ಇಲ್ಲಿನ ಜೆಸಿಐ ಬೆಳ್ಮಣ್ ಘಟಕವು ಚೆನೈನಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ಅಧಿವೇಶನದಲ್ಲಿ ತರಬೇತಿ ವಿಭಾಗದ ರಾಷ್ಟ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಕನ್ನಡಪ್ರಭ ವಾರ್ತೆ, ಕಾರ್ಕಳ

ಇಲ್ಲಿನ ಜೆಸಿಐ ಬೆಳ್ಮಣ್ ಘಟಕವು ಚೆನೈನಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ಅಧಿವೇಶನದಲ್ಲಿ ತರಬೇತಿ ವಿಭಾಗದ ರಾಷ್ಟ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಈ ವರ್ಷದ ಅವಧಿಯಲ್ಲಿ ಜೆಸಿಐ ಬೆಳ್ಮಣ್ ಘಟಕವು 100 ತರಬೇತಿಗಳನ್ನು ಪೂರ್ತಿ ಮಾಡಿ ದಾಖಲೆ ಬರೆದಿತ್ತು. ಈ ಪ್ರಶಸ್ತಿಯನ್ನು ಜೆಸಿಐ ಬೆಳ್ಮಣ್ ಘಟಕದ 2025ರ ಅಧ್ಯಕ್ಷರಾದ ಇನ್ನ ಪ್ರದೀಪ್ ಶೆಟ್ಟಿ ಅವರು ಜೆಸಿಐ ರಾಷ್ಟ್ರೀಯ ಅಧ್ಯಕ್ಷರಾದ ಅಂಕುರ್ ಜುಂಝೂನವಾಲ ಅವರಿಂದ ಡಿ. 28ರಂದು ಸ್ವೀಕರಿಸಿದರು.ಜೆಸಿಐ ವಲಯಾಧ್ಯಕ್ಷ ಅಭಿಲಾಶ್ ಬಿ.ಎ. ಮತ್ತು ಇತರ ವಲಯಾಧಿಕಾರಿಗಳು ಉಪಸ್ಥಿತರಿದ್ದರು. ಜೆಸಿಐ ಬೆಳ್ಮಣ್ ಘಟಕವು ಇದುವರೆಗೆ ಪಡೆದ ಐದನೇ ಪ್ರಶಸ್ತಿ ಇದಾಗಿದೆ.