ಕಾರ್ಗಿಲ್ ವಿಜಯೋತ್ಸವ ಭಾರತೀಯ ಸೈನಿಕರ ಹೆಮ್ಮೆಯ ಪ್ರತೀಕ

| Published : Jul 27 2025, 12:02 AM IST

ಕಾರ್ಗಿಲ್ ವಿಜಯೋತ್ಸವ ಭಾರತೀಯ ಸೈನಿಕರ ಹೆಮ್ಮೆಯ ಪ್ರತೀಕ
Share this Article
  • FB
  • TW
  • Linkdin
  • Email

ಸಾರಾಂಶ

ಪಾಕಿಸ್ತಾನದ ಸೈನ್ಯವನ್ನು ಹಿಮ್ಮೆಟ್ಟಿಸಿ ಕಾರ್ಗಿಲ್ ಭೂಪ್ರದೇಶದಲ್ಲಿ ಭಾರತೀಯ ತಿರಂಗಾ ಧ್ವಜ ನೆಟ್ಟು ನಮ್ಮ ಸೈನಿಕರು ಮಹತ್ ಸಾಧನೆ ಮಾಡಿದ್ದರು.

ಲಕ್ಷ್ಮೇಶ್ವರ: ಕಾರ್ಗಿಲ್ ವಿಜಯೋತ್ಸವ ನಮ್ಮ ಸೈನಿಕರ ಸಾಹಸದ ಪ್ರತೀಕವಾಗಿದೆ. ಕಾರ್ಗಿಲ್ ಯುದ್ಧದಲ್ಲಿನ ಜಯವು ಭಾರತೀಯರಿಗೆ ಹೆಮ್ಮೆ ತಂದ ಕ್ಷಣವಾಗಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

ಪಟ್ಟಣದ ಬಾಲಾಜಿ ಆಸ್ಪತ್ರೆಯಲ್ಲಿ ಶನಿವಾರ ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಮಾಜಿ ಸೈನಿಕರನ್ನು ಸನ್ಮಾನಿಸಿ ಅವರು ಮಾತನಾಡಿದರು.

ಭಾರತೀಯ ಸೇನೆಯು 5 ಸಾವಿರ ಮೀಟರ್ ಎತ್ತರದಲ್ಲಿರುವ ಕಾರ್ಗಿಲ್ ಪ್ರದೇಶವನ್ನು ವಶಪಡಿಸಿಕೊಂಡಿರುವುದು ಭಾರತೀಯ ಸೈನ್ಯದ ಪರಾಕ್ರಮ ತೋರಿಸುತ್ತಿದೆ. ಪಾಕಿಸ್ತಾನದ ಸೈನ್ಯವನ್ನು ಹಿಮ್ಮೆಟ್ಟಿಸಿ ಕಾರ್ಗಿಲ್ ಭೂಪ್ರದೇಶದಲ್ಲಿ ಭಾರತೀಯ ತಿರಂಗಾ ಧ್ವಜ ನೆಟ್ಟು ನಮ್ಮ ಸೈನಿಕರು ಮಹತ್ ಸಾಧನೆ ಮಾಡಿದ್ದರು. ಈಗ ಭಾರತದ ಜೊತೆ ಯುದ್ಧ ಮಾಡಲು ಬೇರೆ ದೇಶಗಳು ನೂರು ಸಲ ಯೋಚಿಸುವ ಕಾಲ ಬಂದಿದೆ ಎಂದರು.

ಕಾರ್ಗಿಲ್ ಯುದ್ಧದಲ್ಲಿ ಮಡಿದ ಹಾಗೂ ಗಾಯಗೊಂಡಿರುವ ಸೈನಿಕರ ಕುಟುಂಬದ ಜೊತೆ ಭಾರತೀಯ ಕೋಟ್ಯಂತರ ಹೃದಯಗಳು ಇವೆ. ಪಹಲ್ಗಾಮ್ ದಾಳಿಯಲ್ಲಿ ಮಡಿದ 18 ಕುಟುಂಬಗಳ ನೋವಿಗೆ ಸ್ಪಂದಿಸುವ ರೀತಿಯಲ್ಲಿ ಸಿಂಧೂರ ಪ್ರತಿದಾಳಿ ನಡೆಸಿ ಪಾಕಿಸ್ತಾನದ ವಾಯು ನೆಲೆಗಳನ್ನು ಧ್ವಂಸ ಮಾಡಿ ಅವರ ಸೊಕ್ಕು ಅಡಗಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಸೈನ್ಯಕ್ಕೆ ಬಲ ತುಂಬುವ ಕಾರ್ಯ ಮಾಡುವ ಮೂಲಕ ಸೈನಿಕರ ಆತ್ಮ ಸ್ಥೈರ್ಯ ಹೆಚ್ಚಿಸುವ ಕಾರ್ಯ ಶ್ಲಾಘನೀಯವೆಂದರು.

ಈ ವೇಳೆ ಪೂರ್ಣಾಜಿ ಕರಾಟೆ ಮಾತನಾಡಿ, ಭಾರತೀಯ ಸೈನಿಕರ ತ್ಯಾಗ, ಬಲಿದಾನ ಮತ್ತು ದೇಶ ಪ್ರೇಮದ ಕುರಿತು ಮಾತನಾಡಿದರು.

ವಿಜಯೋತ್ಸವ ಕಾರ್ಯಕ್ರಮದಲ್ಲಿ ಎನ್.ಆರ್. ಸಾತಪೂತೆ, ಎನ್.ಎನ್. ನೆಗಳೂರ ಭಾಗವಹಿಸಿದ್ದರು.

ಲಕ್ಷ್ಮೇಶ್ವರ ತಾಲೂಕು ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಎಸ್.ವಿ. ಹಿರೇಮಠ ಸೇರಿದಂತೆ 25ಕ್ಕೂ ಹೆಚ್ಚು ನಿವೃತ್ತ ಸೈನಿಕರು ಸನ್ಮಾನಿಸಲಾಯಿತು.

ಈ ವೇಳೆ ಗಂಗಾಧರ ಮೆಣಸಿನಕಾಯಿ, ವಿಜಯ ಕುಂಬಾರ, ಮಂಜುನಾಥ ಗದಗ, ಶಕ್ತಿ ಕತ್ತಿ, ಸತೀಶ ಬೋಮಲೆ, ದುಂಡೇಶ ಕೊಟಗಿ, ಕಲ್ಲಪ್ಪ ಹಡಪದ, ಬಸವರಾಜ ಕುಂಬಾರ, ವಿಜಯ ಮೆಕ್ಕಿ, ಭೀಮಣ್ಣ ಬಂಗಾಡಿ, ಜಗದೀಶಗೌಡ ಪಾಟೀಲ, ಪರಶುರಾಮ ಇಮ್ಮಡಿ ಸೇರಿದಂತೆ ಅನೇಕರು ಇದ್ದರು.

ಅನಿಲ ಮುಳಗುಂದ ಕಾರ್ಯಕ್ರಮ ನಿರ್ವಹಿಸಿದರು. ನವೀನ ಹಿರೇಮಠ ವಂದಿಸಿದರು.