ಸಾರಾಂಶ
ಕಾರ್ಗಿಲ್ ವಿಜಯೋತ್ಸವ ಸಮಸ್ತ ಭಾರತೀಯರು ಹೆಮ್ಮೆ ಪಡುವ, ಮಡಿದ ವೀರ ಸೈನಿಕರಿಗೆ ನಮನ ಸಲ್ಲಿಸುವ ಸುದಿನ. ಭಾರತ ದೇಶದ ಸೈನಿಕರ ಶೌರ್ಯ ಪರಾಕ್ರಮ ಸಾಹಸವನ್ನು ಸ್ಮರಿಸುವ ಸುದಿನ ನಾವೆಲ್ಲರೂ ನಮ್ಮ ದೇಶದ ಗಡಿ ಕಾಯುವ ವೀರ ಸೈನಿಕರನ್ನು ಗೌರವಿಸೋಣ.
ಕನ್ನಡಪ್ರಭ ವಾರ್ತೆ ಸಿರಿಗೆರೆ
ಕಾರ್ಗಿಲ್ ವಿಜಯೋತ್ಸವ ಸಮಸ್ತ ಭಾರತೀಯರು ಹೆಮ್ಮೆ ಪಡುವ, ಮಡಿದ ವೀರ ಸೈನಿಕರಿಗೆ ನಮನ ಸಲ್ಲಿಸುವ ಸುದಿನ. ಭಾರತ ದೇಶದ ಸೈನಿಕರ ಶೌರ್ಯ ಪರಾಕ್ರಮ ಸಾಹಸವನ್ನು ಸ್ಮರಿಸುವ ಸುದಿನ ನಾವೆಲ್ಲರೂ ನಮ್ಮ ದೇಶದ ಗಡಿ ಕಾಯುವ ವೀರ ಸೈನಿಕರನ್ನು ಗೌರವಿಸೋಣ. ದೇಶ ಭಕ್ತಿಯನ್ನು ಮೈಗೂಡಿಸಿಕೊಂಡು ದೇಶದ ಸತ್ವಜೆಗಳಾಗೋಣ ಎಂದು ಡಾ ಮಹೇಶ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.ಸಿರಿಗೆರೆ ಸಮೀಪದ ಕಡ್ಲೆಗುದ್ದು ಗ್ರಾಮದ ಶ್ರೀ ಆಂಜನೇಯ ಸ್ವಾಮಿ ಪ್ರೌಢಶಾಲೆಯಲ್ಲಿ ವೀರಯೋಧ ಪ್ರಭಾಕರ್ ಅವರ ಪುಣ್ಯ ಸ್ಥಳದಲ್ಲಿ ಹಮ್ಮಿಕೊಂಡಿದ್ದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಕುರಿತು ತಿಳಿಸಿದರು
1999ನೇ ಇಸವಿಯ ಜು.26ರಂದು ಭಾರತೀಯ ಸೈನಿಕರು ಅಪರೇಷನ್ ವಿಜಯ್ ಮೂಲಕ ಕಾರ್ಗಿಲ್-ಡ್ರಾಸ್ ವಲಯದಲ್ಲಿ ಪ್ರದರ್ಶಿಸಿದ ಶೌರ್ಯದ ನೆನಪಿಗಾಗಿ ಈ ದಿನವನ್ನು ಕಾರ್ಗಿಲ್ ವಿಜಯ ದಿವಸ ಎಂದು ಆಚರಿಸಲಾಗುತ್ತದೆ. ಕಾರ್ಗಿಲ್ ಯುದ್ಧದಲ್ಲಿ ಭಾರತ ವಿಜಯ ಪತಾಕೆಯನ್ನು ಹಾರಿಸಿ 25 ವರ್ಷ ತುಂಬುತ್ತದೆ. ಯುದ್ಧದಲ್ಲಿ ಹುತಾತ್ಮರಾದ ಸೈನಿಕರನ್ನು ಸ್ಮರಿಸಲು ದೇಶವು ಪ್ರತಿ ವರ್ಷ ಜು.26 ರಂದು ಕಾರ್ಗಿಲ್ ವಿಜಯ ದಿವಸ ಎಂದು ಆಚರಿಸಲಾಗುತ್ತಿದೆ. ಕಡ್ಲೆ ಗುದ್ದು ಗ್ರಾಮದಲ್ಲಿ ವೀರ ಮರಣ ಹೊಂದಿದ ವೀರ ಸೈನಿಕ ಪ್ರಭಾಕರ್ ಅವರ ಪುಣ್ಯ ಸ್ಥಳದಲ್ಲಿ ಕಾರ್ಗಿಲ್ ವಿಜಯೋತ್ಸವ ದಿವಸವನ್ನು ಪ್ರತಿ ವರ್ಷ ವಿದ್ಯಾರ್ಥಿಗಳು ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.ಸರ್ಕಾರಿ ಶಾಲೆ ಶಿಕ್ಷಕ ಚನ್ನಕೇಶವ ಮಾತನಾಡಿ, ಕಾರ್ಗಿಲ್ ವಿಜಯೋತ್ಸವ ತ್ಯಾಗ ಬಲಿದಾನದ ಸಂಕೇತ ದೇಶದ ಸೈನಿಕರು ಹುತಾತ್ಮರಾದ ಶೋಕಾಚರಣೆಯ ದಿನ ಕಾರ್ಗಿಲ್ ಯುದ್ಧದಲ್ಲಿ 527 ಸೈನಿಕರು ವೀರ ಮರಣವನ್ನು ಹೊಂದಿದ್ದಾರೆ. ಅವರೆಲ್ಲರಿಗಾಗಿ ನಮ್ಮ ಕಂಬನಿಗಳನ್ನು ಮಿಡಿಯೋಣ ನಮ್ಮ ದೇಶ ನಮ್ಮ ಹೆಮ್ಮೆ ನಮ್ಮ ಸೈನಿಕರು ನಮ್ಮ ಹೆಮ್ಮೆ ಎಂದರು.
ವೀರಯೋಧ ಪ್ರಭಾಕರ್ ಅವರ ಕುಟುಂಬದ ಸದಸ್ಯರು, ಶಿಕ್ಷಕರಾದ ನಟರಾಜ್, ಕರಿಬಸಪ್ಪ, ನಾಗರಾಜ್, ಜಗದೀಶ್, ರೇಣುಕಾ, ವಿದ್ಯಾರ್ಥಿಗಳು ಭಾಗವಹಿಸಿದ್ದರು.