ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿ: ಆರ್.ವಿ. ವಿಶ್ವನಾಥ್

| Published : Mar 26 2024, 01:07 AM IST

ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿ: ಆರ್.ವಿ. ವಿಶ್ವನಾಥ್
Share this Article
  • FB
  • TW
  • Linkdin
  • Email

ಸಾರಾಂಶ

ಪರೀಕ್ಷೆಯು ವಿದ್ಯಾರ್ಥಿಗಳ ಸತತ ವಿದ್ಯಾಭ್ಯಾಸದ ಫಲವನ್ನು ಪರೀಕ್ಷಿಸುವ ಒಂದು ಪ್ರಮುಖ ಘಟ್ಟವಾಗಿದ್ದು ಇದು ವಿದ್ಯಾರ್ಥಿಗಳ ದಿಕ್ಕನ್ನೇ ಬದಲಾಯಿಸುವ ಅವರ ಜೀವನವನ್ನು ಉಜ್ವಲ ಗೊಳಿಸುವ ಮೊದಲ ಹಂತದ ಪರೀಕ್ಷೆ. ಇಂತಹ ಪರೀಕ್ಷೆಯಲ್ಲಿ ತಾವೆಲ್ಲರೂ ಉತ್ತಮ ಅಂಕಗಳನ್ನು ಪಡೆಯುವ ಮೂಲಕ ಉತ್ತಮ ಯಶಸ್ಸನ್ನು ಕಾಣಬೇಕು

ಕನ್ನಡಪ್ರಭ ವಾರ್ತೆ ರಾವಂದೂರು

ವಿದ್ಯಾರ್ಥಿಗಳ ಭವಿಷ್ಯವು ಉಜ್ವಲವಾಗಲಿ ಎಂದು ಕೆಪಿಎಸ್ ಶಾಲೆಗಳ ಉಪಾಧ್ಯಕ್ಷ ಆರ್.ವಿ. ವಿಶ್ವನಾಥ್ ತಿಳಿಸಿದರು.

ಪಿರಿಯಾಪಟ್ಟಣ ತಾಲೂಕು ರಾವಂದೂರು ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಶಿವು ಸೈನಿಕ ಅಕಾಡೆಮಿ ವತಿಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಸೋಮವಾರ ಗುಲಾಬಿ ಹೂ ಹಾಗೂ ಪೆನ್ ನೀಡುವ ಮೂಲಕ ಆ ಮಕ್ಕಳನ್ನು ಸ್ವಾಗತಿಸಿದ ನಂತರ ಮಾತನಾಡಿ, ಪರೀಕ್ಷೆಯು ವಿದ್ಯಾರ್ಥಿಗಳ ಸತತ ವಿದ್ಯಾಭ್ಯಾಸದ ಫಲವನ್ನು ಪರೀಕ್ಷಿಸುವ ಒಂದು ಪ್ರಮುಖ ಘಟ್ಟವಾಗಿದ್ದು ಇದು ವಿದ್ಯಾರ್ಥಿಗಳ ದಿಕ್ಕನ್ನೇ ಬದಲಾಯಿಸುವ ಅವರ ಜೀವನವನ್ನು ಉಜ್ವಲ ಗೊಳಿಸುವ ಮೊದಲ ಹಂತದ ಪರೀಕ್ಷೆ. ಇಂತಹ ಪರೀಕ್ಷೆಯಲ್ಲಿ ತಾವೆಲ್ಲರೂ ಉತ್ತಮ ಅಂಕಗಳನ್ನು ಪಡೆಯುವ ಮೂಲಕ ಉತ್ತಮ ಯಶಸ್ಸನ್ನು ಕಾಣಬೇಕು ಎಂದರು.

ಈ ವೇಳೆ ಶಾಲೆಗೆ ಆಗಮಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಹಾಗೂ ಗುಲಾಬಿ ಹೂ ನೀಡಿ ತಮ್ಮ ಭವಿಷ್ಯ ಉಜ್ವಲವಾಗಲಿ ಎಂದು ಶಿವ ಸೈನಿಕ ಅಕಾಡೆಮಿಯ ಸಂಸ್ಥಾಪಕ ಶಿವು ಶುಭ ಹಾರೈಸಿದರು.

ಈ ವೇಳೆ ಪರೀಕ್ಷಾ ಕೇಂದ್ರದ ಮೇಲ್ವಿಚಾರಕ ರಾಜಯ್ಯ, ಕೆಪಿಎಸ್ ಶಾಲೆಗಳ ಅಭಿವೃದ್ಧಿ ಸಮಿತಿ ಸದಸ್ಯ ಜಲೇಂದ್ರ, ಶಿವ ಸೈನಿಕ ಅಕಾಡೆಮಿಯ ಸದಸ್ಯ ರಾಜು, ಸಮನ್ ಕೋಟಿ ಮೊದಲಾದವರು ಇದ್ದರು.