ಕರ್ನಾಟಕ ಒಲಿಂಪಿಕ್ಸ್: ಅರ್ಚರಿಯಲ್ಲಿ ಬೆಂಗಳೂರು ಜಿಲ್ಲೆಯ ಮೇಲುಗೈ

| Published : Jan 20 2025, 01:31 AM IST

ಕರ್ನಾಟಕ ಒಲಿಂಪಿಕ್ಸ್: ಅರ್ಚರಿಯಲ್ಲಿ ಬೆಂಗಳೂರು ಜಿಲ್ಲೆಯ ಮೇಲುಗೈ
Share this Article
  • FB
  • TW
  • Linkdin
  • Email

ಸಾರಾಂಶ

ಮಣಿಪಾಲ್ ಜ್ಯೂನಿಯರ್‌ ಕಾಲೇಜಿನ ಮೈದಾನದಲ್ಲಿ ಕರ್ನಾಟಕ ಕ್ರೀಡಾಕೂಟ - 2025ರ ಅರ್ಚರಿಯಲ್ಲಿ 2ನೇ ದಿನ ಭಾನುವಾರವೂ ಬೆಂಗಳೂರಿನ ಬಿಲ್ಗಾರರೇ ಮೇಲುಗೈ ಸಾಧಿಸಿದ್ದಾರೆ. ಮೊದಲ ದಿನ ಶನಿವಾರ ನಡೆದ, ಇಂಡಿಯನ್, ರಿಕರ್ವ್ ಮತ್ತು ಕಂಪೌಂಡ್‌ ರೌಂಡ್‌ಗಳಲ್ಲಿ ಬೆಂಗಳೂರಿನ ಆಟಗಾರರು ಹೆಚ್ಚಿನ ಪದಕಗಳನ್ನು ಬಾಚಿಕೊಂಡಿದ್ದರು.

ಕನ್ನಡಪ್ರಭ ವಾರ್ತೆ ಮಣಿಪಾಲ

ಇಲ್ಲಿನ ಮಣಿಪಾಲ್ ಜ್ಯೂನಿಯರ್‌ ಕಾಲೇಜಿನ ಮೈದಾನದಲ್ಲಿ ಕರ್ನಾಟಕ ಕ್ರೀಡಾಕೂಟ - 2025ರ ಅರ್ಚರಿಯಲ್ಲಿ 2ನೇ ದಿನ ಭಾನುವಾರವೂ ಬೆಂಗಳೂರಿನ ಬಿಲ್ಗಾರರೇ ಮೇಲುಗೈ ಸಾಧಿಸಿದ್ದಾರೆ. ಮೊದಲ ದಿನ ಶನಿವಾರ ನಡೆದ, ಇಂಡಿಯನ್, ರಿಕರ್ವ್ ಮತ್ತು ಕಂಪೌಂಡ್‌ ರೌಂಡ್‌ಗಳಲ್ಲಿ ಬೆಂಗಳೂರಿನ ಆಟಗಾರರು ಹೆಚ್ಚಿನ ಪದಕಗಳನ್ನು ಬಾಚಿಕೊಂಡಿದ್ದರು.

ಭಾನುವಾರ ನಡೆದ ಎಲಿಮಿನೇಶನ್‌ ರೌಂಡ್‌ನಲ್ಲಿ ಬೆಂಗಳೂರು ಜಿಲ್ಲೆಯ ಕ್ರೀಡಾಪಟುಗಳು 4 ಚಿನ್ನ, 1 ಬೆಳ್ಳಿ, 4 ಕಂಚಿನ ಪಕದಗಳನ್ನು ಗೆದ್ದುಕೊಂಡು ಸರ್ವಾಂಗೀಣ ಶ್ರೇಷ್ಟ ಪ್ರದರ್ಶನವನ್ನು ನೀಡಿದರು.

ಫಲಿತಾಂಶ ಹೀಗಿದೆ:

ಪುರುಷರ ವಿಭಾಗ - ಕಂಪೌಂಡ್ ಎಲಿಮಿನೇಶನ್ ರೌಂಡ್: ಚಿನ್ನ ಪ್ರಜ್ವಲ್ ಸೂರ್ಯ (ಬೆಂಗಳೂರು), ಬೆಳ್ಳಿ - ಮನು ಕೆ. (ಚಾಮರಾಜನಗರ), ಕಂಚು - ರಾಜೇಶ್‌ ಕುಮಾರ್‌ ಕಂಡುಕುರಿ (ಬೆಂಗಳೂರು).ರಿಕರ್ವ್ ಎಲಿಮಿನೇಶನ್‌ ರೌಂಡ್: ಚಿನ್ನ - ಭರತ್ ದೀಕ್ಷಿತ್ (ಬೆಂಗಳೂರು), ಬೆಳ್ಳಿ - ಶಿವಕುಮಾರ್ (ಯಾದಗಿರಿ), ಕಂಚು - ಎಂ.ಸುಭಾಷ್‌ (ಬೆಂಗಳೂರು).ಇಂಡಿಯನ್ ಎಲಿಮಿನೇಶನ್‌ ರೌಂಡ್: ಚಿನ್ನ - ಮಲ್ಲಿಕಾರ್ಜುನ (ಯಾದಗಿರಿ), ಬೆಳ್ಳಿ - ರಘು (ಯಾದಗಿರಿ), ಕಂಚು - ಅಮಿತ್‌ ಜಯಂತ್‌ ಗೌಡ (ಉತ್ತರಕನ್ನಡ).ಮಹಿಳೆಯರ ವಿಭಾಗ- ಇಂಡಿಯನ್ ಎಲಿಮಿನೇಶನ್‌ ರೌಂಡ್: ಚಿನ್ನ - ಶೋಭಾ ಎಲ್‌.ಡಿ. (ಬೆಂಗಳೂರು), ಬೆಳ್ಳಿ - ದೇವಮ್ಮ (ಯಾದಗಿರಿ), ಕಂಚು - ಪ್ರೇಮಾ ಯು. (ಬೆಂಗಳೂರು).ಕಂಪೌಂಡ್ ಎಲಿಮಿನೇಶನ್ ರೌಂಡ್: ಚಿನ್ನ - ಅಶ್ಮಿತಾ ಕೇಶವ್ (ಬೆಂಗಳೂರು), ಬೆಳ್ಳಿ - ಸಿಂಚನ ಜಿ. (ಬೆಂಗಳೂರು), ಕಂಚು - ಚೈತ್ರಾ ಟಿ. (ಬೆಂಗಳೂರು).