ಸಾರಾಂಶ
ಬೀಜಾಡಿಯ ಸೀತಾಲಕ್ಷ್ಮೀ ಮತ್ತು ಬಿ.ಎಂ.ರಾಮಕೃಷ್ಣ ಹತ್ವಾರ್ ಸರ್ಕಾರಿ ಪ್ರೌಢಶಾಲೆಗೆ ಕರ್ಣಾಟಕ ಬ್ಯಾಂಕ್ 19 ಲಕ್ಷ ರು. ವೆಚ್ಚದಲ್ಲಿ 15 ಆಸನವುಳ್ಳ ಬಸ್ಸನ್ನು ತನ್ನ ಸಿಎಸ್‌ಆರ್ ನಿಧಿಯಿಂದ ಮಂಜೂರುಗೊಳಿಸಿದ್ದು, ಸೋಮವಾರ ಉಡುಪಿಯ ಪ್ರಾದೇಶಿಕ ಕಚೇರಿಯಲ್ಲಿ ಆಡಳಿತ ನಿರ್ದೇಶಕ ಎಂ. ರಾಘವೇಂದ್ರ ಭಟ್ ವಾಹನವನ್ನು ಶಾಲೆಗೆ ಹಸ್ತಾಂತರಿಸಿದರು.
ಕನ್ನಡಪ್ರಭ ವಾರ್ತೆ ಕುಂದಾಪುರ
ಇಲ್ಲಿನ ಬೀಜಾಡಿಯ ಸೀತಾಲಕ್ಷ್ಮೀ ಮತ್ತು ಬಿ.ಎಂ.ರಾಮಕೃಷ್ಣ ಹತ್ವಾರ್ ಸರ್ಕಾರಿ ಪ್ರೌಢಶಾಲೆಗೆ ಕರ್ಣಾಟಕ ಬ್ಯಾಂಕ್ 19 ಲಕ್ಷ ರು. ವೆಚ್ಚದಲ್ಲಿ 15 ಆಸನವುಳ್ಳ ಬಸ್ಸನ್ನು ತನ್ನ ಸಿಎಸ್‌ಆರ್ ನಿಧಿಯಿಂದ ಮಂಜೂರುಗೊಳಿಸಿದ್ದು, ಸೋಮವಾರ ಉಡುಪಿಯ ಪ್ರಾದೇಶಿಕ ಕಚೇರಿಯಲ್ಲಿ ಆಡಳಿತ ನಿರ್ದೇಶಕ ಎಂ. ರಾಘವೇಂದ್ರ ಭಟ್ ವಾಹನವನ್ನು ಶಾಲೆಗೆ ಹಸ್ತಾಂತರಿಸಿದರು.ಬಳಿಕ ಮಾತನಾಡಿದ ಅವರು, ಕರ್ಣಾಟಕ ಬ್ಯಾಂಕ್ ಕರಾವಳಿಯಲ್ಲೇ ಹುಟ್ಟಿ ಬೆಳೆದ ಸಂಸ್ಥೆಯಾಗಿದ್ದು, ಈ ಭಾಗದ ಸರ್ಕಾರಿ ಶಾಲೆಗಳಿಗೆ ಆದ್ಯತೆಯ ಮೇರೆಗೆ ಸಂಸ್ಥೆ ನಿರಂತರವಾಗಿ ನೆರವನ್ನು ನೀಡುತ್ತಾ ಬಂದಿದೆ. ಅದರಂತೆ ಈ ವಾಹನದ ಸದುಪಯೋಗವಾಗಲೆಂದು ಹಾರೈಸಿದರು. ಈ ಸಂದರ್ಭ ಬ್ಯಾಂಕ್ ಮುಖ್ಯ ಶಾಖಾಧಿಕಾರಿ ಚಂದ್ರಶೇಖರ ಮಯ್ಯ, ಮಹಾಪ್ರಬಂಧಕ ರಘುರಾಮ ಎಚ್.ಎಸ್., ಪ್ರಾದೇಶಿಕ ಮುಖ್ಯಸ್ಥರಾದ ರಮೇಶ್ ವೈದ್ಯ, ಡಿ.ಆರ್.ಎಚ್. ಸುಬ್ರಹ್ಮಣ್ಯ ಬಾರ್ವೆ, ಪ್ರೌಢಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀನಿವಾಸ, ಪಂಚಾಯಿತಿ ಅಧ್ಯಕ್ಷ ಪ್ರಕಾಶ್ ಪೂಜಾರಿ, ಹಿತರಕ್ಷಣಾ ವೇದಿಕೆ ಅಧ್ಯಕ್ಷ ಶೇಖರ್ ಛತ್ರಬೆಟ್ಟು, ಪಂಚಾಯಿತಿ ಸದಸ್ಯ ಅನಿಲ್ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ವಿನೋದ ಎಂ. ಕರ್ನಾಟಕ ಬ್ಯಾಂಕ್‌ನ ಉದಾರ ಕೊಡುಗೆಗೆ ಕೃತಜ್ಞತೆ ಸಲ್ಲಿಸಿದರು.;Resize=(128,128))
;Resize=(128,128))