ಸಾರಾಂಶ
ನಗರದಲ್ಲಿನ ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಅವರ ಪ್ರತಿಮೆಯನ್ನು ಶುಚಿಗೊಳಿಸುವುದರ ಮೂಲಕ ಕಾರ್ಗಿಲ್ ವಿಜಯ್ ದಿವಸ್ ಅನ್ನು ಆಚರಿಸಲಾಯಿತು.
ಮಡಿಕೇರಿ: ಕೊಡಗು ವಿದ್ಯಾಲಯದ ಎನ್ ಸಿ ಸಿ ಘಟಕದ ವತಿಯಿಂದ ನಗರದಲ್ಲಿನ ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಅವರ ಪ್ರತಿಮೆಯನ್ನು ಶುಚಿಗೊಳಿಸುವುದರ ಮೂಲಕ ಕಾರ್ಗಿಲ್ ವಿಜಯ ದಿವಸ್ ನ್ನು ಆಚರಿಸಲಾಯಿತು.
ಕೊಡಗು ವಿದ್ಯಾಲಯದ ಎನ್ ಸಿ ಸಿ ಕೆಡೆಟ್ ಗಳು ಪ್ರತಿಮೆಯನ್ನು ಶುಚಿಗೊಳಿಸಿ, ಆವರಣದ ಸುತ್ತ ಬೆಳೆದಿದ್ದ ಕಾಡು ಸಸಿಗಳನ್ನು ಕಿತ್ತು, ಗುಡಿಸಿ ಶುಚಿಗೊಳಿಸಿದರು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ಪ್ರಾಂಶುಪಾಲರಾದ ಸುಮಿತ್ರಾ ಕೆ ಎಸ್, ಆಡಳಿತ ಅಧಿಕಾರಿ ರವಿ ಪಿ ನೆರವೇರಿಸಿದರು. ಶಾಲೆಯ ಎನ್ ಸಿ ಸಿ ಅಧಿಕಾರಿ ಮೇಜರ್ ದಾಮೋದರ ಗೌಡ ಹಾಗೂ ಎನ್ ಸಿ ಸಿ ಸಿಬ್ಬಂದಿ ಹಾಜರಿದ್ದರು.