ಹಾವೇರಿ: ಕೇಂದ್ರ ಸರ್ಕಾರದ ವಿಶೇಷ ಸಮಗ್ರ ಪರಿಷ್ಕರಣೆ ವಿರೋಧಿಸಿ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿರುವ ಎಸ್‌ಐಆರ್ ವಿರೋಧಿ ಕರ್ನಾಟಕ ಜನಜಾಗೃತಿ ಜಾಥಾ ಗುರುವಾರ ನಗರಕ್ಕೆ ಆಗಮಿಸಿದ್ದು, ನಗರದ ಹುತಾತ್ಮ ಮೈಲಾರ ಮಹದೇವಪ್ಪ ವೃತ್ತದಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿತು. ಈ ವೇಳೆ ಜಿಲ್ಲೆಯ ಪ್ರಗತಿಪರ ಸಂಘಟನೆಗಳ ಒಕ್ಕೂಟದವರು ಎಸ್‌ಐಆರ್ ಪಾರದರ್ಶಕವಾಗಿ ಮತ್ತು ನ್ಯಾಯಸಮ್ಮತವಾಗಿ ನಡೆಯಬೇಕೆಂದು ಆಗ್ರಹಿಸಿದರು.ರಾಜ್ಯದಲ್ಲಿ ಎಸ್‌ಐಆರ್ ಜಾರಿಯನ್ನು ವಿರೋಧಿಸಿ ರಾಜ್ಯದ ಐದು ಸ್ಥಳಗಳಿಂದ ಜನಜಾಗೃತಿ ಜಾಥಾ ಆಯೋಜಿಸಿದ್ದು, ಕಿತ್ತೂರ ಕರ್ನಾಟಕ ಭಾಗದಿಂದ ಹೊರಟಿರುವ ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ ಗುರುವಾರ ನಗರವನ್ನು ತಲುಪಿತು. ಎಸ್‌ಐಆರ್ ವಿರೋಧಿ ಕರ್ನಾಟಕ ಹಾಗೂ ಎದ್ದೇಳು ಕರ್ನಾಟಕ, ಜಾತ್ಯತೀತ ಪಕ್ಷಗಳು ಹಾಗೂ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ನಡೆಯಲಿರುವ ಜಾಥಾವು ಜೂ.13ರಂದು ಆರಂಭವಾಗಿ, ಕಿತ್ತೂರ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಸಂಚರಿಸಿ ಜೂ. 20ರಂದು ಬೆಂಗಳೂರಿನ ಫ್ರೀಡಂ ಪಾರ್ಕನ ಲ್ಲಿ ಬೃಹತ್ ಸಮಾವೇಶಗೊಳ್ಳಲಿದೆ. ಜಿಲ್ಲೆಯಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಬೇಕೆಂದು ಒಕ್ಕೂಟದ ಪದಾಧಿಕಾರಿಗಳು ಮನವಿ ಮಾಡಿದರು.ಎದ್ದೇಳು ಕರ್ನಾಟಕ ತಂಡದ ಸಂಚಾಲಕಿ ಡಾ. ಹಿಸ್ಸಾ ಬೆಲ್ಲ ಮಾತನಾಡಿ, `ದೇಶದೆಲ್ಲೆಡೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಜಾರಿ ಮಾಡುವ ಮೂಲಕ ಲಕ್ಷಾಂತರ ಅರ್ಹ ಮತದಾರರ ಸಾಂವಿಧಾನಿಕವಾದ ಮತದಾನದ ಹಕ್ಕು ಕಸಿದುಕೊಳ್ಳಲಾಗುತ್ತಿದೆ. ಇದೀಗ ಕರ್ನಾಟಕದಲ್ಲಿ ಎಸ್‌ಐಆರ್ ಜಾರಿಯಾಗಲಿದ್ದು, ಅರ್ಹ ಮತದಾರರನ್ನು ಯಾವುದೇ ಕಾರಣಕ್ಕೂ ಕೈಬಿಡಬಾರದು ಎಂದು ಆಗ್ರಹಿಸಿದರು.