ಇನ್‌ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೇಟರೀಸ್ ಆಫ್ ಇಂಡಿಯಾ (ICSI) ವತಿಯಿಂದ ನಡೆಸಲಾದ ಸಿ.ಎಸ್.ಇ.ಇ.ಟಿ (Company Secretary Executive Entrance Test – ಜನವರಿ 2026) ಪರೀಕ್ಷೆಯಲ್ಲಿ ಜ್ಞಾನಸುಧಾ ವಾಣಿಜ್ಯ ವಿಭಾಗದ 48 ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳೊಂದಿಗೆ ತೇರ್ಗಡೆ

ಕಾರ್ಕಳ : ಇನ್‌ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೇಟರೀಸ್ ಆಫ್ ಇಂಡಿಯಾ (ICSI) ವತಿಯಿಂದ ನಡೆಸಲಾದ ಸಿ.ಎಸ್.ಇ.ಇ.ಟಿ (Company Secretary Executive Entrance Test – ಜನವರಿ 2026) ಪರೀಕ್ಷೆಯಲ್ಲಿ ಜ್ಞಾನಸುಧಾ ವಾಣಿಜ್ಯ ವಿಭಾಗದ 48 ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳೊಂದಿಗೆ ತೇರ್ಗಡೆಗೊಂಡಿದ್ದಾರೆ.

ಈ ಪರೀಕ್ಷೆಯಲ್ಲಿ ಗ್ಯಾನ್ ಹೆಗ್ಡೆ ಅವರು 200 ಅಂಕಗಳಲ್ಲಿ 145 ಅಂಕಗಳನ್ನು ಪಡೆದು ಜ್ಞಾನಸುಧಾ ಸಂಸ್ಥೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಯಾಗಿ ಹೊರಹೊಮ್ಮಿದ್ದಾರೆ. ಕಾರ್ತಿಕ್ ಶೆಟ್ಟಿ (142 ಅಂಕ), ಶ್ರೀಕರ ಎಸ್. ಉಪಾಧ್ಯಾಯ (141 ಅಂಕ), ವಿಭೂಷಿತ್ ಶೆಟ್ಟಿ (134 ಅಂಕ), ಪ್ರತುಲ್ ಡಿ’ಸೋಜ (132 ಅಂಕ) ಹಾಗೂ ರಕ್ಷಿತ್ ಶೆಟ್ಟಿ (132 ಅಂಕ) ಅಂಕಗಳನ್ನು ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ.ವಿದ್ಯಾರ್ಥಿಗಳ ಈ ಶ್ಲಾಘನೀಯ ಸಾಧನೆಗೆ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್‌ನ ಅಧ್ಯಕ್ಷರಾದ ಡಾ. ಸುಧಾಕರ್ ಶೆಟ್ಟಿ ಅವರು ಹಾಗೂ ಜ್ಞಾನಸುಧಾ ಸಂಸ್ಥೆಯ ಆಡಳಿತ ಮಂಡಳಿ, ಉಪನ್ಯಾಸಕ ವೃಂದ ಮತ್ತು ಜ್ಞಾನಸುಧಾ ಪರಿವಾರವು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.