ಕರ್ನಾಟಕ ಸುವರ್ಣ ಸಂಭ್ರಮ: ಇರ್ಪು ಜಲಪಾತ ಕವಿಗೋಷ್ಠಿ

| Published : Mar 27 2024, 01:06 AM IST

ಸಾರಾಂಶ

ಕರ್ನಾಟಕ ಸುವರ್ಣ ಸಂಭ್ರಮದ ಅಂಗವಾಗಿ ಕನ್ನಡ ಸಿರಿ ಸ್ನೇಹ ಬಳಗದ ವತಿಯಿಂದ ಆಯೋಜಿಸಿದ್ದ ಇರ್ಪು ಜಲಪಾತ ಕವಿಗೋಷ್ಠಿ ನಡೆಯಿತು. ಇದರೊಂದಿಗೆ ಇರ್ಪು ಜಲಪಾತ ಸ್ಥಳ ಪುರಾಣ ಅಧ್ಯಯನ ಪ್ರವಾಸವೂ ಏರ್ಪಟ್ಟಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕರ್ನಾಟಕ ಸುವರ್ಣ ಸಂಭ್ರಮದ ಅಂಗವಾಗಿ ಕನ್ನಡ ಸಿರಿ ಸ್ನೇಹ ಬಳಗದ ವತಿಯಿಂದ ಜಲಪಾತ ಕವಿಗೋಷ್ಠಿ ಹಾಗೂ ಇರ್ಪು ಜಲಪಾತ ಸ್ಥಳ ಪುರಾಣ ಅಧ್ಯಯನ ಪ್ರವಾಸ ಕಾರ್ಯಕ್ರಮ ಇರ್ಪು ಜಲಪಾತದಂಚಿನಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿ ಮಾತನಾಡಿದ ಡಾ. ಶಿವಪ್ಪ, ಆಧುನಿಕ ಎಲ್ಲಾ ಯುಗದಲ್ಲೂ ಸಂಸ್ಕಾರ ಹಾಗೂ ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಸ್ತ್ರೀಯರ ಪಾತ್ರ ಮುಖ್ಯವಾಗಿದೆ. ಆಧುನಿಕ ಜಗತ್ತಿನಲ್ಲಿ ಏನೇ ಬದಲಾದರೂ ಸಂಸ್ಕಾರ ಮಾತ್ರ ಬದಲಾಗಬಾರದು. ಪುರಾಣ ಕಾಲದಿಂದಲೂ ನದಿಗಳು ಸೇರಿದಂತೆ ಪ್ರಕೃತಿಯನ್ನು ತಾಯಿ ಸ್ಥಾನದಲ್ಲಿ ಇಟ್ಟು ಪೂಜಿಸಲಾಗಿದೆ. ಇದನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ನಮ್ಮ ಜವಾಬ್ದಾರಿ ಆಗಿದೆ ಎಂದರು.

ಇರ್ಪು ಶ್ರೀರಾಮೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಮದ್ರೀರ ವಿಷ್ಣು ದೇವಾಲಯದ ಇತಿಹಾಸ ಮಂಡಿಸಿದರು. ಮತ್ತೋರ್ವ ಅತಿಥಿ ಕಾಫಿ ಬೆಳೆಗಾರ ಕೆ.ಎನ್‌. ಸಂದೀಪ್ ಹಾಗೂ ಡಾ.ಕಾವೇರಿ ಉದಯ ಮಾತನಾಡಿದರು. ಗಾಯಕರಾದ ಕಬ್ಬಚೀರ ರಶ್ಮಿ, ಆಶಾ, ಮಾಲಮೂರ್ತೀ ಮೀರ, ನಳಿನಿ, ಶನಿವಾರಸಂತೆ ನಾಗರಾಜ್, ಉಮೇಶ್ ಹಾಗೂ ಆವರ್ತಿ ಮಹದೇವಪ್ಪ ಗಾಯನ ಹಾಡಿದರು.

ಸಂಘದ ಅಧ್ಯಕ್ಷ ಲೋಕೇಶ್ ಸಾಗರ್ ಪ್ರಾಸ್ತಾವಿಕ ಭಾಷಣ ಮಾಡಿದರು. ಶಿಕ್ಷಕಿ ಪ್ರೇಮ ನಿರೂಪಿಸಿದರು. ಮಾಲಾಮೂರ್ತಿ ಸ್ವಾಗತಿಸಿದರು. ಕಬ್ಬಚೀರ ರಶ್ಮಿ ಪ್ರಾರ್ಥನೆ ಮಾಡಿದರು.ಮೊದಲು ಓದುಗನಾಗಿರಬೇಕು:

ಕವಿಗಳಿಗೆ, ಸಾಹಿತಿಗಳಾಗಲಿ ತಮ್ಮ ಸಂತ ಬರವಣಿಗೆಯ ಮುಂಚೆ ಉತ್ತಮ ಬರಹಗಾರರ ಕೃತಿಗಳನ್ನು ಓದಿಕೊಂಡಿರಬೇಕು, ಉತ್ತಮ ಬರಹಗಾರನಾಗುವ ಮೊದಲು ಉತ್ತಮ ಓದುಗನಾದರೆ ಬರಹದಲ್ಲಿ ಹೆಜ್ಜೆ ಗುರುತು ಮಾಡಲು ಸಾಧ್ಯ ಎಂದು ಕೊಡವ ಎಳ್ತ್ ಕಾರಡ ಕೂಟದ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ ಹೇಳಿದರು.

ಕರ್ನಾಟಕ ಸುವರ್ಣ ಸಂಭ್ರಮದ ಅಂಗವಾಗಿ ಕನ್ನಡ ಸಿರಿ ಸ್ನೇಹ ಬಳಗದ ವತಿಯಿಂದ ಆಯೋಜಿಸಿದ್ದ ಇರ್ಪು ಜಲಪಾತ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕವಿಗಳಿಗೆ ವಸ್ತು ವಿಷಯವನ್ನು ಅರಿಯುವ ಗ್ರಹಿಸುವ ಮನೊಭಾವನೆ ಇರಬೇಕು. ಕೊಡಗಿನಂತಹ ಸುಂದರ ಪರಿಸರ ಕವಿಮನಸುಗಳಿಗೆ ಮುದ ನೀಡುತ್ತದೆ ಎಂದರು.

ಕವಿಗಳಾದ ಪಿ.ಎಸ್. ಜಾನ್, ಡಾ.ಕಾವೇರಿ, ಪುಷ್ಪ, ಆಶಾ, ರಂಜಿತಾ ಕಾರ್ಯಪ್ಪ ಅತಿಥಿಗಳಾಗಿದ್ದರು. ಹಿರಿಯ ಕವಿ ಶೋಭಾ ಸುಬ್ಬಯ, ಮಾಲಮೂರ್ತಿ, ನ.ಲ. ವಿಜಯಣ್ಣ, ಅಲ್ಲಾರಂಡ ವಿಠಲ ನಂಜಪ್ಪ, ಡಾ.ಎ.ಎಸ್‌. ಪೂವಮ್ಮ, ಪ್ರೇಮ, ಕಬ್ಬಚೀರ ರಶ್ಮಿ, ಪಂದ್ಯಂಡ ರೇಣುಕಾ, ಕೇಕಡ ಇಂದುಮತಿ ರವೀಂದ್ರ, ಗೀತಾಂಜಲಿ, ವತ್ಸಲ ಶ್ರೀಶ, ರಜನಿ, ಮೀರ, ಸುನೀತಾ ವಿಶ್ವನಾಥ್, ಜೀವಿತಾ ತಾಳತ್ ಮನೆ, ಹೇಮಂತ್ ಪಾರೇರ, ವೈಲೇಶ್ ಪಿ.ಎಸ್., ಮನ ಕೆ.ಆರ್., ಕುದುಪುಜೆ ರಂಜಿತ್ ದಾಮೋದರ, ಮುಕ್ಕಾಟಿ ಹರಿಣಿ ಗಿರೀಶ್, ಹೇಮಲತ ಪೂರ್ಣ ಪ್ರಕಾಶ್, ಜನ್ಮಿತ, ಬಾದುಮಂಡ ಬೀನಾ ಕಾಳಯ್ಯ ಶಿಕ್ಷಕ ಮಹೇಂದ್ರ ಸೇರಿದಂತೆ 30ಕ್ಕೂ ಹೆಚ್ಚು ಕವಿಗಳು ಕವನ ವಾಚಿಸಿದರು.

ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯೆ ಮೂರೇರ ರತಿ ಅಚ್ಚಪ್ಪ, ಸೋಮವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ನಿಕಟಪೂರ್ವ ಅಧ್ಯಕ್ಷ ಜವರಪ್ಪ ಹಾಜರಿದ್ದರು. ಸಂಘದ ಅಧ್ಯಕ್ಷ ಲೋಕೇಶ್ ಸಾಗರ್ ಪ್ರಾಸ್ತಾವಿಕ ಮಾತನಾಡಿದರು.