ಕರ್ನಾಟಕ ರಾಜ್ಯೋತ್ಸವ, ಶಂಕರ್‌ ನಾಗ್ ಹುಟ್ಟುಹಬ್ಬ

| Published : Nov 12 2025, 02:15 AM IST

ಕರ್ನಾಟಕ ರಾಜ್ಯೋತ್ಸವ, ಶಂಕರ್‌ ನಾಗ್ ಹುಟ್ಟುಹಬ್ಬ
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ಜೈ ಕರುನಾಡ ವೇದಿಕೆ ಜಿಲ್ಲಾ ಘಟಕ ಮತ್ತು ಶ್ರೀ ಕೃಷ್ಣ ಸಾರಥಿ ಆಟೋ ಟ್ಯಾಕ್ಸಿ ಚಾಲಕರು ಹಾಗೂ ಮಾಲೀಕರ ಸಂಘ, ಶ್ರೀ ಚೌಡೇಶ್ವರಿ ಆಟೋ ನಿಲ್ದಾಣದ ಗೆಳೆಯರ ಬಳಗದ ಸಹಯೋಗದೊಂದಿಗೆ ಭಾನುವಾರ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಹಿಂಭಾಗದಲ್ಲಿ 70ನೇ ವರ್ಷದ ಕನ್ನಡ ರಾಜ್ಯೋತ್ಸವ, ಕನ್ನಡ ಭುವನೇಶ್ವರಿಯ ಕಾರ್ತಿಕೋತ್ಸವ, ವಾಹನ ಚಾಲಕರ ದಿನಾಚರಣೆ, ಕರಾಟೆ ಕಿಂಗ್ ದಿ: ಶಂಕರ್ ನಾಗ್ ಜನ್ಮದಿನ ಆಚರಿಸಲಾಯಿತು.

ದಾವಣಗೆರೆ: ನಗರದ ಜೈ ಕರುನಾಡ ವೇದಿಕೆ ಜಿಲ್ಲಾ ಘಟಕ ಮತ್ತು ಶ್ರೀ ಕೃಷ್ಣ ಸಾರಥಿ ಆಟೋ ಟ್ಯಾಕ್ಸಿ ಚಾಲಕರು ಹಾಗೂ ಮಾಲೀಕರ ಸಂಘ, ಶ್ರೀ ಚೌಡೇಶ್ವರಿ ಆಟೋ ನಿಲ್ದಾಣದ ಗೆಳೆಯರ ಬಳಗದ ಸಹಯೋಗದೊಂದಿಗೆ ಭಾನುವಾರ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಹಿಂಭಾಗದಲ್ಲಿ 70ನೇ ವರ್ಷದ ಕನ್ನಡ ರಾಜ್ಯೋತ್ಸವ, ಕನ್ನಡ ಭುವನೇಶ್ವರಿಯ ಕಾರ್ತಿಕೋತ್ಸವ, ವಾಹನ ಚಾಲಕರ ದಿನಾಚರಣೆ, ಕರಾಟೆ ಕಿಂಗ್ ದಿ: ಶಂಕರ್ ನಾಗ್ ಜನ್ಮದಿನ ಆಚರಿಸಲಾಯಿತು.

ಆಟೋ ಮೇಲೆ ಶಂಕರ್ ನಾಗ್ ಭಾವಚಿತ್ರವನ್ನಿಟ್ಟು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ವೇದಿಕೆ ಜಿಲ್ಲಾಧ್ಯಕ್ಷ ಎಚ್.ಪರಶುರಾಮ್ ನಂದಿಗಾವಿ, ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಬಾಳೆಕಾಯಿ, ಸಂಘಟನಾ ಕಾರ್ಯದರ್ಶಿ ಪಂಚಾಕ್ಷರಿ, ಸಂಚಾಲಕ ಸಂತೋಷ್ ಅರಗಿಣಿ, ಉಪಾಧ್ಯಕ್ಷ ನಾಗಭೂಷಣ, ಆಟೋ ನಿಲ್ದಾಣದ ಅಧ್ಯಕ್ಷ ಬಿ.ಮಂಜುನಾಥ, ಗೌರವಾಧ್ಯಕ್ಷ ಬಿ.ಆರ್.ಉಮೇಶ್, ಉಪಾಧ್ಯಕ್ಷ ನಂದಕುಮಾರ, ಸದಸ್ಯರಾದ ವಿಜಯ ಕುಮಾರ, ಫಕಿರೇಶ್, ಗಿರೀಶ, ಮುಕುಂದ, ತಾರಕೇಶವ, ಶರಣಪ್ಪ, ಪ್ರವೀಣ, ಸಂತೋಷ್, ವಾಸು, ಆಟೋ ನಿಲ್ದಾಣದ ಚಾಲಕರು ಉಪಸ್ಥಿತರಿದ್ದರು.

- - -

-10ಕೆಡಿವಿಜಿ32: