ಕಾರ್ಕಳ ತಾಲೂಕಿನಲ್ಲಿ ಶನಿವಾರ ಸಂಜೆ ಭಾರೀ ಗಾಳಿ ಮಳೆಯು ಸುರಿದು ಜನಜೀವನ ಅಸ್ತವ್ಯಸ್ತಗೊಂಡಿತು. ತಾಲೂಕಿನ ನೂರಲ್ಬೆಟ್ಟು, ಈದು, ಹೊಸ್ಮಾರು, ರೆಂಜಾಳ, ನೆಲ್ಲಿಕಾರು, ಇರ್ವತ್ತೂರು, ಮುಡಾರು, ಕೆರುವಾಶೆ, ಶಿರ್ಲಾಲು ಸೇರಿದಂತೆ ಹಲವು ಭಾಗಗಳಲ್ಲಿ ಮಳೆ ತೀವ್ರವಾಗಿದ್ದು, ಕೆಲವೆಡೆ ಆಲಿಕಲ್ಲು ಮಳೆಯಾಗಿದೆ.
ಕಾರ್ಕಳ: ಕಾರ್ಕಳ ತಾಲೂಕಿನಲ್ಲಿ ಶನಿವಾರ ಸಂಜೆ ಭಾರೀ ಗಾಳಿ ಮಳೆಯು ಸುರಿದು ಜನಜೀವನ ಅಸ್ತವ್ಯಸ್ತಗೊಂಡಿತು. ತಾಲೂಕಿನ ನೂರಲ್ಬೆಟ್ಟು, ಈದು, ಹೊಸ್ಮಾರು, ರೆಂಜಾಳ, ನೆಲ್ಲಿಕಾರು, ಇರ್ವತ್ತೂರು, ಮುಡಾರು, ಕೆರುವಾಶೆ, ಶಿರ್ಲಾಲು ಸೇರಿದಂತೆ ಹಲವು ಭಾಗಗಳಲ್ಲಿ ಮಳೆ ತೀವ್ರವಾಗಿದ್ದು, ಕೆಲವೆಡೆ ಆಲಿಕಲ್ಲು ಮಳೆಯಾಗಿದೆ.ಬೆಳಗ್ಗಿನಿಂದ ಮೋಡ ಕವಿದು ಉಷ್ಣತೆ ಹೆಚ್ಚಾಗಿದ್ದ ಬಳಿಕ ಸಂಜೆ ಸುರಿದ ಈ ಭಾರೀ ಮಳೆಯಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿ ಹಲವೆಡೆ ಕರೆಂಟ್ ಕೈಕೊಟ್ಟಿತು. ಗಾಳಿ ಬಿರುಗಾಳಿ ವೇಗವಾಗಿ ಬೀಸಿದ ಪರಿಣಾಮ ಕೆಲವು ಕಡೆಗಳಲ್ಲಿ ಮರಗಳು ನೆಲಕ್ಕುರುಳಿ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಸ್ಥಳೀಯರು ಮತ್ತು ಅಧಿಕಾರಿಗಳು ಸೇರಿ ಮರಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿದರು.
ಇದಕ್ಕೆ ಜೊತೆಗೆ ಹೆಬ್ರಿ ತಾಲೂಕಿನ ಮುನಿಯಾಲು, ವರಂಗ, ಅಂಡಾರು ಹಾಗೂ ಕಬ್ಬಿನಾಲೆ ಪ್ರದೇಶಗಳಲ್ಲಿಯೂ ಮಳೆಯಾದ ಬಗ್ಗೆ ವರದಿಯಾಗಿದೆ. ಮಳೆಯ ಪರಿಣಾಮವಾಗಿ ಕೃಷಿ ಭೂಮಿಗಳಿಗೆ ತಾತ್ಕಾಲಿಕ ಹಾನಿ ಉಂಟಾಗಿರುವ ಸಾಧ್ಯತೆ ಇದ್ದು, ರೈತರು ಆತಂಕ ವ್ಯಕ್ತಪಡಿಸಿದ್ದಾರೆ.ಬೇಸಿಗೆಯ ನಡುವೆ ಸುರಿದ ಈ ಮಳೆ ತಂಪು ನೀಡಿದರೂ, ಕೆಲವೆಡೆ ಹಾನಿ ಉಂಟಾಗಿದೆ
