ಕರ್ನಾಟಕ ರೈತ ಸಂಘದ ಏಕೀಕರಣ ಸಮಿತಿ ತಾಲೂಕು ಘಟಕ ಅಸ್ತಿತ್ವಕ್ಕೆ

| Published : Feb 18 2025, 12:31 AM IST

ಕರ್ನಾಟಕ ರೈತ ಸಂಘದ ಏಕೀಕರಣ ಸಮಿತಿ ತಾಲೂಕು ಘಟಕ ಅಸ್ತಿತ್ವಕ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಧಾನ ಕಾರ್ಯದರ್ಶಿಯಾಗಿ ಕೆ.ಪಿ.ದೊಡ್ಡಿ ಪುಟ್ಟಸ್ವಾಮಿ, ಖಜಾಂಚಿಯಾಗಿ ಕುಂಟನಹಳ್ಳಿ ಮರಿಲಿಂಗಯ್ಯ, ಉಪಾಧ್ಯಕ್ಷರಾಗಿ ರಾಮಣ್ಣ, ನಂಜುಂಡೇಗೌಡ, ಖ್ಯಾತಘಟ್ಟ ಅಂದಾನಿ. ವೃತ್ತ ಘಟಕದ ಅಧ್ಯಕ್ಷರಾಗಿ ಗೂಳೂರು ಲಿಂಗರಾಜು, ಪಣ್ಣೆ ದೊಡ್ಡಿ ವೆಂಕಟೇಶ, ಪದಾಧಿಕಾರಿಗಳಾಗಿ ಬೆಸಗರಹಳ್ಳಿ ವೆಂಕಟೇಶ, ಸಿದ್ದೇಗೌಡ, ಮಲ್ಲೇಶ, ಮರಳಿಗ ಶಿವರಾಜು ಆಯ್ಕೆಯಾಗಿದ್ದಾರೆ.

ಅಧ್ಯಕ್ಷರಾಗಿ ಪ್ರಭುಲಿಂಗ, ಗೌರವಾಧ್ಯಕ್ಷರಾಗಿ ವಳಗೆರೆಹಳ್ಳಿ ಶ್ರೀನಿವಾಸ್ ಆಯ್ಕೆ

ಕನ್ನಡಪ್ರಭ ವಾರ್ತೆ ಮದ್ದೂರು ಕರ್ನಾಟಕ ರೈತ ಸಂಘದ ಏಕೀಕರಣ ಸಮಿತಿ ತಾಲೂಕು ಘಟಕವನ್ನು ನೂತನವಾಗಿ ಅಸ್ತಿತ್ವಕ್ಕೆ ತರಲಾಗಿದ್ದು, ಸಮಿತಿ ಅಧ್ಯಕ್ಷರಾಗಿ ಪ್ರಭುಲಿಂಗ ಮತ್ತು ಗೌರವಾಧ್ಯಕ್ಷರಾಗಿ ವಳಗೆರೆಹಳ್ಳಿ ಶ್ರೀನಿವಾಸ್ ಆಯ್ಕೆಯಾಗಿದ್ದಾರೆ.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರೈತ ಸಂಘದ ಏಕೀಕರಣ ಸಮಿತಿಯ ವರಿಷ್ಠ ಪಚ್ಚೆ ನಂಜುಂಡಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಮಿತಿ ಸಭೆಯಲ್ಲಿ ತಾಲೂಕು ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಪ್ರಧಾನ ಕಾರ್ಯದರ್ಶಿಯಾಗಿ ಕೆ.ಪಿ.ದೊಡ್ಡಿ ಪುಟ್ಟಸ್ವಾಮಿ, ಖಜಾಂಚಿಯಾಗಿ ಕುಂಟನಹಳ್ಳಿ ಮರಿಲಿಂಗಯ್ಯ, ಉಪಾಧ್ಯಕ್ಷರಾಗಿ ರಾಮಣ್ಣ, ನಂಜುಂಡೇಗೌಡ, ಖ್ಯಾತಘಟ್ಟ ಅಂದಾನಿ. ವೃತ್ತ ಘಟಕದ ಅಧ್ಯಕ್ಷರಾಗಿ ಗೂಳೂರು ಲಿಂಗರಾಜು, ಪಣ್ಣೆ ದೊಡ್ಡಿ ವೆಂಕಟೇಶ, ಪದಾಧಿಕಾರಿಗಳಾಗಿ ಬೆಸಗರಹಳ್ಳಿ ವೆಂಕಟೇಶ, ಸಿದ್ದೇಗೌಡ, ಮಲ್ಲೇಶ, ಮರಳಿಗ ಶಿವರಾಜು ಆಯ್ಕೆಯಾಗಿದ್ದಾರೆ.

ನಂತರ ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದ ಪಚ್ಚೆ ನಂಜಂಡಸ್ವಾಮಿ ಮಾತನಾಡಿ, ರೈತ ಸಂಘದ ಏಕೀಕರಣ ಸಮಿತಿ ಮುಂದಿನ ದಿನಗಳಲ್ಲಿ ಹೊಸ ಶಕ್ತಿಯಾಗಿ ಹೊರಹೊಮ್ಮುವ ಮೂಲಕ ರೈತರ ಸಮಸ್ಯೆಗಳ ಪರಿಹಾರದ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳಿರುವ ಸರ್ಕಾರವನ್ನು ಬಡಿದೆಬ್ಬಿಸುವ ಕೆಲಸಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದರು.

ಮಂಡ್ಯ ಜಿಲ್ಲೆಯ 7 ತಾಲೂಕುಗಳಲ್ಲಿ ರೈತ ಸಂಘದ ಏಕೀಕರಣ ಸಮಿತಿ ಅಸ್ತಿತ್ವಕ್ಕೆ ತಂದು ಬಲಗೊಳಿಸುವ ಪ್ರಯತ್ನ ನಡೆಯುತ್ತಿದೆ. ಸಮಾನ ಮನಸ್ಕರು, ಯುವ ರೈತ ಸೇನಾನಿಗಳು ಹಾಗೂ ಪ್ರಗತಿಪರ ಸಂಘಟನೆಗಳು ಏಕೀಕರಣ ಸಮಿತಿಗೆ ಬಲವಾಗಿ ನಿಂತು ಹೋರಾಟಕ್ಕೆ ಸಜ್ಜಾಗಬೇಕು ಎಂದು ಕರೆ ನೀಡಿದರು.

ಸಭೆಯಲ್ಲಿ ರೈತ ಮುಖಂಡರಾದ ಯರಗನಹಳ್ಳಿ ರಾಮಕೃಷ್ಣಯ್ಯ, ಅಣ್ಣೂರು ಮಹೇಂದ್ರ, ಕೀಳಘಟ್ಟ ನಂಜುಂಡಯ್ಯ, ಕುದರಗುಂಡಿ ನಾಗರಾಜು, ಸೋಶಿ ಪ್ರಕಾಶ್ ಮತ್ತಿತರರು ಇದ್ದರು