ಕಾರ್ಕಳ: ವಿಜೇತ ವಿಶೇಷ ಶಾಲೆಯಲ್ಲಿ ದೀಪಾವಳಿ ಸಂಭ್ರಮ

| Published : Oct 19 2025, 01:02 AM IST

ಸಾರಾಂಶ

ಇಲ್ಲಿನ ಅಯ್ಯಪ್ಪನಗರದ ವಿಜೇತ ವಿಶೇಷ ಶಾಲೆಯ ದೇವರ ಮಕ್ಕಳೊಂದಿಗೆ ಶನಿವಾರ ವಿಶೇಷ ರೀತಿಯಲ್ಲಿ ಗಣ್ಯರು ದೀಪಾವಳಿ ಹಬ್ಬ ಆಚರಿಸಿದರು. ಕಾರ್ಕಳ ತಹಸೀಲ್ದಾರ್, ತಾಲೂಕು ದಂಡಾಧಿಕಾರಿಗಳಾದ ಪ್ರದೀಪ್ ಆರ್. ಕುರ್ಡಕರ್ ಅವರು ದೀಪಗಳನ್ನು ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.

ಕನ್ನಡಪ್ರಭ ವಾರ್ತೆ ಕಾರ್ಕಳ

ಮುಖ್ಯ ಅತಿಥಿಗಳಾಗಿ ನಿವೃತ್ತ ಇಸ್ರೋ ವಿಜ್ಞಾನಿ, ಸಮಾಜ ಸೇವಕರಾದ ಇಡ್ಯಾ ಜನಾರ್ದನ ರಾವ್ ಉಪಸ್ಥಿತರಿದ್ದು, ಶಾಲಾ ಶ್ರೇಯೋಭಿವೃದ್ಧಿಗಾಗಿ ದೇಣಿಗೆ ಹಸ್ತಾಂತರಿಸಿದರು. ರೊಟೇರಿಯನ್ ಸುರೇಶ್ ನಾಯಕ್ ಕಾರ್ಕಳ, ಮಕ್ಕಳಿಗೆ ಸಿಹಿತಿಂಡಿ ವಿತರಿಸಿದರು.

ಅಮ್ಮನ ನೆರವು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅವಿನಾಶ್ ಶೆಟ್ಟಿ, ನಕ್ಷತ್ರ ಕಡ್ಡಿಗಳನ್ನು ವಿತರಿಸಿ ಮಕ್ಕಳ ದೀಪಾವಳಿಯ ಸಂಭ್ರವನ್ನು ಹೆಚ್ಚಿಸಿದರು. ಇದೇ ಸಂದರ್ಭದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಶಾಲಾ 36 ಸಿಬ್ಬಂದಿ ವರ್ಗದವರಿಗೆ ಉಡುಗೊರೆ ವಿತರಿಸಲಾಯಿತು.

ಶಾಲಾ ಹಿತೈಷಿಗಳಾದ ಅಪ್ಪುರಾಯ ಕಿಣಿ, ನಿವೃತ್ತ ಪ್ರಾಧ್ಯಾಪಕ ವಿಶ್ವನಾಥ್, ಶ್ರೀ ದುರ್ಗಾ ವಿದ್ಯಾ ಸಂಘ ಟ್ರಸ್ಟ್ ಅಧ್ಯಕ್ಷ ಕೆ.ರಾಧಾಕೃಷ್ಣ ಶೆಟ್ಟಿ, ವಿಜೇತ ವಿಶೇಷ ಶಾಲಾ ಸಂಸ್ಥಾಪಕಿ ಡಾ.ಕಾಂತಿ ಹರೀಶ್ ಉಪಸ್ಥಿತರಿದ್ದರು.

ವಿಶೇಷ ಶಿಕ್ಷಕಿ ಹರ್ಷಿತಾ ನಿರೂಪಿಸಿದರು. ಡಾ.ಕಾಂತಿ ಹರೀಶ್ ಸ್ವಾಗತಿಸಿದರು. ವಿಶೇಷ ಶಿಕ್ಷಕಿ ಶ್ರೀನಿಧಿ ಅಶೋಕ್ ವಂದಿಸಿದರು. ಶಾಲಾ ಮ್ಯಾನೇಜಿಂಗ್ ಟ್ರಸ್ಟಿ ಹರೀಶ್, ಸಿಬ್ಬಂದಿ ವರ್ಗದವರು ಹಾಗೂ ಶಾಲಾ ಮುಗ್ಧ ಮಕ್ಕಳು ಕಾರ್ಯಕ್ರಮದಲ್ಲಿ ಹಾಡಿ ಕುಣಿದು ದೀಪಾವಳಿ ಹಬ್ಬವನ್ನು ಸಂಭ್ರಮಿಸಿದರು.