ಸಾರಾಂಶ
ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಶೆನ್ ಇದರ ಉಡುಪಿ ವಲಯದ ವತಿಯಿಂದ ಶಿವ - ಜಯ ಟ್ರೋಫಿ - 2025 ಕ್ರಿಕೆಟ್ ಪಂದ್ಯಾಟ ಇತ್ತೀಚಿಗೆ ಉಡುಪಿಯ ಬೀಡಿನಗುಡ್ಡೆಯ ಕ್ರೀಡಾಂಗಣದಲ್ಲಿ ನಡೆಯಿತು
ಕನ್ನಡಪ್ರಭ ವಾರ್ತೆ ಉಡುಪಿ
ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಶೆನ್ ಇದರ ಉಡುಪಿ ವಲಯದ ವತಿಯಿಂದ ಶಿವ - ಜಯ ಟ್ರೋಫಿ - 2025 ಕ್ರಿಕೆಟ್ ಪಂದ್ಯಾಟ ಇತ್ತೀಚಿಗೆ ಉಡುಪಿಯ ಬೀಡಿನಗುಡ್ಡೆಯ ಕ್ರೀಡಾಂಗಣದಲ್ಲಿ ನಡೆಯಿತು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಉಡುಪಿ ಶಾಸಕ ಯಶಪಾಲ್ ಸುವರ್ಣ ಆಗಮಿಸಿ ಶುಭ ಹಾರೈಸಿದರು.ಅಂತಿಮ ಪಂದ್ಯದಲ್ಲಿ ವಿಜೇತ ಕಾರ್ಕಳ ಎಸ್.ಕೆ.ಪಿ.ಎ. ತಂಡಕ್ಕೆ ಶಿವ - ಜಯ ಟ್ರೋಫಿ ಮತ್ತು 22, 222 ರು. ನಗದು ಬಹುಮಾನವನ್ನು ಸಮಾಜ ಸೇವಕ ಕೆ. ಕೃಷ್ಣಮೂರ್ತಿ ಆಚಾರ್ಯ ವಿತರಿಸಿದರು. ದ್ವಿತೀಯ ಬಹುಮಾನ, 11,111 ರು. ನಗದನ್ನು ಕಾಪು ಎಸ್.ಕೆ.ಪಿ.ಎ. ತಂಡಕ್ಕೆ ಜಿಲ್ಲಾ ಸಂಘದ ಅಧ್ಯಕ್ಷ ಪದ್ಮಪ್ರಸಾದ್ ಜೈನ್, ತೃತೀಯ ಬಹುಮಾನ, 7,777 ರು.ಗಳನ್ನು ಬ್ರಹ್ಮಾವರ ಎಸ್.ಕೆ.ಪಿ.ಎ. ತಂಡಕ್ಕೆ ಕಡೆಕಾರು ಗ್ರಾಪಂ ಉಪಾಧ್ಯಕ್ಷ ನವೀನ್ ಶೆಟ್ಟಿ ಮತ್ತು 4ನೇ ಬಹುಮಾನ, 5,555 ರು.ಗಳನ್ನು ಉಡುಪಿ ಎಸ್.ಕೆ.ಪಿ.ಎ. ತಂಡಕ್ಕೆ ವಿತರಿಸಿದರು.
ವೇದಿಕೆಯಲ್ಲಿ ಸಂಘದ ಗೌರವಾಧ್ಯಕ್ಷ ನವೀನ್ ಬಳ್ಳಾಲ್, ಜಿಲ್ಲಾ ಉಪಾಧ್ಯಕ್ಷರಾದ ಪ್ರವೀಣ್ ಕೊರೆಯಾ, ರವಿಪ್ರಕಾಶ್, ಅಜೇಯ ಕುಮಾರ್ ಕಪ್ಪೆಟ್ಟು, ರಾಕೇಶ್ ಶೆಟ್ಟಿ ತುಮಕೂರು, ರಾಘವೇಂದ್ರ ಪಾಟೀಲ್, ಕ್ರೀಡಾ ಕಾರ್ಯದರ್ಶಿ ಅಶೋಕ್ ಪುತ್ರನ್, ಕೋಶಾಧಿಕಾರಿ ರಮೇಶ್ ಎಳ್ಳೂರು ಉಪಸ್ಥಿತರಿದ್ದರು.ಛಾಯಾವೃತ್ತಿಯಲ್ಲಿ ಕಾರ್ಯ ನಿರ್ವಹಿಸಿದ ಮಹಿಳೆಯರನ್ನು ಗೌರವಿಸಲಾಯಿತು. ಪಂದ್ಯಾಟದ ವೀಕ್ಷಣೆ ವರದಿಯನ್ನು ರಾಜ್ ಶೇಖರ್ ನೀಡಿದರು. ಉಡುಪಿ ವಲಯಾಧ್ಯಕ್ಷ ಸುಧೀರ್ ಎಂ. ಶೆಟ್ಟಿ ಸ್ವಾಗತಿಸಿದರು, ರಾಘವ್ ಸೇರಿಗಾರ ನಿರೂಪಿಸಿದರು, ಕಾರ್ಯದರ್ಶಿ ದಿವಾಕರ ಹಿರಿಯಡಕ ವಂದಿಸಿದರು.