ಸಾರಾಂಶ
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ಕನ್ನಡ ಭಾಷೆ ಅನ್ನೋದು ಕೇವಲ ಸಂವಹನ ಮಾಧ್ಯಮವಲ್ಲ. ಬದಲಾಗಿ ಸಂಸ್ಕೃತಿ, ಪರಂಪರೆ, ಈ ನೆಲದ ಪ್ರತೀಕವಾಗಿದೆ. ನೆಲ ಜಲದ ರಕ್ಷಣೆ ಜೊತೆಗೆ ಭಾಷೆ ಉಳಿದರೆ ಮಾತ್ರ ಸಂಸ್ಕೃತಿ ಉಳಿಯುತ್ತದೆ. ಕೇವಲ ಒಂದು ದಿನದ ರಾಜ್ಯೋತ್ಸವ ಆಚರಣೆಗೆ ಮಾತ್ರ ಸೀಮಿತವಾಗಿರದೆ ನಿರಂತರ ಕನ್ನಡ ಉಳಿಸಿ ಬೆಳೆಸಲು ಮುಂದಾಗಬೇಕು ಎಂದು ಶಾಸಕ ಹಾಗೂ ಕೆಎಸ್‌ಡಿಎಲ್ ಅಧ್ಯಕ್ಷ ಸಿ.ಎಸ್.ನಾಡಗೌಡ(ಅಪ್ಪಾಜಿ) ಹೇಳಿದರು.
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಕನ್ನಡ ಭಾಷೆ ಅನ್ನೋದು ಕೇವಲ ಸಂವಹನ ಮಾಧ್ಯಮವಲ್ಲ. ಬದಲಾಗಿ ಸಂಸ್ಕೃತಿ, ಪರಂಪರೆ, ಈ ನೆಲದ ಪ್ರತೀಕವಾಗಿದೆ. ನೆಲ ಜಲದ ರಕ್ಷಣೆ ಜೊತೆಗೆ ಭಾಷೆ ಉಳಿದರೆ ಮಾತ್ರ ಸಂಸ್ಕೃತಿ ಉಳಿಯುತ್ತದೆ. ಕೇವಲ ಒಂದು ದಿನದ ರಾಜ್ಯೋತ್ಸವ ಆಚರಣೆಗೆ ಮಾತ್ರ ಸೀಮಿತವಾಗಿರದೆ ನಿರಂತರ ಕನ್ನಡ ಉಳಿಸಿ ಬೆಳೆಸಲು ಮುಂದಾಗಬೇಕು ಎಂದು ಶಾಸಕ ಹಾಗೂ ಕೆಎಸ್‌ಡಿಎಲ್ ಅಧ್ಯಕ್ಷ ಸಿ.ಎಸ್.ನಾಡಗೌಡ(ಅಪ್ಪಾಜಿ) ಹೇಳಿದರು.ಪಟ್ಟಣದ ತಾಲೂಕಾಡಳಿತ ಸೌಧ ಕಚೇರಿಯ ಮೈದಾನದಲ್ಲಿ ತಾಲೂಕಾಡಳಿತದಿಂದ ಶನಿವಾರ ಹಮ್ಮಿಕೊಂಡಿದ್ದ 70ನೇ ಕರ್ನಾಟಕ ರಾಜ್ಯೋತ್ಸವದಲ್ಲಿ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕನ್ನಡದ ಏಕೀಕರಣಕ್ಕಾಗಿ ಕುವೆಂಪು, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಕೆ.ಶಿವರಾಮ ಕಾರಂತ, ಎ.ಎನ್. ಕೃಷ್ಣರಾವ್, ಬಿ.ಎಂ.ಶ್ರೀಕಂಠಯ್ಯ ಅವರಂತಹ ಅನೇಕ ಮಹಾನ್ ವ್ಯಕ್ತಿಗಳು ಸೇರಿ ಹಲವಾರು ಜನ ಕರ್ನಾಟಕ ಏಕಿಕರಣಕ್ಕಾಗಿ ಜೀವವನ್ನೇ ಮುಡಿಪಾಗಿಟ್ಟು ಹೋರಾಡಿ ಚದುರಿಹೋಗಿ ಎಲ್ಲ ಪ್ರಾಂತ್ಯಗಳನ್ನು ಒಗ್ಗೂಡಿಸಿ ಅಖಂಡ ಕರ್ನಾಟಕವನ್ನಾಗಿ ಮಾಡಿದ್ದಾರೆ. ಆದರೇ, ಇತ್ತಿಚಿಗೆ ಕರ್ನಾಟಕ ಒಡೆದು ಇಬ್ಬಾಗ ಮಾಡಿ ಆ ಕರ್ನಾಟಕ ಈ ಕರ್ನಾಟಕ ಮಾಡಬೇಕು ಎನ್ನುವ ಕೂಗು ಕೇಳಿ ಬರುತ್ತಿದೆ. ಅಂತಹ ಹೇಳಿಕೆಗಳನ್ನು ನಾನು ಬಲವಾಗಿ ಖಂಡಿಸುತ್ತೇನೆ. ನವೆಂಬರ್ 1, 1956ರಂದು, ಅಂದಿನ ಮೈಸೂರು ರಾಜ್ಯದ ವಿಲೀನದಿಂದ ಕರ್ನಾಟಕ ರಾಜ್ಯದ ಉದಯವಾಯಿತು. ಮುಂದೆ 1973ರ ನ.1ರಂದು ಮುಖ್ಯಮಂತ್ರಿಯಾಗಿದ್ದ ದೇವರಾಜ್ ಅರಸು ನೇತೃತ್ವದಲ್ಲಿ ರಾಜ್ಯದ ಮೈಸೂರು ಪ್ರಾಂತ್ಯ ಎಂಬ ಹೆಸರನ್ನು ಕರ್ನಾಟಕ ಎಂದು ಬದಲಾಯಿಸಲಾಯಿತು ಎಂದು ತಿಳಿಸಿದರು.