್ಲಿ ಮಾತನಾಡಿದ ಅಧ್ಯಕ್ಷ ಮತೀನ್ ಅವರು ರಾಜ್ಯ ಸರ್ಕಾರ ಸರ್ವಾಧಿಕಾರ ಮೆರೆದಿದೆ. ಕನ್ನಡ, ನಾಡು, ನುಡಿ ನೆಲಕ್ಕೆ ಹೋರಾಟ ಮಾಡುವವರಿಗೆ ಬೆಲೆ ನೀಡುತ್ತಿಲ್ಲ. ಕರ್ನಾಟಕವನ್ನು ಕನ್ನಡಮಯ ಮಾಡಲು ಹೋರಾಟ ಮಾಡುವರ ಮೇಲೆ ಎಫ್‍ಐಆರ್ ದಾಖಲಿಸಲಾಗಿದೆ. ನಮ್ಮ ರಾಜ್ಯಾಧ್ಯಕ್ಷ ಟಿ. ಎನ್ ನಾರಾಯಣಗೌಡ ಅವರನ್ನು ಬಂಧಿಸಲಾಗಿದೆ. ಇದನ್ನು ಕರವೇ ಖಂಡಿಸುತ್ತದೆ. ಸಿಎಂ ಸಿದ್ದರಾಮಯ್ಯ ಹಾಗು ಡಿಸಿಎಂ ಡಿ.ಕೆ ಶಿವಕುಮಾರ್ ಎಚ್ಚೆತ್ತು ಕೊಳ್ಳಬೇಕು. ಕನ್ನಡಿಗರ ಅಸ್ಥಿತ್ವಕ್ಕೆ ದಕ್ಕೆಯಾದರೆ ರಾಜ್ಯಾದ್ಯಂತ ಉಗ್ರಹೋರಾಟ ನಡೆಯುತ್ತದೆ. ಈ ಕೂಡಲೇ ಕರವೇ ಕಾರ್ಯಕರ್ತರ ಮೇಲಿನ ಮೊಕದ್ದಮೆ ಹಿಂಪಡೆದು, ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಕರವೇ ಟೌನ್ ಅಧ್ಯಕ್ಷ ಗಿರಿವಾಸನ್, ಉಪಾಧ್ಯಕ್ಷ ಪ್ರಭಾಕರ್, ಗೌರವಾಧ್ಯಕ್ಷ ಮಲ್ಲಿಕಾರ್ಜುನ್, ಪ್ರಧಾನ ಕಾರ್ಯದರ್ಶಿ ಸಚಿನ್, ಸಂಘಟನಾ ಕಾರ್ಯದರ್ಶಿ ಪೇಪರ್ ಚಂದ್ರು, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಆರ್.ಮಹದೇವಸ್ವಾಮಿ, ಪ್ರಭಾಕರ್, ಅಕಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಮಹದೇವ ಪ್ರಸಾದ್, ಗೋವಿಂದ, ಛಲವಾದಿ ಮಹಾಸಭೆ ರಾಜ್ಯ ಉಪಾಧ್ಯಕ್ಷ ಅಣಗಳ್ಳಿ ಬಸವರಾಜು ಇದ್ದರು.

ಹೊಗೆನಕಲ್ ಗಡಿ ಬಗ್ಗೆ ಉಪಮುಖ್ಯಮಂತ್ರಿಗಳಿಗೆ ಅರಿವಿಲ್ಲದೆ ಮಾತನಾಡುತ್ತಾರೆ, ಅದೇ ರೀತಿ ಗೖಹ ಸಚಿವರು ಸಹಾ ಕಾನೂನು ಉಲ್ಲಂಘನೆ ಬೇಡ ಎಂದು ಸಮರ್ತನೆಯವಾದ ಮಾಡುತ್ತಿದ್ದಾರೆ, ಇದೆಲ್ಲಾ ಹೇಳಿಕೆ ನೀಡುತ್ತಿರುವ ಇವರಿಗೆ ನಾಚಿಕೆಯಾಗಬೇಕು, ನಾರಾಯಣ ಗೌಡರ ಬಂಧನದಿಂದ ನಮ್ಮ ಅಸ್ತಿತ್ವಕ್ಕೆ ತೊಂದರೆಯಾದಲ್ಲಿ ಉಗ್ರ ಹೋರಾಟ ಅನಿವಾರ್ಯ ಎಂದರು.