ಎಸ್‌ಐಆರ್ ಪ್ರಕ್ರಿಯೆಯನ್ನು ಅಸಂವಿಧಾನಿಕ, ಅವೈಜ್ಞಾನಿಕ, ದೋಷಪೂರಿತ ಹಾಗೂ ದುರುದ್ದೇಶಪೂರಿತ ಕ್ರಮವೆಂದು ಆರೋಪಿಸಿದರು. ಮತದಾರರ ಪಟ್ಟಿಯ ಪರಿಷ್ಕರಣೆ ಹೆಸರಿನಲ್ಲಿ ಬಡವರು, ಕಾರ್ಮಿಕರು, ಗ್ರಾಮೀಣ ಜನರು, ಅಲ್ಪಸಂಖ್ಯಾತರು, ಲೈಂಗಿಕ ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗಗಳ ಮತದಾನದ ಹಕ್ಕುಗಳನ್ನು ದುರ್ಬಲಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.ಮತ್ತೋರ್ವ ಮುಖಂಡ ಆರೀಫ್ ಉಲ್ಲಾ ಮಾತನಾಡಿ, ಎಸ್‌ಐಆರ್ ಅಡಿಯಲ್ಲಿ ಅವೈಜ್ಞಾನಿಕ ಲಾಜಿಕಲ್ ಡಿಸ್ಕ್ರೀ ಪ್ಷನ್ ಅಳವಡಿಕೆ ಮಾಡಬಾರದು. ಕರಡು ಮತದಾರರ ಪಟ್ಟಿಯಲ್ಲಿ ಓದುವ ಮಾದರಿ ಜಾರಿಗೆ ತರಬೇಕು. ಕರಡು ಮತದಾರರ ಪಟ್ಟಿ ಗ್ರಾಮಸಭೆ, ಗ್ರಾಪಂ, ತಹಸೀಲ್ದಾರ್ ಕಚೇರಿ, ತಾಲೂಕು ಪಂಚಾಯಿತಿ ಹೀಗೆ ಕಚೇರಿಯಲ್ಲಿ ಪ್ರಕಟಿಸಬೇಕು. ಮತದಾರರ ಪಟ್ಟಿಯಿಂದ ಕೈಬಿಟ್ಟು ಹೋದ ಹೆಸರನ್ನು ಸೇರ್ಪಡೆ ಮಾಡಲು 6 ತಿಂಗಳು ಕಾಲಾವಕಾಶ ನೀಡಬೇಕೆಂದು ಆಗ್ರಹಿಸಿದರು.ನಂತರ ತಹಸೀಲ್ಧಾರ್ ಕಚೇರಿಯಲ್ಲಿ ತಹಸೀಲ್ದಾರರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಈ ವೇಳೆ ಪ್ರಗತಿಪರ ಸಂಘಟನೆ ಒಕ್ಕೂಟದ ಪದಾಧಿಕಾರಿಗಳಾದ ಬಸವರಾಜ ಪೂಜಾರ, ಉಡಚಪ್ಪ ಮಾಳಗಿ, ಬಸವರಾಜ ಎಸ್., ಶೆಟ್ಟಿ ವಿಭೂತಿ, ಸುರೇಶ ಚಲವಾದಿ, ಖಲಂದರ್ ಅಲಿಗೌಡ್ರ, ಹಸೀನಾ ಹೆಡಿಯಾಲ, ಅಕ್ಬರ್‌ಅಲಿ, ಮಹ್ಮದಕಾಸೀಮ್ ರಬ್ಬಾನಿ, ಜಿಲಾನಿ ಮೇದೂರ, ಪ್ರೇಮಲತಾ ಮುದ್ದಿ, ಸುಮಂಗಲಾ ಇಪ್ಪಿಕೊಪ್ಪ, ಐಶ್ವರ್ಯ ಮಡಿವಾಳರ, ಜಿಶಾನ್ ಪಠಾಣ, ಇರ್ಫಾನಖಾನ್ ಪಠಾಣ, ಖಮರ್‌ಅಲಿ ಕಲ್ಯಾಣಿ, ದಾವಲಸಾಬ ಹಿರೇಮುಗದೂರ, ಯಾಸೀರ್ ಇರ್ಷಾದ್, ವಾಜೀಂ ಅಲಿ ತುಮ್ಮಿನಕಟ್ಟಿ, ಇಮ್ತಿಯಾಜ್ ಕಟ್ಟಿಮನಿ, ಮಕ್ಬೂಲ್ ಎಂ.ಕೆ., ಆದಿಲ್, ಚೈತ್ರಾ ಕೊರವರ, ಸುಧಾ ವಡಕಣ್ಣನವರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಹಾವೇರಿಗೆ ಎಸ್‌ಐಆರ್ ವಿರೋಧಿ ಕರ್ನಾಟಕ ಜನಜಾಗೃತಿ ಜಾಥಾ
ಕೇಂದ್ರ ಸರ್ಕಾರದ ವಿಶೇಷ ಸಮಗ್ರ ಪರಿಷ್ಕರಣೆ ವಿರೋಧಿಸಿ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿರುವ ಎಸ್‌ಐಆರ್ ವಿರೋಧಿ ಕರ್ನಾಟಕ ಜನಜಾಗೃತಿ ಜಾಥಾ ಗುರುವಾರ ನಗರಕ್ಕೆ ಆಗಮಿಸಿದ್ದು, ನಗರದ ಹುತಾತ್ಮ ಮೈಲಾರ ಮಹದೇವಪ್ಪ ವೃತ್ತದಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿತು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.