ಸಾರಾಂಶ
ಅಫಜಲ್ಪುರ ತಾಲೂಕು ವೀರಶೈವ ಸಮಾಜದ ತಾಲೂಕು ಅಧ್ಯಕ್ಷರಾಗಿ ಹಾಲಿ ಅಧ್ಯಕ್ಷ ಚಂದ್ರಶೇಖರ ಕರ್ಜಗಿ ಅವಿರೋಧವಾಗಿ 3ನೇ ಬಾರಿಗೆ ಆಯ್ಕೆಯಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಚವಡಾಪುರ
ಅಫಜಲ್ಪುರ ತಾಲೂಕು ವೀರಶೈವ ಸಮಾಜದ ತಾಲೂಕು ಅಧ್ಯಕ್ಷರಾಗಿ ಹಾಲಿ ಅಧ್ಯಕ್ಷ ಚಂದ್ರಶೇಖರ ಕರ್ಜಗಿ ಅವಿರೋಧವಾಗಿ 3ನೇ ಬಾರಿಗೆ ಆಯ್ಕೆಯಾಗಿದ್ದಾರೆ.ನೂತನ ಅಧ್ಯಕ್ಷರಾಗಿ ಪುನರಾಯ್ಕೆಯಾದ ಬಳಿಕ ಚಂದ್ರಶೇಖರ ಕರ್ಜಗಿ ಮಾತನಾಡಿ ಸಮಾಜದ ಸೇವೆ ಮಾಡುವ ಅವಕಾಶವನ್ನು ಮೂರನೇ ಬಾರಿಗೆ ಕಲ್ಪಿಸಿದ್ದಾರೆ. ನಮ್ಮ ಮುಂದೆ ಬಹಳಷ್ಟು ಸವಾಲುಗಳಿವೆ. ಅಫಜಲ್ಪುರ ಪಟ್ಟಣದಲ್ಲೊಂದು ಸಿಎ ನಿವೇಶನ ಪಡೆದು ಸಮುದಾಯ ಭವನ, ನಮ್ಮ ಸಮಾಜದ ವಿದ್ಯಾರ್ಥಿಗಳಿಗಾಗಿ ವಸತಿ ನಿಲಯ ಕಟ್ಟಿಸಬೇಕಾಗಿದೆ. ಜೊತೆಗೆ ಸಮಾಜದ ಸಂಘಟನೆ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸುವ ಕೆಲಸ ಮಾಡುವ ಸವಾಲು ನನ್ನ ಮುಂದಿದ್ದು ಎಲ್ಲರ ಸಹಕಾರ ಪಡೆದು ಇವುಗಳನ್ನು ಮಾಡಿ ತೀರುತ್ತೇನೆ ಎಂದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಬಸವರಾಜ ವಾಳಿ, ಶೈಲೇಶ ಗುಣಾರಿ, ಚಂದ್ರಾಮ ಬಳಗುಂಡಿ, ಮಹಾದೇವಪ್ಪ ಕಲಕೇರಿ, ಅಪ್ಪಾಶಾ ರಾಂಪೂರ, ಬಸಣ್ಣ ಗುಣಾರಿ, ಕಾಂತು ಮ್ಯಾಳೇಶಿ, ರವಿ ನಂದಶೆಟ್ಟಿ, ಮಹೇಶ ಶೆಟ್ಟಿ, ಅಂಬರೀಷ ಹಿರೇಮಠ, ಧನರಾಜ ನೂಲಾ, ಸುನೀಲ ಶೆಟ್ಟಿ, ಮಡಿವಾಳಪ್ಪ ಗೋಳಸಾರ, ಶರಣು ಕುಂಬಾರ ಸೇರಿದಂತೆ ಅನೇಕರು ಇದ್ದರು.;Resize=(128,128))
;Resize=(128,128))