ಬೀದರ್‌ ಜಿಲ್ಲೆಯ ಇಬ್ಬರು ಮಹಾನ್‌ ಕಲಾ ಸಂತರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗಿದ್ದು, ಕಲಾ ಸಂತ ಚ.ಭೀ. ಸೋಮಶೆಟ್ಟಿ ಹಾಗೂ ಇನ್ನೋರ್ವರು ವಿಶ್ವ ವಿಖ್ಯಾತ ಬಿದ್ರಿ ಕಲೆಯ ಕರಕುಶಲಕರ್ಮಿ ಶಾಂತಾಬಾಯಿ ಮೋಹನರಾವ್‌ ಕಾಂಬ್ಳೆ ಅವರಿಗೆ ಸರ್ಕಾರದಿಂದ ರಾಜ್ಯೋತ್ಸವದ ಪ್ರಶಸ್ತಿ ಘೋಷಣೆಯಾಗಿದೆ. ಇಬ್ಬರೂ ಅಪ್ರತಿಮ ಸಾಧಕರು ಚ.ಭೀ. ಸೋಮಶೆಟ್ಟಿ ಅವರು ಚಿತ್ರಕಲೆ ಅದರಲ್ಲೂ ವಿಶ್ವಗುರು ಬಸವಣ್ಣನವರ ಚಿತ್ರಗಳನ್ನು

ಕನ್ನಡಪ್ರಭ ವಾರ್ತೆ ಬೀದರ್‌

ಬೀದರ್‌ ಜಿಲ್ಲೆಯ ಇಬ್ಬರು ಮಹಾನ್‌ ಕಲಾ ಸಂತರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗಿದ್ದು, ಕಲಾ ಸಂತ ಚ.ಭೀ. ಸೋಮಶೆಟ್ಟಿ ಹಾಗೂ ಇನ್ನೋರ್ವರು ವಿಶ್ವ ವಿಖ್ಯಾತ ಬಿದ್ರಿ ಕಲೆಯ ಕರಕುಶಲಕರ್ಮಿ ಶಾಂತಾಬಾಯಿ ಮೋಹನರಾವ್‌ ಕಾಂಬ್ಳೆ ಅವರಿಗೆ ಸರ್ಕಾರದಿಂದ ರಾಜ್ಯೋತ್ಸವದ ಪ್ರಶಸ್ತಿ ಘೋಷಣೆಯಾಗಿದೆ. ಇಬ್ಬರೂ ಅಪ್ರತಿಮ ಸಾಧಕರು ಚ.ಭೀ. ಸೋಮಶೆಟ್ಟಿ ಅವರು ಚಿತ್ರಕಲೆ ಅದರಲ್ಲೂ ವಿಶ್ವಗುರು ಬಸವಣ್ಣನವರ ಚಿತ್ರಗಳನ್ನು ತೈಲವರ್ಣದಲ್ಲಿ ಬಿಡಿಸಿ ಗಮನ ಸೆಳೆದು ಜೀವನ ಮೌಲ್ಯ ಹೆಚ್ಚಿಸಿಕೊಂಡಿದ್ದರೆ, ಮತ್ತೋರ್ವರಾದ ಶಾಂತಾಬಾಯಿ ವಿಶ್ವ ವಿಖ್ಯಾತ ಬಿದ್ರಿ ಕಲೆಯನ್ನು ಜೀವಂತವಾಗಿರಿಸಲು ಜೀವನವನ್ನೇ ಸವೆಸಿದವರಾಗಿದ್ದಾರೆ.

