ಕರವೇ ರಾಜ್ಯಾಧ್ಯಕ್ಷರ ಜನ್ಮದಿನ: ರೋಗಿಗಳಿಗೆ ಹಣ್ಣು ವಿತರಣೆ

| Published : Jun 10 2024, 02:05 AM IST

ಕರವೇ ರಾಜ್ಯಾಧ್ಯಕ್ಷರ ಜನ್ಮದಿನ: ರೋಗಿಗಳಿಗೆ ಹಣ್ಣು ವಿತರಣೆ
Share this Article
  • FB
  • TW
  • Linkdin
  • Email

ಸಾರಾಂಶ

ನಾಡಿನಲ್ಲಿ ಕನ್ನಡದ ಅಳಿವು ಉಳಿವಿಗಾಗಿ ಅವರು ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಆದ್ದರಿಂದ ಇಂದು ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣ ತಾಲೂಕಿನ ಕರವೇ ನಾರಾಯಣಗೌಡರ ಜನ್ಮ ದಿನವನ್ನು ಆಚರಿಸುತ್ತಿದ್ದು, ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣುಹಂಪಲು ವಿತರಿಸಲಾಗಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡರ ಹುಟ್ಟುಹಬ್ಬದ ಅಂಗವಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣುಹಂಪಲು ವಿತರಿಸಲಾಯಿತು.

ಕರವೇ ತಾಲೂಕು ಅಧ್ಯಕ್ಷ ಜಿ.ಜಿ.ಹರೀಶ್ ಗೌಡ ಮಾತನಾಡಿ, ನಾರಾಯಣಗೌಡರು ಕನ್ನಡಿಗರಿಗೆ ಅನ್ಯಾಯವಾಗದಂತೆ ದ್ವನಿ ಎತ್ತುವ ಮೊದಲ ನಾಯಕರು. ಕನ್ನಡ ನಾಡು, ನುಡಿ, ಜಲ ವಿಷಯವಾಗಿ ಹಲವು ಬಾರಿ ಜೈಲಿಗೂ ಹೋಗಿ ಬಂದಿದ್ದಾರೆ ಎಂದರು.

ನಾಡಿನಲ್ಲಿ ಕನ್ನಡದ ಅಳಿವು ಉಳಿವಿಗಾಗಿ ಅವರು ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಆದ್ದರಿಂದ ಇಂದು ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ತಾಲೂಕಿನ ಕರವೇ ನಾರಾಯಣಗೌಡರ ಜನ್ಮ ದಿನವನ್ನು ಆಚರಿಸುತಿದ್ದೇವೆ ಎಂದರು.

ಇದೇ ವೇಳೆ ಆಸ್ಪತ್ರೆ ವೈದ್ಯರಾದ ಡಾ.ಗೌತಮ್ ಶೆಟ್ಟಿ, ಸುಸ್ರೂಸಕಿ ಪುನೀತಕುಮಾರಿ, ಕರವೇ ಕಾರ್ಯಕರ್ತರಾದ ಅವಿನಾಶ್ , ಸಂಜು, ಗಣೇಶ್, ಚಂದ್ರು, ಕೌಶಿಕ್, ಕಿರಣ್ ಸೇರಿದಂತೆ ಇತರರು ಇದ್ದರು.

ಟಿ.ಎ.ನಾರಾಯಣಗೌರ ಹುಟ್ಟುಹಬ್ಬ ರೋಗಿಗಳಿಗೆ ಹಣ್ಣು ವಿತರಣೆ

ಮಳವಳ್ಳಿ:ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಟಿ.ಎ.ನಾರಾಯಣಗೌಡರ ಜನ್ಮದಿನದ ಅಂಗವಾಗಿ ವೇದಿಕೆ ತಾಲೂಕು ಅಧ್ಯಕ್ಷ ಎಚ್.ಇ.ಅಪ್ಪೇಗೌಡ ನೇತೃತ್ವದಲ್ಲಿ ಸಾರ್ವಜನಿಕ ಆಸ್ಪತ್ರೆ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಲಾಯಿತು.

ಈ ವೇಳೆ ಮಾತನಾಡಿದ ಎಚ್.ಇ.ಅಪ್ಪೇಗೌಡ, ಕಳೆದ ಹಲವು ದಶಕಗಳಿಂದ ರಾಜ್ಯದೆಲ್ಲಡೆ ಕನ್ನಡ ನಾಡು-ನುಡಿ, ಭಾಷೆ ಉಳಿವಿಗಾಗಿ ಹೋರಾಟ ನಡೆಸುತ್ತಿರುವ ಟಿ.ಎ.ನಾರಾಯಣಗೌಡ ಅವರು ಕನ್ನಡ ಪರ ಹೋರಾಟಕ್ಕೆ ಸ್ಪೂರ್ತಿಯಾಗಿದ್ದಾರೆ. ಅವರಿಗೆ ದೇವರು ಮುಂದಿನ ದಿನಗಳಲ್ಲಿ ಕನ್ನಡಪರ ಹೋರಾಟ ನಡೆಸಲು ಮತ್ತಷ್ಟು ಶಕ್ತಿ ನೀಡಲಿ ಎಂದು ಆಶಿಸುತ್ತೇವೆ ಎಂದರು.ಈ ವೇಳೆ ಮಹಿಳಾ ಘಟಕದ ಅಧ್ಯಕ್ಷೆ ವಿಜಯಾ, ಹಲಗೂರು ಹೋಬಳಿ ಅಧ್ಯಕ್ಷ ಗಂಗರಾಜು, ಕಸಬಾ ಹೋಬಳಿ ಅಧ್ಯಕ್ಷ ದೇವರಾಜು, ಕಾರ್ಯದರ್ಶಿ ಲಿಂಗರಾಜು, ಮಲ್ಲಿಕಾರ್ಜುನ್, ಶೇಖರ್, ನಾಗರಾಜು, ಗುರುಮೂರ್ತಿ, ಲಿಂಗಾಚಾರಿ ಇದ್ದರು.