ಕರೀಗೌಡ, ಚಿಕ್ಕತಾಯಮ್ಮ ಹೆಸರಿನಲ್ಲಿ ದತ್ತಿ ಪದಕ ಸ್ಥಾಪನೆ

| Published : Oct 16 2025, 02:00 AM IST

ಕರೀಗೌಡ, ಚಿಕ್ಕತಾಯಮ್ಮ ಹೆಸರಿನಲ್ಲಿ ದತ್ತಿ ಪದಕ ಸ್ಥಾಪನೆ
Share this Article
  • FB
  • TW
  • Linkdin
  • Email

ಸಾರಾಂಶ

ವಿಧಾನ ಪರಿಷತ್‌ ಸದಸ್ಯ ಕೆ.ವಿವೇಕಾನಂದ ಅವರು ಮೈಸೂರು ವಿವಿಯಲ್ಲಿ ಶ್ರೀಕರೀಗೌಡ ಹಾಗೂ ಚಿಕ್ಕತಾಯಮ್ಮ ಚಿನ್ನದ ಪದಕ ದತ್ತಿ ಸ್ಥಾಪಿಸಿದ್ದಾರೆ. ರಾಜ್ಯಶಾಸ್ತ್ರ ವಿಷಯದಲ್ಲಿ ಎರಡನೇ ಸ್ಥಾನ ಪಡೆದವರಿಗೆ ಈ ಚಿನ್ನದ ಪದಕ ನೀಡಲು ಅವರು ತೀರ್ಮಾನಿಸಿದ್ದಾರೆ. ಇದಕ್ಕಾಗಿ 2 ಲಕ್ಷ ಚೆಕನ್ನು ವಿವಿಗೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ವಿಧಾನ ಪರಿಷತ್‌ ಸದಸ್ಯ ಕೆ.ವಿವೇಕಾನಂದ ಅವರು ಮೈಸೂರು ವಿವಿಯಲ್ಲಿ ಶ್ರೀಕರೀಗೌಡ ಹಾಗೂ ಚಿಕ್ಕತಾಯಮ್ಮ ಚಿನ್ನದ ಪದಕ ದತ್ತಿ ಸ್ಥಾಪಿಸಿದ್ದಾರೆ.

ರಾಜ್ಯಶಾಸ್ತ್ರ ವಿಷಯದಲ್ಲಿ ಎರಡನೇ ಸ್ಥಾನ ಪಡೆದವರಿಗೆ ಈ ಚಿನ್ನದ ಪದಕ ನೀಡಲು ಅವರು ತೀರ್ಮಾನಿಸಿದ್ದಾರೆ. ಇದಕ್ಕಾಗಿ 2 ಲಕ್ಷ ಚೆಕನ್ನು ವಿವಿಗೆ ನೀಡಿದ್ದಾರೆ.

ದತ್ತಿಯ ನಿಬಂಧನೆಯಂತೆ ಪ್ರತಿ ವರ್ಷ ಈ ದತ್ತಿಯ ಮೂಲ ಧನಕ್ಕೆ ಕ್ರೋಢೀಕೃತವಾಗುವ ಬಡ್ಡಿಯ ಹಣದಲ್ಲಿ ಶೇ. 20ರಷ್ಟನ್ನು ದತ್ತಿಯ ಮೂಲಧನಕ್ಕೆ ಸೇರಿಸಿ, ಉಳಿದ ಶೇ.80ರಷ್ಟು ಬಡ್ಡಿಯ ಹಣವನ್ನು ಅರ್ಹ ಅಭ್ಯರ್ಥಿಗೆ ದತ್ತಿ ಪ್ರದಾನ ಮಾಡಬೇಕು ಎಂದು ಅವರು ಕೋರಿದ್ದಾರೆ. ಈ ಸಂಬಂಧ ದತ್ತಿಯನ್ನು 2026ನೇ ವರ್ಷದಲ್ಲಿ ಜರುಗುವ ಘಟಿಕೋತ್ಸವದಿಂದ ಪ್ರದಾನ ಮಾಡಲು ತೀರ್ಮಾನಿಸಲಾಯಿತು.

ಅನುದಾನ, ಆರ್ಥಿಕ ಸ್ಥಿತಿ ಕೇಳಿದ ವಿವೇಕಾನಂದ:

ಮೈಸೂರು ವಿಶ್ವವಿದ್ಯಾನಿಲಯಕ್ಕೆ ಅಗತ್ಯವಿರುವ ಅನುದಾನ ಮತ್ತು ಆರ್ಥಿಕ ಸ್ಥಿತಿಗತಿಯ ಕುರಿತು ಕೆ. ವಿವೇಕಾನಂದ ಮಾಹಿತಿ ಪಡೆದರು.

ಮೈಸೂರು ವಿವಿಯಲ್ಲಿ ಅನುದಾನ ಕೊರತೆ ಇದರೆ ಅದನ್ನು ಸರ್ಕಾರದ ಗಮನಕ್ಕೆ ತರುತ್ತೇನೆ ಎಂದರು. ಈ ವೇಳೆ ಪ್ರೊ. ರವಿ ಅವರು ಪಿಂಚಣಿ ವ್ಯವಸ್ಥೆ ಎಚ್‌.ಆರ್‌.ಎಂ.ಎಸ್‌ ನಿಯಮದಂತೆ ನೀಡಲಿ ಅದಕ್ಕೆ ನೆರವಾಗುವಂತೆ ಕೋರಿದರು.

ಅಲ್ಲದೆ ಆರ್ಥಿಕ ಸ್ಥಿತಿ ಕುಸಿದಿರುವುದಕ್ಕೆ ಪ್ರತ್ಯೇಕವಾಗಿ ಮೂರು ವಿವಿಗಳನ್ನು ಮಾಡಿರುವುದೂ ಕಾರಣ ಎಂಬ ಕುರಿತು ಅವರು ಮಾಹಿತಿ ಪಡೆದರು. ಈ ಎಲ್ಲಾ ವಿಷಯಗಳ ಕುರಿತು ತಾವು ಗಮನ ಹರಿಸುವುದಾಗಿ ವಿವೇಕಾನಂದ ಹೇಳಿದರು.

ಉಚಿತ ಸೀಟ್‌ ಏಕೆ ಕೊಡುವುದಿಲ್ಲ:

ಯುವರಾಜ ಕಾಲೇಜಿನಲ್ಲಿ ಸಿಸಿಎ ಗೆ ಒಂದು ಸೀಟ್‌ ಕೊಡುವಂತೆ ನಾನು ಪ್ರಾಂಶುಪಾಲರಲ್ಲಿ ಕೋರಿದೆ. ಆದರೆ ಭರ್ತಿಯಾಗದೆ ಆಗುವುದಿಲ್ಲ ಎಂದರು. ನಾಲ್ಕು ಜಿಲ್ಲೆಯ ಪ್ರತಿನಿಧಿಯಾದ ನನ್ನ ಬಳಿಕ ಅನೇಕ ಬಡವರು ಸೀಟ್‌ ಕೊಡಿಸುವಂತೆ ಕೋರಿ ಬರುತ್ತಾರೆ. ನಾವು ಕೇಳಿದಾಗ ಇಲ್ಲ ಎಂದರೆ ಬೇಸರವಾಗುವುದಿಲ್ಲವೇ ಎಂದು ವಿವೇಕಾನಂದ ಪ್ರಶ್ನಿಸಿದರು. ಈ ಬಗ್ಗೆ ಪರಿಶೀಲಿಸುವುದಾಗಿ ಕುಲಪತಿ ತಿಳಿಸಿದರು.