ಕಲಾ ಸಂತ ಚ.ಭೀ. ಸೋಮಶೆಟ್ಟಿ: ನಾಡಿನ ಹಿರಿಯ ಚಿತ್ರಕಲಾವಿದ, ಕುಂಚದ ಮೂಲಕ ಬಸವಾದಿ ಶರಣರ ಜೀವನ ಚರಿತ್ರೆಯನ್ನು ಸಮಾಜಕ್ಕೆ ಸಮರ್ಪಿಸಿದ ಕಲಾ ಕಲಿ, ನಿವೃತ್ತ ಚಿತ್ರಕಲಾ ಶಿಕ್ಷಕ ಶ್ರೀ ಚಂದ್ರಶೇಖರ ಭೀಮಣಪ್ಪ ಸೋಮಶೆಟ್ಟಿ ಅವರಿಗೆ ಕರ್ನಾಟಕ ಸರ್ಕಾರದ ಪ್ರತಿಷ್ಠಿತ ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’ ಘೋಷಣೆಯಾಗಿದೆ.

ತಮ್ಮ ಇಳಿ ವಯಸ್ಸಿನಲ್ಲೂ ಕಲಾ ಸೇವೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರುವ ಇವರ ಈ ಸಾಧನೆ ಇಡೀ ಕಲ್ಯಾಣ ಕರ್ನಾಟಕ ಭಾಗಕ್ಕೆ ಕೀರ್ತಿ ತಂದಿದೆ.

ಬೀದರ್‌ನ ಬಸವನಗರದಲ್ಲಿರುವ ತಮ್ಮ ಸ್ವಂತ ಮನೆಯಲ್ಲಿಯೇ ಸುಮಾರು 35 ಲಕ್ಷ ರುಪಾಯಿಗಳಿಗೂ ಅಧಿಕ ಸ್ವಂತ ಖರ್ಚಿನಲ್ಲಿ ''''''''''''''''ಸಿ.ಬಿ. ಸೋಮಶೆಟ್ಟಿ ಆರ್ಟ್‌ ಗ್ಯಾಲರಿ'''''''''''''''' (ಚಿತ್ರಾಲಯ) ಸ್ಥಾಪಿಸಿರುವ ಇವರು, ಜಲವರ್ಣದಲ್ಲಿ ವಿಶ್ವಗುರು ಬಸವಣ್ಣನವರ ಹುಟ್ಟಿನಿಂದ ಲಿಂಗೈಕ್ಯದವರೆಗಿನ 124 ಪ್ರಮುಖ ಘಟನಾವಳಿಗಳನ್ನು ಅತ್ಯಂತ ಆಕರ್ಷಕವಾಗಿ ಕಲಾಕೃತಿಗಳಲ್ಲಿ ಮೂಡಿಸಿದ್ದಾರೆ.

ಕೇವಲ ಚಿತ್ರರಚನೆ ಮಾತ್ರವಲ್ಲದೆ, ಬಸವಣ್ಣನವರ ಸಮಗ್ರ ಜೀವನ ಚರಿತ್ರೆಯನ್ನು ಸಾರುವ ''''''''''''''''ಶ್ರೀ ಗುರುಬಸವ ಚಿತ್ರಚರಿತ'''''''''''''''' ಮಹಾಗ್ರಂಥ ಹಾಗೂ 12ನೇ ಶತಮಾನದ 770 ಅಮರಗಣಂಗಳ ಕಾಯಕ ಚಿತ್ರದರ್ಶನ ಕೃತಿಗಳನ್ನು ರಚಿಸುವ ಮೂಲಕ ಸಾಹಿತ್ಯ ಮತ್ತು ಕಲಾ ಲೋಕಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ.

