ಕಾರ್ಕಳ: ನಿನ್ನ ನಡುವೆ ಪುಸ್ತಕ ಬಿಡುಗಡೆ

| Published : Feb 06 2024, 01:33 AM IST

ಸಾರಾಂಶ

ಹೊಸಸಂಜೆ ಪ್ರಕಾಶನದ 31 ನೆಯ ಪ್ರಕಟಣೆ ನರೇಂದ್ರ ಕಬ್ಬಿನಾಲೆ ಅವರ ಕವನಸಂಕಲನ ‘ನನ್ನ ನಿನ್ನ ನಡುವೆ’ ಕೃತಿ ಕಾರ್ಕಳ ಎಸ್ ವಿ ಟಿ ಶಿಕ್ಷಣ ಸಂಸ್ಥೆಯ ಅಂಡಾರು ವಿಠ್ಠಲ ರುಕ್ಮಿಣಿ ಕಿಣಿ ಸಭಾಭವನದಲ್ಲಿ ಲೋಕಾರ್ಪಣೆಗೊಂಡಿತು. ಕಾರ್ಕಳ ತಾಲೂಕು ರೂರಲ್ ಇಂಡಸ್ಟ್ರೀಸ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ ಪುಸ್ತಕ ಬಿಡುಗಡೆಗೊಳಿಸಿದರು.

ಕನ್ನಡಪ್ರಭ ವಾರ್ತೆ ಕಾರ್ಕಳ

ಲೋಕದಲ್ಲಿ ಸರ್ವ ವಿಷಯದಲ್ಲಿ ಸರ್ವಜ್ಞರು ಎನ್ನುವವರು ಯಾರೂ ಇಲ್ಲ. ಆದರೆ ಪ್ರತಿಯೊಬ್ಬರಲ್ಲಿಯೂ ಯಾವುದಾದರೊಂದು ಹವ್ಯಾಸ ಪ್ರತಿಭೆ ಚಟುವಟಿಕೆ ಇದ್ದೇ ಇರುತ್ತದೆ. ಯಾರಿಗೆ ಯಾವುದು ಆಸಕ್ತಿ ಮತ್ತು ಶಕ್ತಿ ಇದೆಯೋ ಆ ವ್ಯವಸಾಯದಲ್ಲಿ ಸಾಧನೆ ಮಾಡಬೇಕು ಎಂದು ಕಾರ್ಕಳ ತಾಲೂಕು ರೂರಲ್ ಇಂಡಸ್ಟ್ರೀಸ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ ಹೇಳಿದರು.

ಹೊಸಸಂಜೆ ಪ್ರಕಾಶನದ 31 ನೆಯ ಪ್ರಕಟಣೆ ನರೇಂದ್ರ ಕಬ್ಬಿನಾಲೆ ಅವರ ಕವನಸಂಕಲನ ‘ನನ್ನ ನಿನ್ನ ನಡುವೆ’ ಕೃತಿಯನ್ನು ಎಸ್ ವಿ ಟಿ ಶಿಕ್ಷಣ ಸಂಸ್ಥೆಯ ಅಂಡಾರು ವಿಠ್ಠಲ ರುಕ್ಮಿಣಿ ಕಿಣಿ ಸಭಾಭವನದಲ್ಲಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು .

ಪರಂಪರಾ ವಿವಿಧೋದ್ದೇಶ ಸಹಕಾರಿ ಸಂಘ ನಿಯಮಿತದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಂಗಾಧರ ಪಣಿಯೂರು ಅಧ್ಯಕ್ಷತೆ ವಹಿಸಿ ಮಾತನಾಡಿ ಮನುಷ್ಯರಾಗಿ ಹುಟ್ಟಿದವರನ್ನು ಮನುಷ್ಯ ರನ್ನಾಗಿಸಲು ಸಾಹಿತ್ಯ ನೆರವಾಗುತ್ತದೆ. ಪ್ರತಿಯೊಬ್ಬರ ನೋವುಗಳನ್ನು ಮರೆಸುವುದು ಮತ್ತು ಜಗತ್ತಿನಾದ್ಯಂತ ಪ್ರೀತಿ ಹರಿಸುವುದು ಸಾಹಿತ್ಯದ ಉದ್ದೇಶವಾಗಬೇಕು . ಜೀವನಪ್ರೀತಿ ಬೆಳೆಸಲು ಮತ್ತು ಮಾನವೀಯ ನೆಲೆಯಲ್ಲಿ ಪ್ರತಿಯೊಂದಕ್ಕೂ ಸಹಭಾಗಿಯಾಗುವುದಿದ್ದರೆ ಅದು ಸಾಹಿತ್ಯದಿಂದ ಮಾತ್ರ ಸಾಧ್ಯ ಎಂದರು.

ಎಸ್ ವಿ ಟಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ರಾಮದಾಸ ಪ್ರಭು , ಪ್ರೌಢಶಾಲೆಯ ಮುಖ್ಯಶಿಕ್ಷಕ ಯೋಗೇಂದ್ರ ನಾಯಕ್ , ಗಾಯಕಿ ಆರತಿ ಪೈ , ಪೂಜಾ ಕಾಮತ್ , ಕೃತಿಕಾರ ನರೇಂದ್ರ ಕಬ್ಬಿನಾಲೆ, ಪ್ರಕಾಶಕ ಆರ್ . ದೇವರಾಯ ಪ್ರಭು ಉಪಸ್ಥಿತರಿದ್ದರು.

ಪ್ರೇಕ್ಷಾ ಸ್ವಾಗತಿಸಿದರು. ಕ ಸಾ ಪ ಗೌರವ ಕಾರ್ಯದರ್ಶಿ ದೇವದಾಸ ಕೆರೆಮನೆ ಪ್ರಸ್ತಾವನೆಗೈದರು. ಸಂದರ್ಶಿನಿ ಕಾರ್ಯಕ್ರಮ ನಿರ್ವಹಿಸಿದರು. ಸಮೀಕ್ಷಾ ವಂದಿಸಿದರು.