ಇಂದು ರಾಜಕೀಯವೂ ಕಲುಷಿತಗೊಂಡಿದೆ. ಕರ್ನಾಟಕ ಉಳಿಯಬೇಕಾದರೇ ನಿರಾವರಿ, ಸೇರಿ ಇತರೇ ಮೂಲಭೂತ ಸೌಲಭ್ಯಗಳನ್ನು ಅನುಷ್ಠಾನಗೊಳಿಸಬೇಕಾಗಿದೆ. ಇದೀಗ ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಿಸುವ ವಿಚಾರಕ್ಕೆ ನಮ್ಮ ಸಂಸದರು ಕೇಂದ್ರದಲ್ಲಿ ಧ್ವನಿ ಎತ್ತದೆ ಇರುವುದು ಕೂಡ ಒಂದು ಅಸಮಾನತೆ ಎದ್ದು ಕಾಣುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉತ್ತಮ ಆಡಳಿತ ನೀಡುವಲ್ಲಿ ಯಶಸ್ವಿಯಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರು ನಮ್ಮ ರಾಜ್ಯಕ್ಕೆ ಸಹಕಾರ ಕೋಡುತ್ತಿಲ್ಲ. ಇದರಿಂದ ಸರ್ವಶಿಕ್ಷಣ ಅಭಿಯಾನ ಸೇರಿ ಮಹತ್ವದ ಯೋಜನೆಗಳು ಸ್ಥಗಿತಗೊಳಿಸಲಾಗಿದೆ ಎಂದರು.ತಾಲೂಕು ಅಕ್ಷರದಾಸೋಹದ ಸಹಾಯ ನಿರ್ದೇಶಕ ಎಂ.ಎಂ.ಬೆಳಗಲ್ಲ ಮಾತನಾಡಿ, ಕರುನಾಡು, ಕನ್ನಡಾಂಬೆಯ ನಾಡು, ಶ್ರೀಗಂಧದ ಬೀಡು ಎಂದೆಲ್ಲ ಕರೆಯಲ್ಪಡುವ ನಮ್ಮ ಕರ್ನಾಟಕ, ಸುಂದರ ಕೃಷ್ಣಾ, ಕಾವೇರಿ ಮತ್ತು ತುಂಗಭದ್ರಾ ನದಿಗಳ ನಾಡು. ಸಂತರು, ದಾಸರು, ಶಿವಶರಣರು ಮತ್ತು ಮಹಾಕವಿಗಳಿಂದ ಕಂಗೊಳಿಸುವ ಈ ನಾಡಿನಲ್ಲಿ ಹುಟ್ಟಿರುವುದು ನಾವೆಲ್ಲರೂ ಅದೃಷ್ಟವಂತರು ಎಂದು ಸ್ಮರಿಸಿದರು.ಮೆರವಣಿಗೆಯಲ್ಲಿ ಭಾಗವಹಿಸಿದ್ದ ಸ್ಥಬ್ದ ಚಿತ್ರಗಳಿಗೆ ಬಹುಮಾನ ನೀಡಲಾಯಿತು. ಒನಕೆ ಓಬವ್ವ ಸ್ಥಬ್ಧ ಚಿತ್ರಕ್ಕೆ ಪಟ್ಟಣದ ಚಿನ್ಮಯ ಜೆಸಿ ಶಾಲೆ ಪ್ರಥಮ ಸ್ಥಾನ, ಅಕ್ಕ ಮಹಾದೇವಿ ಸ್ಥಬ್ಧ ಚಿತ್ರಕ್ಕೆ ಹುಲ್ಲೂರ ಎಸ್.ಎನ್.ಡಿ ಶಾಲೆಯ ದ್ವೀತಿಯ ಸ್ಥಾನ, ಪುರಂದರದಾಸರ ಸ್ಥಬ್ಧ ಚಿತ್ರಕ್ಕೆ ಕೆಜಿಎಸ್ ನಂ 2 ಶಾಲೆಯ ತೃತೀಯ ಸ್ಥಾನ ಪಡೆದವು. ತಹಸೀಲ್ದಾರ್ ಕೀರ್ತಿ ಚಾಲಕ ರಾಷ್ಟ್ರಧ್ವಜಾರೋಹಣ ನೆರವರಿಸಿದರು, ಸಿಪಿಐ ಮಹಮ್ಮದ ಫಸಿವುದ್ದಿನ, ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಅಧಿಕಾರಿ ಅರವಿಂದ ಹೂಗಾರ, ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ, ಪುರಸಭೆ ಅಧ್ಯಕ್ಷ ಮೈಬೂಬ ಗೊಳಸಂಗಿ, ಬಿಇಒ ಎಸ್.ಬಿ.ಸಾವಳಗಿ, ತಾಪಂ ಖೂಬಾಶಿಂಗ್ ಜಾಧವ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಪುರಸಭೆ ಉಪಾಧ್ಯಕ್ಷೆ ಪ್ರೀತಿ ದೇಗಿನಾಳ, ಸಿಡಿಪಿಒ ಶಿವಮೂರ್ತಿ ಕುಂಬಾರ, ಪಿಡಬ್ಲೂಡಿ ಎಇಇ ಎ.ಬಿ.ರಡ್ಡಿ, ತಾಲೂಕು ಆರೋಗ್ಯಾಧಿಕಾರಿ ಡಾ.ಸತೀಶ ತಿವಾರಿ ಮುಂತಾದವರು ಇದ್ದರು.
;Resize=(128,128))
;Resize=(128,128))