ಬಾಲ್ಯದಿಂದಲೂ ಚಿತ್ರಕಲೆಯಲ್ಲಿ ಅಸಾಧಾರಣ ಪ್ರತಿಭೆ ತೋರಿರುವ ಇವರು, ರಾಜ್ಯಮಟ್ಟದಲ್ಲಿ ದ್ವಿತೀಯ ರ‍್ಯಾಂಕ್‌ ಪಡೆದು ಡಿಪ್ಲೋಮಾ ಮುಗಿಸಿ, ಸುಮಾರು 33 ವರ್ಷಗಳ ಕಾಲ ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಕರ್ನಾಟಕ ಲಲಿತಕಲಾ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಇದುವರೆಗೆ ಸುಮಾರು 40ಕ್ಕೂ ಹೆಚ್ಚು ಪ್ರತಿಷ್ಠಿತ ಗೌರವ ಸನ್ಮಾನಗಳಿಗೆ ಭಾಜನರಾಗಿರುವ ಇವರ ಕಲಾ ಸೇವೆಯನ್ನು ಪರಿಗಣಿಸಿ ರಾಜ್ಯ ಸರ್ಕಾರವು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಕಲಾಪ್ರೇಮಿಗಳಲ್ಲಿ ಹರ್ಷ ತಂದಿದೆ. ಇವರ ಈ ಸಾಧನೆಗೆ ನಾಡಿನ ವಿವಿಧ ಮಠಾಧೀಶರು, ಗಣ್ಯರು ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹರ್ಷ ವ್ಯಕ್ತಪಡಿಸಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಮೂರು ತಲೆಮಾರಿನ ಕಾಯಕಕ್ಕೆ ಸಿಗ್ತು ಪ್ರಶಸ್ತಿ:

ಬೀದರ್‌: ವಿಶ್ವ ಪ್ರಸಿದ್ಧ ಬಿದ್ರಿ ಕಲೆಯನ್ನು ಮೂರು ತಲೆಮಾರಿನಿಂದ ಕಾಯಕವನ್ನಾಗಿಯೇ ಮಾಡುತ್ತಿರುವ ಬೀದರ್‌ನ ಕರಕುಶಲಕರ್ಮಿ ಶಾಂತಾಬಾಯಿ ಕಾಂಬಳೆ ಅವರಿಗೆ 2026ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ಮಹಿಳೆಯರು ತೊಡುವ ಕೈ ಬಳೆ, ಕೀ ಚೈನ್‌, ಲಾಕೆಟ್‌, ಐರಿಂಗ್ ಸೇರಿದಂತೆ ಇನ್ನಿತರ ವಸ್ತುಗಳನ್ನು ತಯಾರಿಸುತ್ತಾರೆ. ತಮ್ಮ ಮಾವ ರಾಮಚಂದ್ರರಾವ್‌, ಗಂಡ ಮೋಹನರಾವ ಅವರೊಂದಿಗೆ ಕಳೆದ 50 ವರ್ಷಗಳಿಂದ ಬಿದ್ರಿಯ ಕೆಲಸ ಮಾಡುತ್ತ ತನ್ನ ನಾಲ್ಕು ಗಂಡು ಹಾಗೂ ಮೂರು ಹೆಣ್ಣು ಮಕ್ಕಳ ಪಾಲನೆ ಮಾಡುತ್ತ ಜೀವನ ಸಾಗಿಸಿದ್ದಾರೆ.

ನನ್ನ ಗಂಡ ಹಾಗೂ ನಾಲ್ಕು ಗಂಡು ಮಕ್ಕಳು ಬಿದ್ರಿ ಕೆಲಸ ಮಾಡುತ್ತಾರೆ. ನಾನು ಕಳೆದ 50 ವರ್ಷದಿಂದ ಬಿದ್ರಿ ಕೆಲಸ ಮಾಡುತ್ತಿದ್ದೇನೆ. ಸರ್ಕಾರ ನಾನು ಮಾಡಿದ ಕೆಲಸ ನೋಡಿ ಪ್ರಶಸ್ತಿ ನೀಡಿದೆ. ನನ್ನ ಮಗನಿಗೆ ಸರ್ಕಾರದಿಂದ ಫೋನ್‌ ಬಂದಿತ್ತು. ನಾವು ನಾಳೆ ನಿಮ್ಮ ಮನೆಗೆ ಬರುತ್ತೇವೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ಹೇಳಿದ್ದಾರೆ ಎಂದು ಖುಷಿ ವ್ಯಕ್ತಪಡಿಸಿದರು ಶಾಂತಾಬಾಯಿ.