ಸಾರಾಂಶ
ಕನ್ನಡಪ್ರಭ ವಾರ್ತೆ ಬನ್ನೂರು ಕನ್ನಡಿಗರಾದ ನಾವೆಲ್ಲರು ಕನ್ನಡ ನಾಡು, ನುಡಿ ರಕ್ಷಣೆಯ ಸಂರಕ್ಷಣೆಗೆ ಬದ್ದರಾಗಿರಲು ಪ್ರತಿಯೊಬ್ಬರಿಗು ಕನ್ನಡಾಭಿಮಾನ ಅಗತ್ಯ ಎಂದು ಪುರಸಭಾ ಮುಖ್ಯಾಧಿಕಾರಿ ಹೇಮಂತ್ ರಾಜ್ ಹೇಳಿದರು.ಪಟ್ಟಣದ ಸಂತೆಮಳದ ಬಸವೇಶ್ವರ ವೃತ್ತದಲ್ಲಿ ಸೋಮವಾರ ಟಿ. ನರಸೀಪುರ ತಾಲೂಕಿನಿಂದ ಆಗಮಿಸಿದಂತ ಕರ್ನಾಟಕ 50ರ ಸಂಭ್ರಮದ ಜ್ಯೋತಿ ರಥದಲ್ಲಿ ಆಸೀನವಾಗಿದ್ದ ಶ್ರೀ ಭುವನೇಶ್ವರಿ ಪುತ್ಥಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಅದ್ದೂರಿಯಾಗಿ ಸ್ವಾಗತ ನೀಡಿದ ನಂತರ ಅವರು ಮಾತನಾಡಿದರು. ಮೈಸೂರು ರಾಜ್ಯ ಕರ್ನಾಟಕ ಎಂದು ಮರು ನಾಮಕರಣಗೊಂಡು 50 ವರ್ಷ ಪೂರೈಸಿದ ಹಿನ್ನೆಲೆ ಕರ್ನಾಟಕ 50ರ ಸಂಭ್ರಮದ ರಥ ರಾಜ್ಯಾದ್ಯಾಂತ ಸಂಚಾರ ಮಾಡುತ್ತಿದ್ದು, ಇಂದು ನಮ್ಮೇಲ್ಲರ ಪುಣ್ಯದ ಫಲವಾಗಿ ನಮ್ಮ ಊರಿಗೆ ಬಂದಿದೆ ಎಂದು ತಿಳಿಸಿದರು. ನಾವೆಲ್ಲರು ತಾಯಿ ನಾಡು ಮತ್ತು ಕನ್ನಡ ಭಾಷೆಯ ಬಗ್ಗೆ ಅಭಿಮಾನ ಹೊಂದಿ ಸಂರಕ್ಷಣೆಗೆ ಬದ್ದರಾಗಿರಬೇಕು ಎಂದು ತಿಳಿಸಿದರು.ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬನ್ನೂರು ವೈ.ಎಸ್. ರಾಮಸ್ವಾಮಿ, ಕನ್ನಡ ನಾಡಿನ ಬಗ್ಗೆ ಪ್ರತಿಯೊಬ್ಬರು ಅಭಿಮಾನ ಹೊಂದಿರಬೇಕು. ನಮ್ಮ ಕಲೆ, ಸಂಸ್ಕೃತಿ ಆಚಾರವಿಚಾರಗಳ ಬಗ್ಗೆ ಮುಂದಿನ ತಲೆಮಾರಿನ ಕನ್ನಡಾಂಬೆಯ ಮಕ್ಕಳಿಗೆ ತಿಳಿಸುವಂತ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಬೇಕು ಎಂದು ಕರೆ ನೀಡಿದರು.ನಂತರ ಕರ್ನಾಟಕ 50ರ ಸಂಭ್ರಮದ ಜ್ಯೋತಿ ರಥವನ್ನು ಬಸವೇಶ್ವರ ವೃತ್ತದಿಂದ ಶ್ರೀ ಭುವನೇಶ್ವರಿ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿ ಮೆರವಣಿಗೆಯಲ್ಲಿ ಕೊಂಡೋಯ್ಯಲಾಯಿತು.ಪೂರ್ಣ ಕುಂಭ ಕಲಶ ಹಿಡಿದಿದ್ದ ಮಹಿಳೆಯರು, ಶಾಲಾ ಮಕ್ಕಳು, ಶಿಕ್ಷಕರು , ಆರಕ್ಷಕ ನಿರೀಕ್ಷಕರು ಮೆರವಣಿಗೆಯಲ್ಲಿ ಭಾಗವಹಿಸುವ ಮೂಲಕ ಸಾರ್ವಜನಿಕ ಗಮನ ಸೆಳೆದರು. ಶಾಲಾ ಮಕ್ಕಳ ಬ್ಯಾಂಡ್ ಸೆಟ್ ಮೆರವಣಿಗೆಗೆ ಹುಮ್ಮಸ್ಸು ನೀಡಿತು.ಸಿಆರ್.ಪಿ ಬೋರೇಗೌಡ, ಹಿಂದಿ ಶಿಕ್ಷಕ ಸಂಘದ ತಾಲೂಕು ಅಧ್ಯಕ್ಷ ಸಿದ್ದೇಗೌಡ, ನಾರಾಯಣ್, ಕಾಂತರಾಜ್, ಪರಿಸರ ಎಂಜಿನಿಯರ್ ನಸೀಮ ಅಜುಂ, ವಿನುತಾ, ಸೋಮಪ್ರಭಾ, ಪುಷ್ಪಲತಾ, ಅರುಣ್, ಹರಿಪ್ರಸಾದ್, ಬಿ.ಡಿ.ಪ್ರೇಮ, ಸಮುದಾಯ ಸಂಘಟಕ ಕುಮಾರ್, ಲತಾ, ಹರೀಶ್, ರಾಮಕೃಷ್ಣ, ಸೋಮಶೇಖರ್, ನಾಗೇಂದ್ರ, ಪುಟ್ಸಾಮಿ, ಆಗಾಸ್, ಅಮಿತ್ಕದಂ, ಡೆಪ್ಯೂಟಿ ತಹಸೀಲ್ದಾರ್ ರೂಪಾ, ಅಕ್ಷಯ್, ರಾಜೇಶ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕನ್ನಡ ಪುಟ್ಟಸ್ವಾಮಿ, ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಶಿವಶಂಕರ್ ಮೂರ್ತಿ, ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಅಧ್ಯಕ್ಷ ಪುಟ್ಟರಾಜು, ಕನ್ನಡ ಸಾಹಿತ್ಯ ಪರಿಷತ್ ಉಪಾಧ್ಯಕ್ಷ ಸುಬ್ರಹ್ಮಣ್ಯ, ರಾಮಚಂದ್ರ, ಪುರಸಭಾ ಮುಖ್ಯಾಧಿಕಾರಿ ವಸಂತಕುಮಾರಿ, ಕನ್ನಡ ಸಾಹಿತ್ಯ ಪರಿಷತ್ ಗ್ರಾಮೀಣ ಮಹಿಳಾ ಅಧ್ಯಕ್ಷೆ ಮಂಜುಳಾ ಇದ್ದರು.