ಸಾರಾಂಶ
ದೇಶದಲ್ಲಿಯೇ ಕರ್ನಾಟಕ ಸಕ್ರಿಯ ಸದಸ್ಯತಾ ಅಭಿಯಾನದಲ್ಲಿ 70 ಲಕ್ಷ ಸದಸ್ಯರನ್ನು ಹೊಂದುವ ಮೂಲಕ 4 ಸ್ಥಾನದಲ್ಲಿದ್ದು, ಬಾಗಲಕೋಟೆ ಮತಕ್ಷೇತ್ರದಲ್ಲಿ 50 ಸಾವಿರದಾಟಿದ್ದು ಇನ್ನು ಹೆಚ್ಚು ಸದಸ್ಯರನ್ನು ನೋಂದಣಿ ಮಾಡುವಂತೆ ಸಲಹೆ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ದೇಶದಲ್ಲಿಯೇ ಕರ್ನಾಟಕ ಸಕ್ರಿಯ ಸದಸ್ಯತಾ ಅಭಿಯಾನದಲ್ಲಿ 70 ಲಕ್ಷ ಸದಸ್ಯರನ್ನು ಹೊಂದುವ ಮೂಲಕ 4 ಸ್ಥಾನದಲ್ಲಿದ್ದು, ಬಾಗಲಕೋಟೆ ಮತಕ್ಷೇತ್ರದಲ್ಲಿ 50 ಸಾವಿರದಾಟಿದ್ದು ಇನ್ನು ಹೆಚ್ಚು ಸದಸ್ಯರನ್ನು ನೋಂದಣಿ ಮಾಡುವಂತೆ ಸಲಹೆ ನೀಡಿದರು.ನಗರದ ಬಿವಿವಿ ಸಂಘದ ಮಿನಿ ಸಭಾಭವನದಲ್ಲಿ ನಡೆದ ಬಿಜೆಪಿ ಸಕ್ರಿಯ ಸದಸ್ಯರ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದು 2ವರ್ಷ ಕಳೆದರು, ರಾಜ್ಯ ಹಾಗೂ ಬಾಗಲಕೋಟೆಯಲ್ಲಿ ಯಾವುದೆ ಅಭಿವೃದ್ಧಿ ಕೆಲಸಗಳು ಆಗಿಲ್ಲಾ. ಬರೀ ಹಗರಣಗಳ ಸುತ್ತ ಸರ್ಕಾರ ಸುತ್ತುತ್ತಿದೆ. ಅಕಾಲಿಕ ಮಳೆಯಿಂದ ಬೆಳೆ ಕಳೆದುಕೊಂಡ ರೈತರಿಗೆ ಇನ್ನು ಪರಿಹಾರ ಬಂದಿಲ್ಲಾ. ಸಂಕಷ್ಟದಲ್ಲಿರುವ ಕೃಷಿಕರಿಗೆ ಮೊದಲು ಪರಿಹಾರ ಕೋಡಬೇಕು ಎಂದ ಅವರು, ವಕ್ಫ್ ಬೋರ್ಡ್‌ಗೆ ಸಂಬಂಧಿಸಿದಂತೆ ಕಾನೂನು ಬದಲಾಯಿಸುವುದು ಇಂದಿನ ಅಗತ್ಯವಾಗಿದೆ. ವಕ್ಫ್ ಬೋರ್ಡ್ ಕಾನೂನಿಗೆ ತಿದ್ದುಪಡಿ ತರಬೇಕಾಗಿದೆ ಎಂದರು.
ಇದೆ ಸಂದರ್ಭದಲ್ಲಿ ತಮ್ಮದೆ ದೂರವಾಣಿ ಸಂಖ್ಯೆಯಿಂದ 50ಕ್ಕೂ ಹೆಚ್ಚು ಜನರ ನೇರ ಸದಸ್ಯತ್ವ ಮಾಡಿಸುವ ಕುರಿತಾಗಿ ಮಾಹಿತಿ ನೀಡಲಾಯಿತು. ಬಿಟಿಡಿಎ ಮಾಜಿ ಸಭಾಪತಿ ಜಿ.ಎನ್.ಪಾಟೀಲ, ಡಾ.ಎಂ.ಎಸ್.ದಡ್ಡೆನ್ನವರ, ಯಲ್ಲಪ್ಪ ಬೆಂಡಿಗೇರಿ, ನಗರಸಭೆ ಅಧ್ಯಕ್ಷೆ ಸವಿತಾ ಲಂಕೆನ್ನವರ, ಉಪಾಧ್ಯಕ್ಷೆ ಶೋಭಾ ರಾವ, ಗ್ರಾಮೀಣ ಅಧ್ಯಕ್ಷ ಸುರೇಶ ಕೋಣ್ಣೂರ, ನಗರ ಮಂಡಲ ಅಧ್ಯಕ್ಷ ಬಸವರಾಜ ಹುನಗುಂದ, ಬಸವರಾಜ ಅವರಾದಿ, ಶಿವಾನಂದ ಟವಳಿ ಸೇರಿದಂತೆ ನಗರ ಗ್ರಾಮೀಣ ಪದಾಧಿಕಾರಿಗಳು ಭಾಗವಹಿಸಿದ್ದರು.